AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Saif Ali Khan: ‘ಆದಿಪುರುಷ್​’ ಚಿತ್ರದ ಪ್ರಚಾರದಿಂದ ದೂರ ಉಳಿದುಕೊಂಡ ಸೈಫ್​ ಅಲಿ ಖಾನ್​; ಈ ನಿರ್ಧಾರಕ್ಕೆ ಕಾರಣ ಏನು?

Adipurush Movie: ಎಲ್ಲರಿಗೂ ತಿಳಿದಿರುವಂತೆ ಇದು ರಾಮಾಯಣದ ಕಥೆ ಆಧಾರಿತ ಸಿನಿಮಾ. ಎಲ್ಲ ವೇದಿಕೆಯಲ್ಲೂ ‘ಜೈ ಶ್ರೀರಾಮ್​’ ಎಂದು ಪ್ರಚಾರ ಮಾಡಲಾಗುತ್ತಿದೆ.

Saif Ali Khan: ‘ಆದಿಪುರುಷ್​’ ಚಿತ್ರದ ಪ್ರಚಾರದಿಂದ ದೂರ ಉಳಿದುಕೊಂಡ ಸೈಫ್​ ಅಲಿ ಖಾನ್​; ಈ ನಿರ್ಧಾರಕ್ಕೆ ಕಾರಣ ಏನು?
ಸೈಫ್​ ಅಲಿ ಖಾನ್​
ಮದನ್​ ಕುಮಾರ್​
|

Updated on: Jun 11, 2023 | 10:14 AM

Share

ನಟ ಸೈಫ್​ ಅಲಿ ಖಾನ್​ ಅವರು ಬಾಲಿವುಡ್​ನಲ್ಲಿ ಬಹುಬೇಡಿಕೆಯ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ಈಗಾಗಲೇ ಅನೇಕ ಬಗೆಯ ಪಾತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ಈಗ ಬಿಡುಗಡೆಗೆ ಸಜ್ಜಾಗಿರುವ ‘ಆದಿಪುರುಷ್​’ (Adipurush) ಸಿನಿಮಾದಲ್ಲಿ ಅವರಿಗೆ ರಾವಣನ ಪಾತ್ರ ನೀಡಲಾಗಿದೆ. ರಾಮನಾಗಿ ಪ್ರಭಾಸ್​ (Prabhas) ಅಭಿನಯಿಸಿದ್ದಾರೆ. ಸೀತೆ ಪಾತ್ರದಲ್ಲಿ ಕೃತಿ ಸನೋನ್​, ಲಕ್ಷ್ಮಣನಾಗಿ ಸನ್ನಿ ಸಿಂಗ್​, ಆಂಜನೇಯನ ಪಾತ್ರದಲ್ಲಿ ದೇವದತ್ತ ನಾಗೆ ನಟಿಸಿದ್ದಾರೆ. ಎಲ್ಲರೂ ವಿವಿಧ ನಗರಗಳಿಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಸೈಫ್​ ಅಲಿ ಖಾನ್​ (Saif Ali Khan) ಮಾತ್ರ ಪ್ರಚಾರದಿಂದ ದೂರ ಉಳಿದುಕೊಂಡಿದ್ದಾರೆ. ಯಾಕೆ ಹೀಗೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಸೋಶಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ಹಲವು ಬಗೆಯ ಚರ್ಚೆ ನಡೆಯುತ್ತಿದೆ.

