AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧನುಷ್​ರಿಂದ ಬೇರ್ಪಟ್ಟ ಬಳಿಕ ಮೊದಲ ಬಾರಿಗೆ ಪ್ರೀತಿಯ ಕುರಿತು ಮುಕ್ತವಾಗಿ ಮಾತನಾಡಿದ ಐಶ್ವರ್ಯಾ; ಹೇಳಿದ್ದೇನು?

Aishwaryaa Rajinikanth | Dhanush: ನಿರ್ದೇಶಕಿ ಐಶ್ವರ್ಯಾ ರಜಿನಿಕಾಂತ್ ಹಾಗೂ ನಟ ಧನುಷ್ ಇತ್ತೀಚೆಗಷ್ಟೇ ಬ್ರೇಕಪ್ ಘೋಷಿಸಿದ್ದರು. ಇದೀಗ ಐಶ್ವರ್ಯಾ ಜೀವನ ಹಾಗೂ ಪ್ರೀತಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಧನುಷ್​ರಿಂದ ಬೇರ್ಪಟ್ಟ ಬಳಿಕ ಮೊದಲ ಬಾರಿಗೆ ಪ್ರೀತಿಯ ಕುರಿತು ಮುಕ್ತವಾಗಿ ಮಾತನಾಡಿದ ಐಶ್ವರ್ಯಾ; ಹೇಳಿದ್ದೇನು?
ಐಶ್ವರ್ಯಾ ರಜಿನಿಕಾಂತ್Image Credit source: Aishwaryaa Rajinikanth/ Instagram
TV9 Web
| Updated By: shivaprasad.hs|

Updated on: Feb 17, 2022 | 12:17 PM

Share

ದಕ್ಷಿಣದ ತಾರಾ ಜೋಡಿಯಾಗಿದ್ದ ಐಶ್ವರ್ಯಾ ರಜಿನಿಕಾಂತ್ (Aishwaryaa Rajinikanth) ಹಾಗೂ ಧನುಷ್ (Dhanush) ಕಳೆದ ತಿಂಗಳು ಬೇರೆಯಾಗುತ್ತಿರುವುದಾಗಿ ಘೋಷಿಸಿದ್ದರು. ಅವರ ನಿರ್ಧಾರ ಅಭಿಮಾನಿಗಳಿಗೆ ಶಾಕ್ ನೀಡಿದ್ದಲ್ಲದೇ, ಬೇಸರವಾಗಿತ್ತು. ಆದರೆ ಇಡೀ ಪ್ರಕರಣವನ್ನು ಐಶ್ವರ್ಯಾ ಹಾಗೂ ಧನುಷ್ ನಾಜೂಕಾಗಿ ನಿರ್ವಹಿಸಿದರು. ಪರಸ್ಪರ ಗೌರವಿದಂದಲೇ ಬೇರೆಯಾಗುತ್ತಿರುವುದಾಗಿ ತಿಳಿಸಿದ್ದ ಅವರು, ನಂತರ ತಮ್ಮ ಚಿತ್ರಗಳ ಕೆಲಸಗಳಲ್ಲಿ ಬ್ಯುಸಿಯಾದರು. ಇತ್ತೀಚೆಗೆ ಐಶ್ವರ್ಯಾ ಕೊವಿಡ್ ಸೋಂಕಿಗೆ ತುತ್ತಾಗಿದ್ದರು. ಇದೀಗ ಚೇತರಿಸಿಕೊಂಡಿರುವ ಅವರು, ಹಿಂದೂಸ್ತಾನ್ ಟೈಮ್ಸ್​​ನೊಂದಿಗೆ ಮಾತನಾಡಿದ್ದಾರೆ. ಅದರಲ್ಲಿ ಅವರು ಬದುಕು ಹಾಗೂ ಪ್ರೀತಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ‘ಜೀವನದಲ್ಲಿ ಏನೇನು ಬರುತ್ತದೋ ಎಲ್ಲವನ್ನೂ ಎದುರಿಸಬೇಕು. ನಮಗೆ ಏನು ಪ್ರಾಪ್ತಿಯಾಗಬೇಕೋ ಅದು ಆಗುತ್ತದೆ’ ಎಂದು ಐಶ್ವರ್ಯಾ ನುಡಿದಿದ್ದಾರೆ. ಬುದಕಿನಲ್ಲಿ ಏನು ಬದಲಾಗಿದೆ ಎನ್ನುವುದನ್ನು ವಿವರಿಸಿರುವ ಐಶ್ವರ್ಯಾ, ‘ಈ ಹಿಂದೆ ಹೇಳಿದಂತೆ ನಾನು ಎಲ್ಲವನ್ನೂ ಎದುರಿಸುತ್ತಿದ್ದೇನೆ. ಅದರಿಂದ ಕಲಿಯುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಪ್ರೀತಿಯ ಬಗ್ಗೆ ಐಶ್ವರ್ಯಾ ಹೇಳಿದ್ದೇನು?

