- Kannada News Photo gallery Saif Ali Khan new getup as Ravana in Adipurush 2nd trailer becomes talk of the town
Saif Ali Khan: ರಾವಣನ ಗೆಟಪ್ನಲ್ಲಿ ಅಂದು ಟ್ರೋಲ್ ಆಗಿದ್ದ ಸೈಫ್ ಅಲಿ ಖಾನ್ ಈಗ ಹೇಗೆ ಕಾಣ್ತಿದ್ದಾರೆ ನೋಡಿ..
Adipurush Movie: ಸೈಫ್ ಅಲಿ ಖಾನ್ ಅವರು ‘ಆದಿಪುರುಷ್’ ಚಿತ್ರದಲ್ಲಿ ನಟಿಸಿದ್ದರೂ ಕೂಡ ಅವರು ಪ್ರಚಾರದಿಂದ ದೂರ ಉಳಿದುಕೊಂಡಿದ್ದಾರೆ. ರಾವಣನ ವೇಷದಲ್ಲಿ ಅವರು ಗಮನ ಸೆಳೆಯುತ್ತಿದ್ದಾರೆ.
Updated on: Jun 08, 2023 | 7:00 AM

ಬಹುನಿರೀಕ್ಷಿತ ‘ಆದಿಪುರುಷ್’ ಸಿನಿಮಾ ಜೂನ್ 16ರಂದು ಬಿಡುಗಡೆ ಆಗಲಿದೆ. ರಾಮಾಯಣದ ಕಥೆ ಆಧರಿಸಿದ ಈ ಚಿತ್ರದಲ್ಲಿ ಸೈಫ್ ಅಲಿ ಖಾನ್ ಅವರು ರಾವಣನ ಪಾತ್ರ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ರಿಲೀಸ್ ಆಗಲಿದೆ.

ಈ ಮೊದಲು ‘ಆದಿಪುರುಷ್’ ಟೀಸರ್ ಬಿಡುಗಡೆ ಆದಾಗ ರಾವಣನ ಪಾತ್ರ ಮಾಡಿದ ಸೈಫ್ ಅಲಿ ಖಾನ್ ಅವರ ಗೆಟಪ್ ನೋಡಿ ನೆಟ್ಟಿಗರು ಟ್ರೋಲ್ ಮಾಡಿದ್ದರು. ಹಾಗಾಗಿ ನಿರ್ದೇಶಕರು ಕೆಲವು ಬದಲಾವಣೆ ಮಾಡುವುದು ಅನಿವಾರ್ಯ ಆಯಿತು.

ಈಗ ‘ಆದಿಪುರುಷ್’ ಸಿನಿಮಾದಿಂದ 2ನೇ ಟ್ರೇಲರ್ ರಿಲೀಸ್ ಮಾಡಲಾಗಿದೆ. ಇದರಲ್ಲಿ ಸೈಫ್ ಅಲಿ ಖಾನ್ ಅವರ ಗೆಟಪ್ ಗಮನ ಸೆಳೆದಿದೆ. ಸೀತೆಯನ್ನು ರಾವಣ ಅಪಹರಿಸುವ ದೃಶ್ಯ ಈ ಟ್ರೇಲರ್ನಲ್ಲಿ ಹೈಲೈಟ್ ಆಗಿದೆ. ಆ ಮೂಲಕ ನಿರೀಕ್ಷೆ ಹೆಚ್ಚಿದೆ.

ಬದಲಾದ ವೇಷದಲ್ಲಿ ಸೈಫ್ ಅಲಿ ಖಾನ್ ಅವರನ್ನು ನೋಡಿದ ಪ್ರೇಕ್ಷಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಒಟ್ಟಾರೆಯಾಗಿ ರಾವಣನ ಪಾತ್ರ ಹೇಗೆ ಮೂಡಿಬಂದಿದೆ ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು. ಅದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.

ಈ ಸಿನಿಮಾದಲ್ಲಿ ನಟ ಪ್ರಭಾಸ್ ಅವರು ರಾಮನ ಪಾತ್ರ ಮಾಡಿದ್ದಾರೆ. ಸೀತೆಯಾಗಿ ಕೃತಿ ಸನೋನ್ ಅವರು ನಟಿಸಿದ್ದಾರೆ. ಆಂಜನೇಯನ ಪಾತ್ರದಲ್ಲಿ ದೇವದತ್ತ ನಾಗೆ ಅಭಿನಯಿಸಿದ್ದಾರೆ. 3ಡಿ ವರ್ಷನ್ನಲ್ಲಿ ಈ ಸಿನಿಮಾ ಪ್ರದರ್ಶನ ಕಾಣಲಿದೆ.