ಸೈಫ್​ ಅಲಿ ಖಾನ್​ ಕುರಿತಂತೆ ಈಗಾಗಲೇ ಅನೇಕ ವಿವಾದಗಳು ಆಗಿವೆ. ಯಾವುದೇ ಸಿನಿಮಾದ ಬಿಡುಗಡೆ ಸಂದರ್ಭದಲ್ಲಿ ವಿವಾದ ಭುಗಿಲೆದ್ದರೆ ಚಿತ್ರದ ಬಾಕ್ಸ್​ ಆಫೀಸ್​ ಕಲೆಕ್ಷನ್​ ಮೇಲೆ ಪೆಟ್ಟು ಬೀಳುತ್ತದೆ. ಕೆಲವು ಸಂದರ್ಶನಗಳಲ್ಲಿ ಸೈಫ್​ ಅಲಿ ಖಾನ್​ ಅವರು ನೇರವಾಗಿ ಮಾತನಾಡಿದ್ದುಂಟು. ಅದನ್ನು ಎಲ್ಲರೂ ಮುಕ್ತವಾಗಿ ಸ್ವೀಕರಿಸುವುದಿಲ್ಲ. ‘ಆದಿಪುರುಷ್​’ ವಿಚಾರದಲ್ಲಿ ಆ ಕಿರಿಕ್​ ಬೇಡಬೇ ಬೇಡ ಎಂಬ ಕಾರಣಕ್ಕೆ ಅವರು ಚಿತ್ರದ ಪ್ರಚಾರ ಕಾರ್ಯದಿಂದ ದೂರ ಉಳಿದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Saif Ali Khan: ರಾವಣನ ಗೆಟಪ್​ನಲ್ಲಿ ಅಂದು ಟ್ರೋಲ್​ ಆಗಿದ್ದ ಸೈಫ್​ ಅಲಿ ಖಾನ್​ ಈಗ ಹೇಗೆ ಕಾಣ್ತಿದ್ದಾರೆ ನೋಡಿ..

ಎಲ್ಲರಿಗೂ ತಿಳಿದಿರುವಂತೆ ಇದು ರಾಮಾಯಣದ ಕಥೆ ಆಧಾರಿತ ಸಿನಿಮಾ. ಎಲ್ಲ ವೇದಿಕೆಯಲ್ಲೂ ‘ಜೈ ಶ್ರೀರಾಮ್​’ ಎಂದು ಪ್ರಚಾರ ಮಾಡಲಾಗುತ್ತಿದೆ. ಇಡೀ ಚಿತ್ರತಂಡವೇ ರಾಮನಿಗೆ ಜೈಕಾರ ಹಾಕುವಾಗ ಸೈಫ್​ ಅಲಿ ಖಾನ್​ ಮಾತ್ರ ಸುಮ್ಮನಿದ್ದರೆ ಅದು ಖಂಡಿತಾ ಟ್ರೋಲ್​ ಆಗುತ್ತದೆ. ಇಂಥ ಮುಜುಗರದ ಸಂಗತಿಗಳನ್ನು ತಪ್ಪಿಸುವ ಸಲುವಾಗಿ ಸೈಫ್​ ಅಲಿ ಖಾನ್​ ಅವರು ಚಿತ್ರದ ಪ್ರೊಮೋಷನ್​ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂದು ಕೂಡ ಊಹಿಸಲಾಗುತ್ತಿದೆ.

ಇದನ್ನೂ ಓದಿ: Ibrahim Ali Khan: ಸದ್ದಿಲ್ಲದೇ ಮೊದಲ ಚಿತ್ರದ ಶೂಟಿಂಗ್​ ಮುಗಿಸಿದ ಸೈಫ್​ ಅಲಿ ಖಾನ್​ ಮಗ; ಗುಟ್ಟು​ ಬಹಿರಂಗ ಮಾಡಿದ ಸಾರಾ

