AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

28 ವರ್ಷಗಳ ಬಳಿಕ ಒಂದಾಗುತ್ತಿರುವ ನಾಗಾರ್ಜುನ ಮತ್ತು ಟಬು

Akkineni Nagarjun: ನಾಗಾರ್ಜುನ ಮತ್ತು ಟಬು ದಶಕಗಳ ಹಿಂದೆ ಬಲು ಹಾಟ್ ಫೇವರೇಟ್ ಜೋಡಿ. ಕೆಲವು ಬ್ಲಾಕ್ ಬಸ್ಟರ್ ರೊಮ್ಯಾಂಟಿಕ್ ಹಿಟ್ ಸಿನಿಮಾಗಳಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಆ ಸಮಯದಲ್ಲಿ ನಾಗಾರ್ಜುನ ಮತ್ತು ಟಬು ನಡುವೆ ತೆರೆಯಾಚೆಯೂ ರೊಮಾನ್ಸ್ ನಡೆದಿತ್ತು ಆ ಬಗ್ಗೆ ಸಾಕಷ್ಟು ಗುಲ್ಲೆದ್ದಿತ್ತು. ಆದರೆ ಇದೀಗ ಬರೋಬ್ಬರಿ 28 ವರ್ಷಗಳ ಬಳಿಕ ಈ ಜೋಡಿ ಮತ್ತೆ ತೆರೆಯ ಮೇಲೆ ಒಂದಾಗುತ್ತಿದೆ.

28 ವರ್ಷಗಳ ಬಳಿಕ ಒಂದಾಗುತ್ತಿರುವ ನಾಗಾರ್ಜುನ ಮತ್ತು ಟಬು
Tabu Nagarjuna
ಮಂಜುನಾಥ ಸಿ.
|

Updated on: Apr 28, 2026 | 10:49 AM

Share

ನಾಗಾರ್ಜುನ (Nagarjuna) ಮತ್ತು ಟಬು ಅವರು ಚಿತ್ರರಂಗದ ಹಿರಿಯ ನಟರು. ಆದರೆ ದಶಕಗಳ ಹಿಂದೆ ಇವರಿಬ್ಬರದ್ದು ಬಲು ಹಾಟ್ ಫೇವರೇಟ್ ಜೋಡಿ. ಕೆಲವು ಬ್ಲಾಕ್ ಬಸ್ಟರ್ ರೊಮ್ಯಾಂಟಿಕ್ ಹಿಟ್ ಸಿನಿಮಾಗಳಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಆ ಸಮಯದಲ್ಲಿ ನಾಗಾರ್ಜುನ ಮತ್ತು ಟಬು ನಡುವೆ ತೆರೆಯಾಚೆಯೂ ರೊಮಾನ್ಸ್ ನಡೆದಿತ್ತು ಆ ಬಗ್ಗೆ ಸಾಕಷ್ಟು ಗುಲ್ಲೆದ್ದಿತ್ತು. ನಾಗಾರ್ಜುನ ಮತ್ತು ಟಬು ಮದುವೆ ಆಗಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬಂದಿದ್ದವು. ಆದರೆ ಅದಾಗಲಿಲ್ಲ. ಆದರೆ ಇದೀಗ ಬರೋಬ್ಬರಿ 28 ವರ್ಷಗಳ ಬಳಿಕ ಈ ಜೋಡಿ ಮತ್ತೆ ತೆರೆಯ ಮೇಲೆ ಒಂದಾಗುತ್ತಿದೆ.

