AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಶ್ವಿನಿ, ಸತೀಶ್ ಮೇಲೆ ದ್ವೇಷ ಇಲ್ಲ: ಬಿಗ್ ಬಾಸ್ ಮುಗಿದ ಮೇಲೂ ಜನರ ಮನ ಗೆಲ್ಲುತ್ತಿರುವ ಗಿಲ್ಲಿ

ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿ ನಟ ಅವರಿಗೆ ಇರುವ ಫಾನ್ಸ್ ಸಂಖ್ಯೆ ಹೆಚ್ಚಾಗಿದೆ. ಬಿಗ್ ಬಾಸ್ ಬಳಿಕ ಗಿಲ್ಲಿ ನೀಡಿದ ಎಲ್ಲ ಸಂದರ್ಶನದ ತುಣುಕುಗಳು ವೈರಲ್ ಆಗುತ್ತಿವೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ಮುಗಿದರೂ ಕೂಡ ಗಿಲ್ಲಿ ನಟ ಅವರ ಹವಾ ಕಡಿಮೆ ಆಗಿಲ್ಲ.

ಅಶ್ವಿನಿ, ಸತೀಶ್ ಮೇಲೆ ದ್ವೇಷ ಇಲ್ಲ: ಬಿಗ್ ಬಾಸ್ ಮುಗಿದ ಮೇಲೂ ಜನರ ಮನ ಗೆಲ್ಲುತ್ತಿರುವ ಗಿಲ್ಲಿ
Gilli Nata
ಮದನ್​ ಕುಮಾರ್​
|

Updated on:Jan 25, 2026 | 3:32 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 12’ ವಿನ್ನರ್ (Bigg Boss Kannada Season 12 Winner) ಗಿಲ್ಲಿ ನಟ ಅವರು ಹಲವು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಕರ್ನಾಟಕದಲ್ಲಿ ಮಾತ್ರವಲ್ಲದೇ ಅಕ್ಕಪಕ್ಕದ ರಾಜ್ಯಗಳಲ್ಲಿ ಕೂಡ ಗಿಲ್ಲಿ ನಟ ಫೇಮಸ್ ಆಗಿದ್ದಾರೆ. ಅವರ ರೀಲ್ಸ್ ಎಲ್ಲ ಕಡೆಗಳಲ್ಲಿ ವೈರಲ್ ಆಗಿದೆ. ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಕಾಮಿಡಿ ಮೂಲಕ ಗಿಲ್ಲಿ ನಟ (Gilli Nata) ಅವರು ವೀಕ್ಷಕರ ಮನ ಗೆದ್ದಿದ್ದರು. ಬಿಗ್ ಬಾಸ್ ಮುಗಿದ ಮೇಲೂ ಕೂಡ ಅವರು ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರ ಆಗುತ್ತಿದ್ದಾರೆ. ತಮ್ಮ ಜೊತೆ ಸ್ಪರ್ಧಿಸಿದ್ದ ಅಶ್ವಿನಿ ಗೌಡ, ಸತೀಶ್ ಮುಂತಾದವರ ಮೇಲೆ ಕಿಂಚಿತ್ತೂ ದ್ವೇಷ ಇಲ್ಲ ಎಂದು ಗಿಲ್ಲಿ ನಟ ಹೇಳಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಜಗಳಗಳು ಸಹಜ. ಟಾಸ್ಕ್ ಗೆಲ್ಲಬೇಕು ಎಂಬ ಸಲುವಾಗಿ ಪರಸ್ಪರ ಕಿತ್ತಾಟ ಇದ್ದೇ ಇರುತ್ತದೆ. ನಾಮಿನೇಷನ್ ಸಮಯದಲ್ಲಿ ಒಬ್ಬರಿಗೊಬ್ಬರು ಕೆಸರು ಎರಚಿಕೊಳ್ಳುವುದು ಕೂಡ ನಡೆಯುತ್ತದೆ. ಆದರೆ ಅದೆಲ್ಲವೂ ಆಟದ ಸಲುವಾಗಿ ಮಾತ್ರ. ಬಿಗ್ ಬಾಸ್ ಮುಗಿದ ಮೇಲೆ ಗಿಲ್ಲಿ ನಟ ಅವರು ಆ ಯಾವ ವಿಚಾರಗಳನ್ನೂ ಮನಸ್ಸಿನಲ್ಲಿ ಇಟ್ಟುಕೊಂಡಿಲ್ಲ.