‘ಆದಿಪುರುಷ್​’ ಸಿನಿಮಾ ಜೂನ್​ 16ರಂದು ಬಿಡುಗಡೆ ಆಗಲಿದೆ. ಈ ಮೊದಲು ‘ಆದಿಪುರುಷ್​’ ಟೀಸರ್​ ಬಿಡುಗಡೆ ಆದಾಗ ರಾವಣನ ಪಾತ್ರ ಮಾಡಿದ ಸೈಫ್​ ಅಲಿ ಖಾನ್​ ಅವರ ಗೆಟಪ್​ ನೋಡಿ ನೆಟ್ಟಿಗರು ಟ್ರೋಲ್​ ಮಾಡಿದ್ದರು. ಹಾಗಾಗಿ ನಿರ್ದೇಶಕರು ಕೆಲವು ಬದಲಾವಣೆ ಮಾಡುವುದು ಅನಿವಾರ್ಯ ಆಯಿತು. ಇತ್ತೀಚೆಗೆ ಇದರ ಹೊಸ ಟ್ರೇಲರ್​ ಬಿಡುಗಡೆ ಮಾಡಲಾಯಿತು. ಇದರಲ್ಲಿ ಸೈಫ್​ ಅಲಿ ಖಾನ್​ ಅವರ ಗೆಟಪ್​ ಗಮನ ಸೆಳೆದಿದೆ. ಸೀತೆಯನ್ನು ರಾವಣ ಅಪಹರಿಸುವ ದೃಶ್ಯ ಈ ಟ್ರೇಲರ್​ನಲ್ಲಿ ಹೈಲೈಟ್​ ಆಗಿದೆ. ಆ ಮೂಲಕ ನಿರೀಕ್ಷೆ ಹೆಚ್ಚಿದೆ. ಬದಲಾದ ವೇಷದಲ್ಲಿ ಸೈಫ್​ ಅಲಿ ಖಾನ್​ ಅವರನ್ನು ನೋಡಿದ ಪ್ರೇಕ್ಷಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಒಟ್ಟಾರೆಯಾಗಿ ರಾವಣನ ಪಾತ್ರ ಹೇಗೆ ಮೂಡಿಬಂದಿದೆ ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು. ಅದಕ್ಕಾಗಿ ಫ್ಯಾನ್ಸ್​ ಕಾದಿದ್ದಾರೆ.

ಇದನ್ನೂ ಓದಿ: ‘ಹೃದಯಂ’ ರಿಮೇಕ್​ನಲ್ಲಿ ಸೈಫ್​ ಅಲಿ ಖಾನ್​ ಮಗ ಇಬ್ರಾಹಿಂ? ಲಾಂಚ್​ ಮಾಡ್ತಾರೆ ಕರಣ್​ ಜೋಹರ್​

