ಪವನ್ ಕಲ್ಯಾಣ್​ಗೆ ತುಚ್ಛ ಪದ ಬಳಸಿದ್ದ ಪೋಸಾನಿ ಕೃಷ್ಣ ಸಿನಿಮಾ ಬದುಕು ಅಂತ್ಯ?

ವೈಎಸ್​ಆರ್​ಸಿಪಿ ಸೇರಿದ ಬಳಿಕ ಪೋಸಾನಿಗೆ ಕೆಟ್ಟ ಹೆಸರು ಬಂತು. ಅವರು ಚಂದ್ರಬಾಬು ನಾಯ್ಡು ವಿರುದ್ಧ ಕೆಟ್ಟದಾಗಿ ಮಾತನಾಡಿದರು. ಸಮಯ ಕಳೆದಂತೆ ಅವರು ಚಿರಂಜೀವಿಯನ್ನು ಟೀಕಿಸಿದರು. ಒಂದು ಹಂತದಲ್ಲಿ ಪೋಸಾನಿ ಕೃಷ್ಣ ಅವರಿಗೆ ಸಿನಿಮಾ ರಂಗದಲ್ಲಿ ಆಫರ್​ಗಳೇ ಇಲ್ಲದಂತೆ ಆಯಿತು.

ಪವನ್ ಕಲ್ಯಾಣ್​ಗೆ ತುಚ್ಛ ಪದ ಬಳಸಿದ್ದ ಪೋಸಾನಿ ಕೃಷ್ಣ ಸಿನಿಮಾ ಬದುಕು ಅಂತ್ಯ?
ಪವನ್-ಪೋಸಾನಿ

Updated on: Jun 07, 2024 | 10:54 AM

ಪೋಸಾನಿ ಕೃಷ್ಣ (Posani Krishna) ಟಾಲಿವುಡ್​ನಲ್ಲಿ ಸಾಕಷ್ಟು ಖ್ಯಾತಿ ಪಡೆದಿದ್ದರು. ಹಾಸ್ಯ ನಟನಾಗಿ, ವಿಲನ್ ಆಗಿ ಗಮನ ಸೆಳೆದಿದ್ದರು. ಆದರೆ, ಅವರು ರಾಜಕೀಯಕ್ಕೆ ಬಂದು ಹೆಸರು ಹಾಳು ಮಾಡಿಕೊಂಡರು. ಆರಂಭದಲ್ಲಿ ಅವರು ಪ್ರಜಾ ರಾಜ್ಯಂ ಪಕ್ಷದಲ್ಲಿ ಇದ್ದರು. ಅಲ್ಲಿ ಚುನಾವಣೆಗೆ ನಿಂತು ಸೋತರು. ನಂತರ ಅವರು ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ವೈಎಸ್​ಆರ್​ಸಿಪಿ ಸೇರಿದರು. ಅಲ್ಲಿಂದ ಅವರು ಹಾದಿ ತಪ್ಪಿದರು. ಈಗ ನಾರಾ ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್ ಅಧಿಕಾರಕ್ಕೆ ಬಂದಿದ್ದು ಪೋಸಾನಿ ಕೃಷ್ಣ ವೃತ್ತಿ ಜೀವನ ಕೊನೆ ಆಗಲಿದೆ ಎನ್ನಲಾಗುತ್ತಿದೆ.

ವೈಎಸ್​ಆರ್​ಸಿಪಿ ಸೇರಿದ ಬಳಿಕ ಪೋಸಾನಿಗೆ ಕೆಟ್ಟ ಹೆಸರು ಬಂತು. ಅವರು ಚಂದ್ರಬಾಬು ನಾಯ್ಡು ವಿರುದ್ಧ ಕೆಟ್ಟದಾಗಿ ಮಾತನಾಡಿದರು. ಸಮಯ ಕಳೆದಂತೆ ಅವರು ಚಿರಂಜೀವಿಯನ್ನು ಟೀಕಿಸಿದರು. ಒಂದು ಹಂತದಲ್ಲಿ ಪೋಸಾನಿ ಕೃಷ್ಣ ಅವರಿಗೆ ಸಿನಿಮಾ ರಂಗದಲ್ಲಿ ಆಫರ್​ಗಳೇ ಇಲ್ಲದಂತೆ ಆಯಿತು. ಆ ಬಳಿಕ ಪೋಸಾನಿ ಕೃಷ್ಣ ಅವರು ಪವನ್ ಕಲ್ಯಾಣ್​ನ ಟೀಕಿಸಲು ಆರಂಭಿಸಿದರು. ಅವರ ವಿರುದ್ಧ ತುಚ್ಛ ಹಾಗೂ ಅಶ್ಲೀಲ ಪದ ಬಳಕೆ ಮಾಡಿದರು.

ಪವನ್​ ಕಲ್ಯಾಣ್ ಹಾಗೂ ಚಿರಂಜೀವಿ ಜೊತೆ ಪೋಸಾನಿ ನಟಿಸಿದ್ದಾರೆ. ಆದಾಗ್ಯೂ, ಅವರ ವಿರುದ್ಧ ದ್ವೇಷ ಸಾಧಿಸುತ್ತಾ ಬಂದಿದ್ದಾರೆ. ಜಗನ್ ಅವರು ಪೋಸಾನಿನ ನಂಬಿ ಆಂಧ್ರಪ್ರದೇಶ ಫಿಲ್ಮ್​ ಡೆವಲಪ್​ಮೆಂಟ್​ನಲ್ಲಿ ಪ್ರಮುಖ ಪಾತ್ರ ನೀಡಿದರು. ಆದರೆ, ಪೋಸಾನಿ ಅವರ ಗಮನ ಅಲ್ಲಿರಲೇ ಇಲ್ಲ.

ಇದನ್ನೂ ಓದಿ: ಚುನಾವಣೆ ಗೆದ್ದ ಪವನ್​ ಕಲ್ಯಾಣ್​ಗೆ ಚಿರಂಜೀವಿ ಮನೆಯಲ್ಲಿ ಅದ್ದೂರಿ ಸ್ವಾಗತ; ವಿಡಿಯೋ ನೋಡಿ..

ಈಗ ಟಿಡಿಪಿ ಮೈತ್ರಿ ಆಂಧ್ರ ಪ್ರದೇಶದಲ್ಲಿ ಗೆಲುವು ಕಂಡಿದೆ. ಈಗ ಪೋಸಾನಿ ಅವರು ಪವನ್ ವಿರುದ್ಧ ಮತ್ತೆ ಹರಿಹಾಯುತ್ತಾರಾ ನೋಡಬೇಕಿದೆ. ಪೋಸಾನಿ ವೃತ್ತಿ ಬದುಕು ಸಂಪೂರ್ಣವಾಗಿ ಕೊನೆ ಆಯಿತು ಎಂದೇ ಎಲ್ಲರೂ ಭಾವಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us