ನಾಗಾರ್ಜುನ ತಮ್ಮ 100ನೇ ಸಿನಿಮಾದ ಚಿತ್ರೀಕರಣದ ತಯಾರಿಯಲ್ಲಿದ್ದಾರೆ. ಈ ಸಿನಿಮಾವನ್ನು ಬಲು ಅದ್ಧೂರಿಯಾಗಿ ತೆರೆಯ ಮೇಲೆ ತರಲು ಸಕಲ ಪ್ರಯತ್ನಗಳನ್ನು ಖುದ್ದಾಗಿ ಮಾಡುತ್ತಿದ್ದಾರೆ. ಸಿನಿಮಾಕ್ಕೆ ‘ಕಿಂಗ್ 100’ ಎಂದು ಹೆಸರಿಡಲಾಗಿದ್ದು, ನಾಗಾರ್ಜುನ ಅಭಿಮಾನಿಗಳಿಗಾಗಿ ವಿಶೇಷವಾಗಿ ಈ ಸಿನಿಮಾವನ್ನು ನಿರ್ಮಿಸಲಾಗುತ್ತಿದೆಯಂತೆ. ಇದೇ ಸಿನಿಮಾನಲ್ಲಿ ಟಬು ಮುಖ್ಯ ಪಾತ್ರದಲ್ಲಿ ನಟಿಸಲಿದ್ದು, ಬರೋಬ್ಬರಿ 28 ವರ್ಷಗಳ ಬಳಿಕ ಟಬು ಮತ್ತೊಮ್ಮೆ ನಾಗಾರ್ಜುನ ಜೊತೆಗೆ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

ಟಬು ಅವರು ಸಿನಿಮಾದ ಶೂಟಿಂಗ್ ಪ್ರಾರಂಭಿಸಿದ್ದು, ‘ಕಿಂಗ್ 100’ ಸಿನಿಮಾ ಸೆಟ್​ನ ಚಿತ್ರವನ್ನು ಟಬು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಟಬು ಮತ್ತು ನಾಗಾರ್ಜುನ ಜೋಡಿಗೆ ತೆಲುಗು ಚಿತ್ರರಂಗದಲ್ಲಿ ದೊಡ್ಡ ಅಭಿಮಾನಿ ವರ್ಗವೇ ಇದ್ದು, ಸಹಜವಾಗಿಯೇ ಅಭಿಮಾನಿಗಳು ಇಬ್ಬರನ್ನೂ ಮತ್ತೆ ತೆರೆಯ ಮೇಲೆ ನೋಡಲು ಕಾತರರಾಗಿದ್ದಾರೆ.

ಇದನ್ನೂ ಓದಿ;ನಾಗಾರ್ಜುನಗೆ ಮತ್ತೆ ಶಾಕ್ ಕೊಟ್ಟ ಸರ್ಕಾರ, ಸ್ಟುಡಿಯೋ ವಿರುದ್ಧ ತೆರಿಗೆ ವಂಚನೆ ಆರೋಪ

ನಾಗಾರ್ಜುನ ಅವರ 100ನೇ ಸಿನಿಮಾವನ್ನು ರಾ ಕಾರ್ತಿಕ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾನಲ್ಲಿ ನಾಗಾರ್ಜುನ ಅವರನ್ನು ಭಿನ್ನ ಭಿನ್ನ ಲುಕ್​​ಗಳಲ್ಲಿ ತೋರಿಸಲಾಗುತ್ತದೆಯಂತೆ. ಇದಕ್ಕಾಗಿ ಡೀ ಏಜಿಂಗ್ ತಂತ್ರಜ್ಞಾನವನ್ನು ನಿರ್ದೇಶಕರು ಬಳಸಲಿದ್ದಾರೆ. ಸಿನಿಮಾವು ತಂದೆ ಮತ್ತು ಮಗಳ ನಡುವೆ ಬಾಂಧವ್ಯದ ಕತೆಯನ್ನು ಹೊಂದಿರಲಿದೆ. ಸಿನಿಮಾನಲ್ಲಿ ಟಬು ಅವರು ನಾಗಾರ್ಜುನ ಅವರಿಗೆ ಜೋಡಿಯಾಗಿ ನಟಿಸಲಿದ್ದಾರೆ.