ಜನರಿಗೆ ಮತ್ತು ಸೆಲೆಬ್ರಿಟಿಗಳಿಗೆ ಈ ಸಿನಿಮಾ ಮೇಲೆ ವಿಶೇಷವಾದ ಭಾವನೆ ಮೂಡಿದೆ. ಕೆಲವು ಸೆಲೆಬ್ರಿಟಿಗಳು ಸಾವಿರಾರು ಟಿಕೆಟ್​ಗಳನ್ನು ಖರೀದಿಸಿ, ಅವುಗಳನ್ನು ಬಡಮಕ್ಕಳಿಗೆ ಉಚಿತವಾಗಿ ಹಂಚಲು ಮುಂದಾಗಿದ್ದಾರೆ. ನಟ ರಣಬೀರ್​ ಕಪೂರ್​ ಅವರು ಬರೋಬ್ಬರಿ 10 ಸಾವಿರ ಟಿಕೆಟ್​ಗಳನ್ನು ಉಚಿತವಾಗಿ ನೀಡಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ‘ದಿ ಕಾಶ್ಮೀರ್ ಫೈಲ್ಸ್​’ ಚಿತ್ರದ ನಿರ್ಮಾಪಕ ಅಭಿಷೇಕ್ ಅಗರ್​ವಾಲ್ ಅವರು ‘ಆದಿಪುರುಷ್​’ ಚಿತ್ರದ 10 ಸಾವಿರ ಟಿಕೆಟ್​ಗಳನ್ನು ಉಚಿತವಾಗಿ ಹಂಚಲು ಮುಂದಾಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಅಖಾಡಕ್ಕಿಳಿದ ವಾಟಾಳ್ ನಾಗರಾಜ್, ಬಿಎಂಆರ್​​ಸಿಎಲ್​​​ಗೆ ಡೆಡ್​​ಲೈನ್
ಅಖಾಡಕ್ಕಿಳಿದ ವಾಟಾಳ್ ನಾಗರಾಜ್, ಬಿಎಂಆರ್​​ಸಿಎಲ್​​​ಗೆ ಡೆಡ್​​ಲೈನ್
ಕೆಎಲ್ ರಾಹುಲ್ 25ನೇ ಶತಕದ ಇನ್ನಿಂಗ್ಸ್​ನ ಝಲಕ್ ಇಲ್ಲಿದೆ
ಕೆಎಲ್ ರಾಹುಲ್ 25ನೇ ಶತಕದ ಇನ್ನಿಂಗ್ಸ್​ನ ಝಲಕ್ ಇಲ್ಲಿದೆ
ಬಜೆಟ್ ಪೂರ್ವಭಾವಿ ಸಭೆ ಬಿಟ್ಟು ದೆಹಲಿ ಪ್ರವಾಸ: ಡಿಕೆಶಿ ನಡೆಯೇ ಕುತೂಹಲ
ಬಜೆಟ್ ಪೂರ್ವಭಾವಿ ಸಭೆ ಬಿಟ್ಟು ದೆಹಲಿ ಪ್ರವಾಸ: ಡಿಕೆಶಿ ನಡೆಯೇ ಕುತೂಹಲ
3 ಮಾದರಿಯ ಸರಣಿಗಾಗಿ ಆಸ್ಟ್ರೇಲಿಯಾ ತಲುಪಿದ ಟೀಂ ಇಂಡಿಯಾ
3 ಮಾದರಿಯ ಸರಣಿಗಾಗಿ ಆಸ್ಟ್ರೇಲಿಯಾ ತಲುಪಿದ ಟೀಂ ಇಂಡಿಯಾ
SC ST ಸಮುದಾಯದವರಿಗೆ ಸೈಟ್: ಸತೀಶ್ ಜಾರಕಿಹೊಳಿ ಮಹತ್ವದ ಘೋಷಣೆ
SC ST ಸಮುದಾಯದವರಿಗೆ ಸೈಟ್: ಸತೀಶ್ ಜಾರಕಿಹೊಳಿ ಮಹತ್ವದ ಘೋಷಣೆ
ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಅಸಮಾಧಾನ ಸ್ಫೋಟ: ಪ್ರೀತಂಗೆ ನಿಖಿಲ್ ಕೌಂಟರ್
ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಅಸಮಾಧಾನ ಸ್ಫೋಟ: ಪ್ರೀತಂಗೆ ನಿಖಿಲ್ ಕೌಂಟರ್
ಗಂಡ 12 ಸಾವಿರದ ಬಟ್ಟೆ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ ಪತ್ನಿ
ಗಂಡ 12 ಸಾವಿರದ ಬಟ್ಟೆ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ ಪತ್ನಿ
ಬೆಂಗಳೂರಲ್ಲಿ ಬಿಎಂಟಿಸಿಯಿಂದ ಮತ್ತೊಂದು ಡೆಡ್ಲಿ ಆ್ಯಕ್ಸಿಡೆಂಟ್!
ಬೆಂಗಳೂರಲ್ಲಿ ಬಿಎಂಟಿಸಿಯಿಂದ ಮತ್ತೊಂದು ಡೆಡ್ಲಿ ಆ್ಯಕ್ಸಿಡೆಂಟ್!
‘ನನ್ನನ್ನು ಹಾಗೆ ಕರೀ ಬೇಡಿ ಪ್ಲೀಸ್’; ಎಲ್ಲರ ಎದುರು ಕೋರಿಕೊಂಡ ಗಿಲ್ಲಿ ನಟ
‘ನನ್ನನ್ನು ಹಾಗೆ ಕರೀ ಬೇಡಿ ಪ್ಲೀಸ್’; ಎಲ್ಲರ ಎದುರು ಕೋರಿಕೊಂಡ ಗಿಲ್ಲಿ ನಟ
ಮೋದಿ ವಿರುದ್ಧ ಕಾಂಗ್ರೆಸ್ ಫ್ಲೆಕ್ಸ್: ಪೊಲೀಸ್ ದೂರು ದಾಖಲಿಸಿದ ಬಿಜೆಪಿ
ಮೋದಿ ವಿರುದ್ಧ ಕಾಂಗ್ರೆಸ್ ಫ್ಲೆಕ್ಸ್: ಪೊಲೀಸ್ ದೂರು ದಾಖಲಿಸಿದ ಬಿಜೆಪಿ