- Kannada News Photo gallery Kannada News | Saif Ali Khan son Ibrahim Ali Khan completes his debut movie shooting
Ibrahim Ali Khan: ಸದ್ದಿಲ್ಲದೇ ಮೊದಲ ಚಿತ್ರದ ಶೂಟಿಂಗ್ ಮುಗಿಸಿದ ಸೈಫ್ ಅಲಿ ಖಾನ್ ಮಗ; ಗುಟ್ಟು ಬಹಿರಂಗ ಮಾಡಿದ ಸಾರಾ
Sara Ali Khan: ಹೀರೋ ಆಗಿ ಎಂಟ್ರಿ ನೀಡಲು ಇಬ್ರಾಹಿಂ ಅಲಿ ಖಾನ್ ಸಜ್ಜಾಗಿದ್ದಾರೆ. ನಟನೆ ಮಾತ್ರವಲ್ಲದೇ ತೆರೆಹಿಂದಿನ ವಿಷಯಗಳನ್ನು ಕಲಿಯುವಲ್ಲಿಯೂ ಅವರು ಆಸಕ್ತಿ ಹೊಂದಿದ್ದಾರೆ.
Updated on: May 21, 2023 | 1:32 PM

ಸೈಫ್ ಅಲಿ ಖಾನ್ ಅವರ ಇಡೀ ಕುಟುಂಬವೇ ಚಿತ್ರರಂಗದಲ್ಲಿ ಸಕ್ರಿಯವಾಗಿದೆ. ಅವರ ಮಗಳು ಸಾರಾ ಅಲಿ ಖಾನ್ ಈಗಾಗಲೇ ಹೀರೋಯಿನ್ ಆಗಿ ಗುರುತಿಸಿಕೊಂಡಿದ್ದಾರೆ. ಹಲವು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

ಈಗ ಸೈಫ್ ಅಲಿ ಖಾನ್ ಅವರ ಪುತ್ರ ಇಬ್ರಾಹಿಂ ಅಲಿ ಖಾನ್ ಅವರು ಕೂಡ ಚಿತ್ರತಂಡಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಅಚ್ಚರಿ ಎಂದರೆ ಅವರ ಮೊದಲ ಚಿತ್ರದ ಶೂಟಿಂಗ್ ಸದ್ದಿಲ್ಲದೇ ಮುಗಿದಿದೆ.

ಸಾರಾ ಅಲಿ ಖಾನ್ ಅವರು ಇತ್ತೀಚೆಗೆ ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗಿ ಆಗಿದ್ದರು. ಈ ಕುರಿತು ನೀಡಿದ ಸಂದರ್ಶನದಲ್ಲಿ ಅವರು ಸಹೋದರನ ಮೊದಲ ಸಿನಿಮಾದ ಚಿತ್ರೀಕರಣ ಮುಗಿದಿದೆ ಎಂಬ ವಿಷಯ ಬಾಯಿ ಬಿಟ್ಟಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಇಬ್ರಾಹಿಂ ಅಲಿ ಖಾನ್ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಜಾಸ್ತಿ ಆಗಿದೆ. ಮುಂಬೈನಲ್ಲಿ ಸೆಲೆಬ್ರಿಟಿಗಳ ಮಕ್ಕಳೆಲ್ಲ ಪಾರ್ಟಿ ಮಾಡಿದಾಗ ಅವರು ಕೂಡ ಹಾಜರಿ ಹಾಕುತ್ತಾರೆ.

ನಟನೆ ಮಾತ್ರವಲ್ಲದೇ ತೆರೆಹಿಂದಿನ ವಿಷಯಗಳನ್ನು ಕಲಿಯುವಲ್ಲಿಯೂ ಇಬ್ರಾಹಿಂ ಅಲಿ ಖಾನ್ ಅವರು ಆಸಕ್ತಿ ಹೊಂದಿದ್ದಾರೆ. ಕರಣ್ ಜೋಹರ್ ನಿರ್ದೇಶನದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರಕ್ಕೆ ಅವರು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ.




