AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಚ್ಛೇದನ ಹಿಂಪಡೆಯಲಿದ್ದಾರೆಯೇ ಧನುಶ್ ಮತ್ತು ಐಶ್ವರ್ಯಾ?

ರಜನೀಕಾಂತ್ ಪುತ್ರಿ ಐಶ್ವರ್ಯಾ ಮತ್ತು ಧನುಶ್ ತಮ್ಮ 18 ವರ್ಷಗಳ ದಾಂಪತ್ಯವನ್ನು 2022 ರಲ್ಲಿ ಅಂತ್ಯಗೊಳಿಸಿದ್ದರು. ಆದರೆ ಅವರು ತಮ್ಮ ವಿಚ್ಛೇದನ ನಿರ್ಣಯವನ್ನು ಹಿಂಪಡೆಯಲಿದ್ದಾರೆ ಎನ್ನಲಾಗುತ್ತಿದೆ.

ವಿಚ್ಛೇದನ ಹಿಂಪಡೆಯಲಿದ್ದಾರೆಯೇ ಧನುಶ್ ಮತ್ತು ಐಶ್ವರ್ಯಾ?
ಮಂಜುನಾಥ ಸಿ.
|

Updated on: Oct 08, 2024 | 3:27 PM

Share

ರಜನೀಕಾಂತ್ ಪುತ್ರಿ ಐಶ್ವರ್ಯಾ ಮತ್ತು ಧನುಶ್ ಮದುವೆಯಾಗಿ 18 ವರ್ಷ ಒಟ್ಟಿಗೆ ಸಂಸಾರ ಮಾಡಿದ್ದು ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ಎರಡು ವರ್ಷದ ಹಿಂದೆ 2022 ರಲ್ಲಿ ಧನುಶ್ ಹಾಗೂ ಐಶ್ವರ್ಯಾ ಪರಸ್ಪರ ದೂರಾಗುತ್ತಿರುವುದಾಗಿ ಘೋಷಿಸಿದ್ದರು. ಧನುಶ್ ಹಾಗೂ ಐಶ್ವರ್ಯಾ ತಾವು ವಿಚ್ಛೇದನ ಪಡೆಯಲಿರುವುದಾಗಿ ಘೋಷಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದಾದ ಬಳಿಕ ಇವರಿಬ್ಬರ ಈ ವಿಚ್ಛೇದನಕ್ಕೆ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು, ರಜನೀಕಾಂತ್ ಅಭಿಮಾನಿಗಳು ಸಹ ವಿರೋಧಿಸಿದ್ದರು. ಆ ನಂತರ ಈ ಜೋಡಿ ಕೆಲ ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿತು. ಇದೀಗ ಇವರು ತಮ್ಮ ವಿಚ್ಛೇದನ ನಿರ್ಣಯವನ್ನು ಹಿಂಪಡೆಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಧನುಶ್ ಹಾಗೂ ಐಶ್ವರ್ಯಾರ ವಿಚ್ಛೇದನದ ಅರ್ಜಿ ಇನ್ನೂ ವಿಲೇವಾರಿ ಆಗಿಲ್ಲ. ಇಂದು ವಿಚ್ಛೇದನದ ಅರ್ಜಿಯ ವಿಚಾರಣೆ ಇತ್ತು, ಆದರೆ ಇಬ್ಬರೂ ಸಹ ವಿಚಾರಣೆಗೆ ಹಾಜರಾಗಿಲ್ಲ. ಹಾಗಾಗಿ ನ್ಯಾಯಾಧೀಶರು ವಿಚಾರಣೆಯನ್ನು ಅಕ್ಟೋಬರ್ 19ಕ್ಕೆ ಮುಂದೂಡಿದ್ದಾರೆ. ಕೆಲವು ತಿಂಗಳ ಹಿಂದಷ್ಟೆ ಧನುಶ್ ಹಾಗೂ ಐಶ್ವರ್ಯಾ ಮತ್ತೆ ಒಂದಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈಗ ಇಬ್ಬರೂ ವಿಚ್ಛೇದನ ವಿಚಾರಣೆಗೆ ಹಾಜರಾಗದೇ ಇರುವುದು ಆ ಸುದ್ದಿಗಳಿಗೆ ಪುಷ್ಠಿ ನೀಡಿದೆ.

