ಧನುಷ್​​ರಿಂದ ಬೇರ್ಪಟ್ಟ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಐಶ್ವರ್ಯಾ; ಇಲ್ಲಿದೆ ಫೋಟೋ

Dhanush | Aishwaryaa Rajinikanth: ಕಾಲಿವುಡ್​ ನಟ ಧನುಷ್​ರಿಂದ ಬೇರ್ಪಟ್ಟ ನಂತರ ಐಶ್ವರ್ಯಾ ರಜಿನಿಕಾಂತ್ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಪ್ರೇಮಿಗಳ ದಿನಕ್ಕೆ ಹೊಸ ಹಾಡೊಂದನ್ನು ತೆರೆಕಾಣಿಸಲು ಅವರು ಸಿದ್ಧರಾಗುತ್ತಿದ್ದಾರೆ.

ಧನುಷ್​​ರಿಂದ ಬೇರ್ಪಟ್ಟ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಐಶ್ವರ್ಯಾ; ಇಲ್ಲಿದೆ ಫೋಟೋ
ಐಶ್ವರ್ಯಾ ರಜಿನಿಕಾಂತ್ ಸಹದ್ಯೋಗಿಗಳೊಂದಿಗೆ ಸಂವಾದದಲ್ಲಿ ನಿರತರಾಗಿರುವ ಚಿತ್ರ
Edited By:

Updated on: Jan 25, 2022 | 5:59 PM

ಬದುಕಿನ ಪಯಣದಲ್ಲಿ ಸವಾಲುಗಳು ಎದುರಾದಾಗ ಮತ್ತಷ್ಟು ಕೆಲಸದಲ್ಲಿ ತೊಡಗಿಕೊಂಡೇ ಅದನ್ನು ಎದುರಿಸಬೇಕು ಎನ್ನುವುದನ್ನು ತಮ್ಮ ಬದುಕಿನಲ್ಲೂ ತೋರಿಸುತ್ತಿದ್ದಾರೆ ಐಶ್ವರ್ಯಾ ರಜಿನಿಕಾಂತ್ (Aishwaryaa Rajinikanth). ಇತ್ತೀಚೆಗಷ್ಟೇ 18 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸುತ್ತಿರುವುದಾಗಿ ರಜಿನಿ ಪುತ್ರಿ ಐಶ್ವರ್ಯಾ ಹಾಗೂ ಕಾಲಿವುಡ್ ನಟ ಧನುಷ್ (Dhanush) ಘೋಷಿಸಿದ್ದರು. ಪ್ರಸ್ತುತ ಐಶ್ವರ್ಯಾ ಮತ್ತೆ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲದೇ ಬೇರೆಯಾಗುತ್ತಿರುವುದನ್ನು ಘೋಷಿಸಿದ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ಐಶ್ವರ್ಯಾ ಒಂದು ಮ್ಯೂಸಿಕ್ ವಿಡಿಯೋ ತಯಾರಿಯಲ್ಲಿದ್ದಾರೆ. ನಿರ್ಮಾಣ ಸಂಸ್ಥೆ ‘ಬೇಫಿಲ್ಮ್ಸ್’ (Bayfilms) ಐಶ್ವರ್ಯಾ ರಜಿನಿಕಾಂತ್ ತಮ್ಮ ಸಹವರ್ತಿಗಳೊಂದಿಗೆ ಮ್ಯೂಸಿಕ್ ವಿಡಿಯೋದ ತಯಾರಿ ಆರಂಭಿಸಿರುವುದರ ಚಿತ್ರವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ಪ್ರೇಮದ ಕುರಿತು ಮೂಡಿಬರಲಿರುವ ಮ್ಯೂಸಿಕ್ ವಿಡಿಯೋಗೆ ಐಶ್ವರ್ಯಾ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಹಾಡು ಫೆಬ್ರವರಿ 14ರಂದು ತೆರೆಕಾಣಲಿದೆ. ಅವಧಿ ಕಡಿಮೆಯಿರುವುದರಿಂದ ಐಶ್ವರ್ಯಾ ನೇತೃತ್ವದ ತಂಡ ಭರದಿಂದಲೇ ಕೆಲಸಗಳಲ್ಲಿ ತೊಡಗಿಕೊಂಡಿದೆ.

