‘ಆ ಘಟನೆ ಬಳಿಕ ಸಮಂತಾ ನನ್ನ ಜೊತೆ ಮಾತನಾಡುವುದನ್ನೇ ನಿಲ್ಲಿಸಿದರು’; ವಿಜಯ್ ದೇವರಕೊಂಡ

ಸಮಂತಾಗೆ Myositis ಹೆಸರಿನ ಕಾಯಿಲೆ ಕಾಣಿಸಿಕೊಂಡಿತು. ಈ ಸಮಸ್ಯೆ ಕಾಣಿಸಿಕೊಂಡ ಬಳಿಕ ಸ್ನಾಯುಗಳಲ್ಲಿ ನೋವುಂಟಾಗುತ್ತದೆ. ಇದಕ್ಕೆ ಸಮಂತಾ ಚಿಕಿತ್ಸೆಪಡೆದರು. ಆದಾಗ್ಯೂ ಅವರು ಸಂಪೂರ್ಣವಾಗಿ ಗುಣಮುಖರಾಗಿಲ್ಲ ಎನ್ನಲಾಗುತ್ತಿದೆ. ಅವರಿಗೆ ಅನಾರೋಗ್ಯ ಕಾಡಿದ್ದರಿಂದಲೇ ಸಿನಿಮಾ ಕೆಲಸಗಳು ವಿಳಂಬ ಆದವು.

‘ಆ ಘಟನೆ ಬಳಿಕ ಸಮಂತಾ ನನ್ನ ಜೊತೆ ಮಾತನಾಡುವುದನ್ನೇ ನಿಲ್ಲಿಸಿದರು’; ವಿಜಯ್ ದೇವರಕೊಂಡ
ವಿಜಯ್-ಸಮಂತಾ

Updated on: Aug 16, 2023 | 10:33 AM

ವಿಜಯ್ ದೇವರಕೊಂಡ (Vijay Devarakonda) ಅವರು ಯಾವುದಕ್ಕೂ ಹೆಚ್ಚು ತಲೆಕೆಡಸಿಕೊಳ್ಳುವುದಿಲ್ಲ. ಸೋಲು ಹಾಗೂ ಗೆಲುವನ್ನು ಸರಿ ಸಮನಾಗಿ ಸ್ವೀಕರಿಸುತ್ತಾರೆ. ಸಹ ಕಲಾವಿದರ ಬಗ್ಗೆ ಅವರು ಸಾಕಷ್ಟು ಕಾಳಜಿ ವಹಿಸುತ್ತಾರೆ. ಅವರ ಜೊತೆ ಖುಷಿಖುಷಿಯಾಗಿ ಕಾಲ ಕಳೆಯುತ್ತಾರೆ. ಈಗ ವಿಜಯ್ ದೇವರಕೊಂಡ ಅವರು ಸಮಂತಾ ಬಗ್ಗೆ ಒಂದು ಅಚ್ಚರಿಯ ವಿಚಾರ ಬಿಚ್ಚಿಟ್ಟಿದ್ದಾರೆ. ‘ಖುಷಿ’ ಸಿನಿಮಾದಲ್ಲಿ ಈ ಜೋಡಿ ಒಟ್ಟಾಗಿ ನಟಿಸಿದೆ. ‘ಆ ಘಟನೆ ಬಳಿಕ ಸಮಂತಾ ನನ್ನ ಜೊತೆ ಮಾತನಾಡುವುದನ್ನೇ ನಿಲ್ಲಿಸಿದರು’ ಎಂದಿದ್ದಾರೆ ವಿಜಯ್ ದೇವರಕೊಂಡ.

