‘ಈಗ ಅಧಿಕೃತ’; ನಟ ಸಿದ್ದಾರ್ಥ್ ಜೊತೆ ಹೊಸ ವರ್ಷ ಆಚರಿಸಿಕೊಂಡ ಅದಿತಿ

|

Updated on: Jan 03, 2024 | 6:36 AM

‘ಮಹಾ ಸಮುದ್ರಂ’ ಸಿನಿಮಾ ಸೆಟ್​ನಲ್ಲಿ ಅದಿತಿ ಹಾಗೂ ಸಿದ್ದಾರ್ಥ್ ಭೇಟಿ ಆದರು. ಆ ಬಳಿಕ ಇಬ್ಬರ ಮಧ್ಯೆ ಒಳ್ಳೆಯ ಗೆಳೆತನ ಬೆಳೆಯಿತು. ಈ ಗೆಳೆತನ ಪ್ರೀತಿ ಆಗಿ ಬದಲಾಗಿದೆ.

‘ಈಗ ಅಧಿಕೃತ’; ನಟ ಸಿದ್ದಾರ್ಥ್ ಜೊತೆ ಹೊಸ ವರ್ಷ ಆಚರಿಸಿಕೊಂಡ ಅದಿತಿ
ಅದಿತಿ-ಸಿದ್ದಾರ್ಥ್
Follow us on

ನಟಿ ಅದಿತಿ ರಾವ್ ಹೈದರಿ (Aditi Rao Hydari) ಹಾಗೂ ನಟ ಸಿದ್ದಾರ್ಥ್ ಮೊದಲಿನಿಂದಲೂ ಡೇಟಿಂಗ್ ನಡೆಸುತ್ತಿದ್ದಾರೆ. ಆದರೆ, ಈ ವಿಚಾರವನ್ನು ಇವರು ನೇರವಾಗಿ ಒಪ್ಪಿಕೊಂಡಿಲ್ಲ. ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಇವರು ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾ ಇರುತ್ತಾರೆ. ಸಿದ್ದಾರ್ಥ್ ಸಿನಿಮಾ ರಿಲೀಸ್ ಆದರೆ ಅದಿತಿ ಬೆಂಬಲ ನೀಡುತ್ತಾರೆ. ಅದಿತಿ ಸಿನಿಮಾ ರಿಲೀಸ್ ಆಗುವ ಸಂದರ್ಭದಲ್ಲಿ ಸಿದ್ದಾರ್ಥ್ ಅವರು ಸಪೋರ್ಟ್ ಮಾಡುತ್ತಾರೆ. ಈಗ ಇಬ್ಬರೂ ಹೊಸ ವರ್ಷವನ್ನು ಒಟ್ಟಾಗಿ ಸ್ವಾಗತಿಸಿದ್ದಾರೆ. ಹಾಗಂತ ಗಾಸಿಪ್ ಮಂದಿ ಹೇಳುತ್ತಿರುವುದಲ್ಲ. ಸ್ವತಃ ಅದಿತಿ ರಾವ್ ಹೈದರಿ ಅವರು ಫೋಟೋ ಹಂಚಿಕೊಂಡಿದ್ದಾರೆ. ‘ಹಾಗಿದ್ದರೆ ಈಗ ನಿಮ್ಮ ಸಂಬಂಧ ಅಧಿಕೃತ ಆದಂತಾಯಿತು’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಸಿದ್ದಾರ್ಥ್ ಹಾಗೂ ಅದಿತಿ ಅವರು ಹಲವು ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ಅದಿತಿ ಬರ್ತ್​​ಡೇಗೆ ಸಾಕಷ್ಟು ಪ್ರೀತಿಯಿಂದ ಸಿದ್ದಾರ್ಥ್ ವಿಶ್ ಮಾಡಿದ್ದಿದೆ. ಅದಿತಿ ಅವರು ಕೂಡ ಸಿದ್ದಾರ್ಥ್​ ಜನ್ಮದಿನಕ್ಕೆ ಶುಭಾಶಯ ಕೋರಿದ್ದರು. ಈಗ ಇಬ್ಬರೂ ಒಟ್ಟಿಗೆ ಫೋಟೋ ಹಾಕುವ ಮೂಲಕ ಫ್ಯಾನ್ಸ್​ಗೆ ಸರ್​ಪ್ರೈಸ್ ನೀಡಿದ್ದಾರೆ. ಸಿದ್ದಾರ್ಥ್ ಹಾಗೂ ಅದಿತಿ ವಿದೇಶದಲ್ಲಿ ಸಮಯ ಕಳೆಯುತ್ತಿದ್ದಾರೆ. ಅಲ್ಲಿಂದಲೇ ಹೊಸ ವರ್ಷದ ಶುಭಾಶಯ ಕೋರಿದ್ದಾರೆ.

‘ಮಹಾ ಸಮುದ್ರಂ’ ಸಿನಿಮಾ ಸೆಟ್​ನಲ್ಲಿ ಅದಿತಿ ಹಾಗೂ ಸಿದ್ದಾರ್ಥ್ ಭೇಟಿ ಆದರು. ಆ ಬಳಿಕ ಇಬ್ಬರ ಮಧ್ಯೆ ಒಳ್ಳೆಯ ಗೆಳೆತನ ಬೆಳೆಯಿತು. ಈ ಗೆಳೆತನ ಪ್ರೀತಿ ಆಗಿ ಬದಲಾಗಿದೆ. ಅವರು ಶೀಘ್ರವೇ ಮದುವೆ ಆಗಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ. 2024ರಲ್ಲಿ ಇವರ ಮದುವೆ ನಡೆಯಲಿದೆಯೇ ಎನ್ನುವ ಕುತೂಹಲ ಮೂಡಿದೆ.

ಇದನ್ನೂ ಓದಿ: ಟ್ರೆಡಿಷನಲ್ ಲುಕ್​ನಲ್ಲಿ ಗಮನ ಸೆಳೆದ ನಟಿ ಅದಿತಿ ರಾವ್ ಹೈದರಿ; ಇಲ್ಲಿವೆ ಫೋಟೋಸ್

ಸಿದ್ದಾರ್ಥ್ ಅವರು ‘ಟೆಸ್ಟ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಅದಿತಿ ರಾವ್ ಹೈದರಿ ಅವರು ‘ಗಾಂಧಿ ಟಾಕ್ಸ್​’ ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಹೊಸ ವರ್ಷದ ಪ್ರಯುಕ್ತ ಇಬ್ಬರೂ ಸಿನಿಮಾ ಕೆಲಸಗಳಿಗೆ ಬ್ರೇಕ್ ಕೊಟ್ಟು ವಿದೇಶ ಪ್ರಯಾಣ ಮಾಡಿದ್ದಾರೆ. ಶೀಘ್ರವೇ ಅವರು ಭಾರತಕ್ಕೆ ಮರಳಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