ಬೇಫಿಲ್ಮ್ಸ್ ಹಂಚಿಕೊಂಡಿರುವ ಪೋಸ್ಟ್:

ಐಶ್ವರ್ಯಾ ನಿರ್ದೇಶನಕ್ಕೆ ಪದಾರ್ಪಣೆ ಮಾಡಿದ್ದು ಧನುಷ್ ನಟನೆಯ ‘3’ ಚಿತ್ರದ ಮೂಲಕ. ಅದರಲ್ಲಿ ಧನುಷ್​ಗೆ ನಾಯಕಿಯಾಗಿ ಶೃತಿ ಹಾಸನ್ ಅಭಿನಯಿಸಿದ್ದರು. ನಂತರ ‘ವೈ ರಾಜಾ ವೈ’ ಚಿತ್ರ ನಿರ್ದೇಶಿಸಿದ್ದರು. 2017ರಲ್ಲಿ ‘ಸಿನಿಮಾ ವೀರನ್’ ಎಂಬ ಸ್ಟಂಟ್​ಮ್ಯಾನ್ ಕತೆಯನ್ನು ಒಳಗೊಂಡ ಡಾಕ್ಯುಮೆಂಟರಿಗೆ ಆಕ್ಷನ್ ಕಟ್ ಹೇಳಿದ್ದರು.

ಕಳೆದ ವಾರ ಧನುಷ್ ಹಾಗೂ ಐಶ್ವರ್ಯಾ ಬೇರೆಯಾಗುತ್ತಿರುವುದಾಗಿ ಘೋಷಿಸಿದ್ದರು. ‘18 ವರ್ಷಗಳಿಂದ ಸ್ನೇಹಿತರಾಗಿ, ದಂಪತಿಗಳಾಗಿ, ಪೋಷಕರಾಗಿ ಪರಸ್ಪರ ಜತೆಗಿದ್ದೆವು. ಈ ಹಾದಿಯಲ್ಲಿ ಇಬ್ಬರೂ ಬೆಳೆದೆವು, ಅರ್ಥ ಮಾಡಿಕೊಂಡೆವು ಹಾಗೂ ಹೊಂದಿಕೆಯನ್ನು ಕಲಿತೆವು. ಈಗ ಇಬ್ಬರೂ ಭಿನ್ನ ದಾರಿಗಳಲ್ಲಿ ನಿಂತಿದ್ದೇವೆ. ಆದ್ದರಿಂದ ನಾನು ಮತ್ತು ಐಶ್ವರ್ಯಾ ಪರಸ್ಪರ ಒಪ್ಪಿಗೆಯಿಂದ ಬೇರೆಯಾಗುತ್ತಿದ್ದೇವೆ. ವೈಯಕ್ತಿಕವಾಗಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುವೆವು’ ಎಂದು ಧನುಷ್​ ಟ್ವೀಟ್​ ಮಾಡಿದ್ದರು. ಅಲ್ಲದೇ ಇಬ್ಬರ ಖಾಸಗಿತನವನ್ನು ಗೌರವಿಸುವಂತೆ ಅವರು ಮನವಿ ಮಾಡಿಕೊಂಡಿದ್ದರು.

ಚಿತ್ರಗಳ ವಿಷಯಕ್ಕೆ ಬಂದರೆ ಧನುಷ್ ತಮಿಳು- ತೆಲುಗು ಎರಡೂ ಭಾಷೆಯಲ್ಲಿ ತಯಾರಾಗುತ್ತಿರುವ ‘ವಾತಿ’ಯಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಮೂಲಕ ಧನುಷ್​ ತೆಲುಗಿಗೆ ಪದಾರ್ಪಣೆ ಮಾಡಲಿದ್ದಾರೆ. ಪ್ರಸ್ತುತ ಚಿತ್ರತಂಡ ಶೂಟಿಂಗ್​ನಲ್ಲಿ ತೊಡಗಿಕೊಂಡಿದೆ.

ಇದನ್ನೂ ಓದಿ:

ವಿಚ್ಛೇದನದ ಬಳಿಕವೂ ಒಂದೇ ಹೋಟೆಲ್​ನಲ್ಲಿ ಉಳಿದುಕೊಳ್ಳುತ್ತಿದ್ದಾರೆ ಧನುಷ್​-ಐಶ್ವರ್ಯಾ?

‘ಧನುಷ್​-ಐಶ್ವರ್ಯಾ ವಿಚ್ಛೇದನ ಪಡೆದಿಲ್ಲ, ಇದು ಸಣ್ಣ ಜಗಳ ಅಷ್ಟೇ’; ಧನುಷ್ ತಂದೆ ಅಚ್ಚರಿಯ ಹೇಳಿಕೆ​