ಸಮಂತಾಗೆ Myositis ಹೆಸರಿನ ಕಾಯಿಲೆ ಕಾಣಿಸಿಕೊಂಡಿತು. ಈ ಸಮಸ್ಯೆ ಕಾಣಿಸಿಕೊಂಡ ಬಳಿಕ ಸ್ನಾಯುಗಳಲ್ಲಿ ನೋವುಂಟಾಗುತ್ತದೆ. ಇದಕ್ಕೆ ಸಮಂತಾ ಚಿಕಿತ್ಸೆಪಡೆದರು. ಆದಾಗ್ಯೂ ಅವರು ಸಂಪೂರ್ಣವಾಗಿ ಗುಣಮುಖರಾಗಿಲ್ಲ ಎನ್ನಲಾಗುತ್ತಿದೆ. ಅವರಿಗೆ ಅನಾರೋಗ್ಯ ಕಾಡಿದ್ದರಿಂದಲೇ ಸಿನಿಮಾ ಕೆಲಸಗಳು ವಿಳಂಬ ಆದವು. ಈ ಬಗ್ಗೆ ವಿಜಯ್ ಮಾತನಾಡಿದ್ದಾರೆ.

‘ಸಮಂತಾ ನಗುವುದನ್ನು ನೋಡಲು ನಾನು ಬಯಸುತ್ತೇನೆ. ಅವರು ಚಿತ್ರಕ್ಕಾಗಿ ಸಾಕಷ್ಟು ಕಷ್ಟ ಪಟ್ಟಿದ್ದಾರೆ. 2022ರ ಏಪ್ರಿಲ್​​ನಲ್ಲಿ ಖುಷಿ ಶೂಟಿಂಗ್ ಆರಂಭ ಆಯಿತು. ಸಿನಿಮಾ ಶೂಟಿಂಗ್ ಶೇ. 60ರಷ್ಟು ಪೂರ್ಣಗೊಂಡಿತ್ತು. ಶೇ. 40 ಚಿತ್ರೀಕರಣ ಬಾಕಿ ಇತ್ತು. ಜುಲೈ ವೇಳೆಗೆ ಸಮಂತಾ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ನೋಡೋಕೆ ಎಲ್ಲರಂತೆ ಕಾಣುತ್ತಿದ್ದರು. ನಿಮಗೆ ಆಗಿರುವುದಾದರೂ ಏನು? ಎಂದು ನಾನು ಪ್ರಶ್ನೆ ಮಾಡಿದ್ದೆ. ಇದನ್ನು ನಾವು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ನಂತರ ಅವರ ಕಷ್ಟ ಅರ್ಥವಾಯಿತು’ ಎಂದಿದ್ದಾರೆ ವಿಜಯ್ ದೇವರಕೊಂಡ.

ಇದನ್ನೂ ಓದಿ: ಮತ್ತೆ ಒಂದಾದ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ: ಐದರ ರಹಸ್ಯವೇನು?

‘ನಾನು ನನ್ನ ಇನ್ನೊಂದು ಚಿತ್ರದ ಪ್ರಚಾರದಲ್ಲಿದ್ದೆ. ಸಮಂತಾ ಅವರ ಅನಾರೋಗ್ಯದ ಬಗ್ಗೆ ನನಗೆ ತಿಳಿಯಿತು. ಆರಂಭದಲ್ಲಿ, ಅವರು ಅದರ ಬಗ್ಗೆ ಮಾತನಾಡಲಿಲ್ಲ. ನಾವು ಕಲಾವಿದರು. ನಮ್ಮ ಕಷ್ಟದ ಬಗ್ಗೆ ನಾವು ಹೇಳಬಾರದು ಎಂಬುದು ನನ್ನ ಅಭಿಪ್ರಾಯ ಆಗಿತ್ತು. ಅನಾರೋಗ್ಯದ ಬಗ್ಗೆ ಮುಕ್ತವಾಗಿ ಮಾತನಾಡುವುದು ನನ್ನ ಜವಾಬ್ದಾರಿ ಎಂದು ಸಮಂತಾ ಭಾವಿಸಿದರು. ಆ ಬಳಿಕ ಅವರು ನಮ್ಮೊಂದಿಗೆ ಮಾತನಾಡುವುದನ್ನು ನಿಲ್ಲಿಸಿದರು. ನಮ್ಮನ್ನು ನೋಡುವುದನ್ನು ನಿಲ್ಲಿಸಿದರು. ಅವರು ತೀರಾ ಅಸ್ವಸ್ಥರಾಗಿದ್ದರು’ ಎಂದು ವಿಜಯ್ ದೇವರಕೊಂಡ ಮಾಹಿತಿ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us