ಇದನ್ನೂ ಓದಿ:ವಿವಾದ ಇತ್ಯರ್ಥ, ಧನುಶ್​ ಮೇಲೆ ವಿಧಿಸಿದ್ದ ನಿಷೇಧ ತೆರವು

ಧನುಶ್ ಹಾಗೂ ಐಶ್ವರ್ಯಾ 2004 ರಲ್ಲಿ ವಿವಾಹವಾಗಿದ್ದರು. ಐಶ್ವರ್ಯಾ, ರಜನೀಕಾಂತ್​ರ ಹಿರಿಯ ಪುತ್ರಿ. ಇವರು ನಿರ್ದೇಶಕಿ ಸಹ ಹೌದು. ಧನುಶ್ ಹಾಗೂ ಶ್ರುತಿ ಹಾಸನ್ ನಟಿಸಿರುವ ‘3’ ಸಿನಿಮಾವನ್ನು ಐಶ್ವರ್ಯಾ ನಿರ್ದೇಶನ ಮಾಡಿದ್ದರು. ಆ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಸಿನಿಮಾದ ಹಾಡುಗಳು ಭಾರಿ ಯಶಸ್ಸು ಗಳಿಸಿದ್ದವು. 18 ವರ್ಷದ ಬಳಿಕ ಧನುಶ್ ಹಾಗೂ ಐಶ್ವರ್ಯಾ ದೂರಾಗಿದ್ದರು. ವಿಚ್ಛೇದನದ ಸುದ್ದಿ ಹೊರಬಿದ್ದಾಗ ಅಭಿಮಾನಿಗಳು ತೀವ್ರ ಬೇಸರ, ವಿರೋಧ ವ್ಯಕ್ತಪಡಿಸಿದ್ದರು. ರಜನೀಕಾಂತ್​ಗೆ ಅನಾರೋಗ್ಯವೂ ಇದರಿಂದಲೇ ಆಯ್ತೆಂದು ಸಹ ಸುದ್ದಿಗಳು ಹರಿದಾಡಿದ್ದವು.

‘3’ ಮಾತ್ರವೇ ಅಲ್ಲದೆ, ‘ವಾಯ್ ರಾಜಾ ವಾಯ್’ ಸಿನಿಮಾ ನಿರ್ದೇಶನ ಮಾಡಿದ್ದರು. ತಮಿಳು ಸಿನಿಮಾ ಇತಿಹಾಸದ ಬಗ್ಗೆ ‘ಸಿನಿಮಾ ವೀರನ್’ ಹೆಸರಿನ ಡಾಕ್ಯುಮೆಂಟರಿ ನಿರ್ದೇಶನ ಮಾಡಿದ್ದರು. ಇತ್ತೀಚೆಗಷ್ಟೆ ರಜನೀಕಾಂತ್, ಕಪಿಲ್ ದೇವ್ ಇನ್ನಿತರರು ನಟಿಸಿದ್ದ ‘ಲಾಲ್ ಸಲಾಂ’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದರು. ಆ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಸೋತಿತು. ಇನ್ನು ಧನುಶ್ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೆ ‘ರಾಯನ್’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದರು. ಸಿನಿಮಾ ಹಿಟ್ ಆಯ್ತು. ಇದೀಗ ‘ಕುಬೇರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಿಂದಿಯ ಒಂದು ಸಿನಿಮಾದಲ್ಲಿ ನಟಿಸಲಿದ್ದಾರೆ. ಹಾಲಿವುಡ್​ನ ಸಿನಿಮಾದಲ್ಲಿಯೂ ನಟಿಸಲಿದ್ದಾರೆ. ‘ಇಡ್ಲಿ ಕಡೈ’ ಹೆಸರಿನ ಸಿನಿಮಾದಲ್ಲಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್