ಈ ಸೀಸನ್​​ನಲ್ಲಿ ಸ್ಪರ್ಧಿಸಿ ಹೊರಬಂದ ಅನೇಕ ಸ್ಪರ್ಧಿಗಳು ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ. ಡಾಗ್ ಸತೀಶ್ ಅವರು ಗಿಲ್ಲಿ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದ್ದರು. ಅಶ್ವಿನಿ ಗೌಡ ಅವರು ಗಿಲ್ಲಿ ಗೆಲುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಆ ಯಾವ ವಿಷಯಕ್ಕೂ ಗಿಲ್ಲಿ ನಟ ಅವರು ದ್ವೇಷ ಸಾಧಿಸುತ್ತಿಲ್ಲ. ಯಾರ ಮೇಲೂ ತಮಗೆ ದ್ವೇಷ ಎಲ್ಲ ಎಂದು ಅವರು ಹೇಳಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ‘ಒಪ್ಪಿದೆ ಕಣಯ್ಯ.. ನಿನ್ನ ಮನಸ್ಸು ಎಷ್ಟು ಪರಿಶುದ್ಧವಾಗಿದೆಯೋ ಅಷ್ಟು ಚೆನ್ನಾಗಿ ನೀನು ಬದುಕುತ್ತೀಯ’ ಎಂದು ಸೂರ್ಯವಂಶ ಸಿನಿಮಾದ ಸ್ಟೈಲ್​​ನಲ್ಲಿ ಗಿಲ್ಲಿಗೆ ಅಭಿಮಾನಿಗಳು ಹಾರೈಸುತ್ತಿದ್ದಾರೆ. ನಿಷ್ಕಲ್ಮಶವಾದ ಮಾತುಗಳ ಮೂಲಕ ಗಿಲ್ಲಿ ನಟ ಅವರು ಜನರ ಮನಸ್ಸನ್ನು ಗೆಲ್ಲುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕೂಡ ಗಿಲ್ಲಿಗೆ ಅಭಿನಂದನೆ ತಿಳಿಸಿದ್ದಾರೆ.

ಇದನ್ನೂ ಓದಿ: ‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ

ಗಿಲ್ಲಿ ನಟ ಅವರು ತುಂಬಾ ಕಷ್ಟಪಟ್ಟು ಈ ಮಟ್ಟಕ್ಕೆ ಬಂದಿದ್ದಾರೆ. ಕಾಮಿಡಿ ಪಾತ್ರಗಳ ಮೂಲಕ ಜನರನ್ನು ರಂಜಿಸಿದ್ದಾರೆ. ಈಗ ಅವರಿಗೆ ಸಿನಿಮಾ ಅವಕಾಶಗಳು ಹೆಚ್ಚಾಗಿವೆ. ಅಲ್ಲದೇ ಅನೇಕ ಕಾರ್ಯಕ್ರಮಗಳಿಗೆ ಅತಿಥಿ ಆಗಿಯೂ ಅವರು ತೆರಳುತ್ತಿದ್ದಾರೆ. ಇನ್​ಸ್ಟಾಗ್ರಾಮ್​​ನಲ್ಲಿ ಗಿಲ್ಲಿ ನಟ ಅವರನ್ನು 2 ಮಿಲಿಯನ್​ಗಿಂತಲೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:47 pm, Sun, 25 January 26