ಟಿವಿಕೆ ಬಾವುಟ ತೋರಿಸಿದ ವಿಜಯ್ ಅಭಿಮಾನಿಗೆ ಥಳಿಸಿದ ಅಜಿತ್ ಫ್ಯಾನ್ಸ್

ಅಜಿತ್ ಕುಮಾರ್ ಅಭಿಮಾನಿಗಳನ್ನು ಕೆಣಕಲು ದಳಪತಿ ವಿಜಯ್ ಫ್ಯಾನ್ಸ್ ಪ್ರಯತ್ನಿಸಿದ್ದಾರೆ. ಟಿವಿಕೆ ಪಕ್ಷದ ಬಾವುಟ ಹಿಡಿದುಕೊಂಡು ಚಿತ್ರಮಂದಿರಕ್ಕೆ ಬರಲಾಗಿದೆ. ಇದರಿಂದಾಗಿ ಗಲಾಟೆ ಶುರುವಾಯಿತು. ವಿಜಯ್ ಅಭಿಮಾನಿಗೆ ಅಜಿತ್ ಫ್ಯಾನ್ಸ್ ಬಟ್ಟೆ ಹರಿದು ಹೊಡೆದಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ ಆಗುತ್ತಿದೆ.

ಟಿವಿಕೆ ಬಾವುಟ ತೋರಿಸಿದ ವಿಜಯ್ ಅಭಿಮಾನಿಗೆ ಥಳಿಸಿದ ಅಜಿತ್ ಫ್ಯಾನ್ಸ್
Thalapathy Vijay Fan

Updated on: Jan 25, 2026 | 1:11 PM

ದಳಪತಿ ವಿಜಯ್ ಮತ್ತು ಅಜಿತ್ ಕುಮಾರ್ ಅವರ ಅಭಿಮಾನಿಗಳ ನಡುವೆ ಯಾವಾಗಲೂ ಕಿರಿಕ್ ಆಗುತ್ತದೆ. ಅದಕ್ಕೆ ಈಗ ಹೊಸದೊಂದು ಉದಾಹರಣೆ ಸಿಕ್ಕಿದೆ. ಅಜಿತ್ ಕುಮಾರ್ (Ajith Kumar) ನಟನೆಯ ‘ಮಂಗಾತ’ ಸಿನಿಮಾ ಮರು ಬಿಡುಗಡೆ ಆಗಿದೆ. ಸಿನಿಮಾ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಈ ವೇಳೆ ಅಜಿತ್ ಅವರ ಅಭಿಮಾನಿಗಳನ್ನು ಕೆಣಕಲು ವಿಜಯ್ (Thalapathy Vijay) ಫ್ಯಾನ್ಸ್ ಪ್ರಯತ್ನಿಸಿದ್ದಾರೆ. ಅದರಿಂದಾಗಿ ಗಲಾಟೆ ಆಗಿದೆ. ವಿಜಯ್ ಅಭಿಮಾನಿಗೆ ಅಜಿತ್ ಫ್ಯಾನ್ಸ್ ಥಳಿಸಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಸಿನಿಮಾದಿಂದ ದೂರ ಸರಿದಿರುವ ದಳಪತಿ ವಿಜಯ್ ಅವರು ಈಗ ರಾಜಕೀಯದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಟಿವಿಕೆ ಪಕ್ಷ ಕಟ್ಟಿ, ಅದರ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಅಭಿಮಾನಿಗಳು ಕೂಡ ಅವರಿಗೆ ಸಿಕ್ಕಾಪಟ್ಟೆ ಸಪೋರ್ಟ್ ಮಾಡುತ್ತಿದ್ದಾರೆ. ಟಿವಿಕೆ ಪಕ್ಷದ ಬಾವುಟವನ್ನು ಹಿಡಿದು ಫ್ಯಾನ್ಸ್ ಓಡಾಡುತ್ತಿದ್ದಾರೆ. ಅದೇ ಈಗ ಕಿರಿಕ್​​ಗೆ ಕಾರಣ ಆಗಿದೆ.

ತಮಿಳುನಾಡಿನ ಚಿತ್ರಮಂದಿರವೊಂದರಲ್ಲಿ ಅಜಿತ್ ಅಭಿನಯದ ‘ಮಂಗಾತ’ ಸಿನಿಮಾ ಪ್ರದರ್ಶನ ಆಗುತ್ತಿತ್ತು. ಈ ವೇಳೆ ವಿಜಯ್ ಅಭಿಮಾನಿಯೊಬ್ಬ ಟಿವಿಕೆ ಪಕ್ಷದ ಬಾವುಟ ಪ್ರದರ್ಶಿದ್ದಾನೆ. ಇದರಿಂದಾಗಿ ಅಜಿತ್ ಅಭಿಮಾನಿಗಳಿಗೆ ಕೋಪ ಬಂದಿದೆ. ಬೇಕಂತಲೇ ಬಾವುಟ ಪ್ರದರ್ಶಿದ ವ್ಯಕ್ತಿಗೆ ಅಜಿತ್ ಫ್ಯಾನ್ಸ್ ಥಳಿಸಿದ್ದಾರೆ. ಬಟ್ಟೆ ಹರಿದುಹೋಗುವ ರೀತಿಯಲ್ಲಿ ಹೊಡೆಯಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ‘ದಳಪತಿ ವಿಜಯ್ ಅಭಿಮಾನಿಗಳ ಹುಚ್ಚು ಬಿಡಿಸುವುದು ಹೇಗೆ ಎಂಬುದು ಅಜಿತ್ ಫ್ಯಾನ್ಸ್ ಮತ್ತು ರಜನಿ ಫ್ಯಾನ್ಸ್​​ಗೆ ಮಾತ್ರ ಗೊತ್ತು’ ಎಂಬ ಕ್ಯಾಪ್ಷನ್​ನೊಂದಿಗೆ ನೆಟ್ಟಿಗರೊಬ್ಬರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ‘ಆದರೆ ಈ ರೀತಿ ಥಳಿಸಿದ್ದಕ್ಕೆ ಅಜಿತ್ ಅಭಿಮಾನಿಗಳಿಗೆ ನಾಚಿಕೆ ಆಗಬೇಕು’ ಎಂಬ ಕಮೆಂಟ್ ಕೂಡ ಬಂದಿದೆ.

ಇದನ್ನೂ ಓದಿ: ಮತ್ತೊಂದು ಹೊಸ ಕಾರು ಖರೀದಿಸಿದ ನಟ ಅಜಿತ್ ಕುಮಾರ್, ಬೆಲೆ ಎಷ್ಟು?

ಮರು ಬಿಡುಗಡೆ ವಿಚಾರದಲ್ಲಿ ವಿಜಯ್ ದಾಖಲೆಯನ್ನು ಅಜಿತ್ ಮುರಿದಿದ್ದಾರೆ. ವಿಜಯ್ ನಟನೆಯ ‘ಗಿಲ್ಲಿ’ ಸಿನಿಮಾ ಮರು ಬಿಡುಗಡೆ ಆದಾಗ ಮೊದಲ ದಿನ 4 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈಗ ಅಜಿತ್ ಅವರ ‘ಮಂಗಾತ’ ಸಿನಿಮಾ ಮರು-ಬಿಡುಗಡೆ ಆಗಿದ್ದು, ಮೊದಲ ದಿನ 4.1 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.