ಸಾಮಾನ್ಯವಾಗಿ ಸೆಲೆಬ್ರಿಟಿಗಳು ತಮ್ಮ ಸಂಬಂಧದಲ್ಲಿ ಬ್ರೇಕಪ್ ಆದರೆ ನಂತರ ತಮಗೆ ಹೊಂದಿಕೆಯಾಗುವವರೊಂದಿಗೆ ಹೊಸ ಜೀವನಕ್ಕೆ ಕಾಲಿಡುತ್ತಾರೆ. ಇದಕ್ಕೆ ಅಪವಾದಗಳೂ ಇಲ್ಲಿದಿಲ್ಲ. ಇದೀಗ ಐಶ್ವರ್ಯಾ ಅವರೂ ಈ ಕುರಿತು ಮುಕ್ತವಾಗಿ ಮಾತನಾಡಿದ್ದು, ಪ್ರೀತಿಯ ಬಗ್ಗೆ ತಮ್ಮ ಅನಿಸಿಕೆ ಹೇಳಿಕೊಂಡಿದ್ದಾರೆ. ‘ಪ್ರೀತಿ ಎನ್ನುವುದು ಎಲ್ಲರಲ್ಲೂ ಇರುವ ಸಾಮಾನ್ಯ ಭಾವನೆ. ಕೇವಲ ಮನುಷ್ಯರಿಗೆ ಅಥವಾ ಒಂದು ವಸ್ತುವಿಗೆ ಇದು ಸೀಮಿತವಾಗಿಲ್ಲ. ನಾವು ಬೆಳೆದಂತೆ ನಾವು ಪ್ರೀತಿಯನ್ನು ನೋಡುವ ವಿಧಾನವೂ ಬದಲಾಗುತ್ತದೆ’’ ಎಂದು ಐಶ್ವರ್ಯಾ ಹೇಳಿದ್ದಾರೆ.

‘‘ನಾನು ನನ್ನ ತಂದೆಯನ್ನು ಪ್ರೀತಿಸುತ್ತೇನೆ. ನನ್ನ ತಾಯಿಯನ್ನು ಪ್ರೀತಿಸುತ್ತೇನೆ. ಮಕ್ಕಳನ್ನು ಪ್ರೀತಿಸುತ್ತೇನೆ. ಇದರರ್ಥ ಪ್ರೀತಿಯೆನ್ನುವುದು ಕೇವಲ ಓರ್ವ ವ್ಯಕ್ತಿಗೆ ಸೀಮಿತವಲ್ಲ. ಆದ್ದರಿಂದ.. ನಾನು ಪ್ರೀತಿಸುತ್ತೇನೆ ಎಂದು ಹೇಳಲು ಇಷ್ಟಪಡುತ್ತೇನೆ’’ ಎಂದಿದ್ದಾರೆ ಐಶ್ವರ್ಯಾ. ಇತ್ತೀಚೆಗೆಷ್ಟೇ ಕೊವಿಡ್​ಗೆ ತುತ್ತಾಗಿದ್ದರ ಕುರಿತು ಮಾತನಾಡಿದ ಅವರು, ಈ ಸಂದರ್ಭದಲ್ಲಿ ಜತೆಯಾಗಿ ನಿಂತ ಅವರ ತಂಡದವರಿಗೆ ಧನ್ಯವಾದ ತಿಳಿಸಿದರು.

ಐಶ್ವರ್ಯಾ ರಜಿನಿಕಾಂತ್ ಹಾಗೂ ಧನುಷ್ 2004ರಲ್ಲಿ ಇಷ್ಟಪಟ್ಟು ಮದುವೆಯಾಗಿದ್ದರು. ಈ ಜೋಡಿಗೆ ಯಾತ್ರಾ ಹಾಗೂ ಲಿಂಗಾ ಎಂಬ ಈರ್ವರು ಮಕ್ಕಳಿದ್ದಾರೆ. ಐಶ್ವರ್ಯಾ ಈ ಹಿಂದೆ ಧನುಷ್ ನಟನೆಯ ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ ‘3’ಯನ್ನು ನಿರ್ದೇಶಿಸಿದ್ದರು. ಪ್ರಸ್ತುತ ‘ಮುಸಾಫಿರ್’ ಎಂಬ ಪ್ರೀತಿಯ ಕುರಿತ ಹಾಡಿನ ತಯಾರಿಯಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಧನುಷ್ ನಟನೆಯ ಹಿಂದಿ ಚಿತ್ರ ‘ಅತರಂಗಿ ರೇ’ ಇತ್ತೀಚೆಗೆ ತೆರೆಕಂಡಿತ್ತು. ಧನುಷ್ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ:

Puneeth Rajkumar: ‘ಪುನೀತ್​ ರಾಜ್​ಕುಮಾರ್ ರಸ್ತೆ’ ನಾಮಕರಣಕ್ಕೆ ಬಿಬಿಎಂಪಿ ಅಧಿಕೃತ ಅನುಮೋದನೆ

‘ಹಿರಣ್ಯ’ ಟೈಟಲ್ ಧನಂಜಯ್ ಬಳಿ ಇತ್ತು..; ನಟ ರಾಜವರ್ಧನ್ ಹಂಚಿಕೊಂಡ್ರು ಕುತೂಹಲಕರ ಮಾಹಿತಿ