ನಾಗಾರ್ಜುನ ಮತ್ತು ಟಬು ಈ ವರೆಗೆ ಮೂರು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಮೊದಲಿಗೆ ‘ಸಿಸಿಂದ್ರಿ’ ಸಿನಿಮಾನಲ್ಲಿ ಈ ಇಬ್ಬರೂ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ಬಳಿಕ ಬ್ಲಾಕ್ ಬಸ್ಟರ್ ಸಿನಿಮಾ ‘ನಿನ್ನೆ ಪೆಳ್ಳಾಡತಾ’ ಆ ಬಳಿಕ ‘ಆವಿಡ ಮಾ ಆವಿಡೇ’ ಸಿನಿಮಾನಲ್ಲಿ ನಟಿಸಿದ್ದರು. 1998 ರಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಈಗ 28 ವರ್ಷಗಳ ಬಳಿಕ ಮತ್ತೆ ಒಟ್ಟಿಗೆ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಧಾರವಾಡದಲ್ಲಿ ಜೈಲರ್ ಆತ್ಮಹತ್ಯೆ: ಅಲೋಕ್ ಕುಮಾರ್ ವಿರುದ್ಧ ಗಂಭೀರ ಆರೋಪ
ಧಾರವಾಡದಲ್ಲಿ ಜೈಲರ್ ಆತ್ಮಹತ್ಯೆ: ಅಲೋಕ್ ಕುಮಾರ್ ವಿರುದ್ಧ ಗಂಭೀರ ಆರೋಪ
ಆರ್‌ಟಿಒ ಕಚೇರಿಯಲ್ಲಿ ತಾಯಿಯ ಬದಲು ಮಗಳ ದರ್ಬಾರ್
ಆರ್‌ಟಿಒ ಕಚೇರಿಯಲ್ಲಿ ತಾಯಿಯ ಬದಲು ಮಗಳ ದರ್ಬಾರ್
ಬೆಂಗಳೂರಿನಲ್ಲಿ ಭಾರಿ ಮಳೆ: ದ್ವಿಚಕ್ರ ವಾಹನ ಸವಾರರ ಪರದಾಟ
ಬೆಂಗಳೂರಿನಲ್ಲಿ ಭಾರಿ ಮಳೆ: ದ್ವಿಚಕ್ರ ವಾಹನ ಸವಾರರ ಪರದಾಟ
ಕೆ-ಸಿಇಟಿಯಲ್ಲಿ ವಿಜಯಪುರದ ವಿದ್ಯಾರ್ಥಿಗೆ ಟಾಪ್ 1ಕ್ಕಿಂತ ದೊಡ್ಡ ರ್ಯಾಂಕ್
ಕೆ-ಸಿಇಟಿಯಲ್ಲಿ ವಿಜಯಪುರದ ವಿದ್ಯಾರ್ಥಿಗೆ ಟಾಪ್ 1ಕ್ಕಿಂತ ದೊಡ್ಡ ರ್ಯಾಂಕ್
ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ವಿಜಯ್ ಮಾಡಿಸಿದ ಪೂಜೆ ಯಾವುದು?
ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ವಿಜಯ್ ಮಾಡಿಸಿದ ಪೂಜೆ ಯಾವುದು?
ಮೂಕಾಂಬಿಕಾ ದೇವಿಗೆ ಬೆಳ್ಳಿಯ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ್
ಮೂಕಾಂಬಿಕಾ ದೇವಿಗೆ ಬೆಳ್ಳಿಯ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ್
ನಸೀರ್ ಅಹ್ಮದ್‌ ‘ದಿವಾಳಿ’ ಎಂದು ಘೋಷಿಸಿದ NCLT: MLC ಸ್ಥಾನಕ್ಕೂ ಕುತ್ತು!
ನಸೀರ್ ಅಹ್ಮದ್‌ ‘ದಿವಾಳಿ’ ಎಂದು ಘೋಷಿಸಿದ NCLT: MLC ಸ್ಥಾನಕ್ಕೂ ಕುತ್ತು!
ಮೂಕಾಂಬಿಕೆಯ ಮಹಿಮೆ, ದೇವಿ ಶಕ್ತಿ ಬಗ್ಗೆ ಆಧ್ಯಾತ್ಮಕ ಚಿಂತಕ ಹೇಳಿದ್ದಿಷ್ಟು
ಮೂಕಾಂಬಿಕೆಯ ಮಹಿಮೆ, ದೇವಿ ಶಕ್ತಿ ಬಗ್ಗೆ ಆಧ್ಯಾತ್ಮಕ ಚಿಂತಕ ಹೇಳಿದ್ದಿಷ್ಟು
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳುನಾಡು ಸಿಎಂ ವಿಜಯ್​
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳುನಾಡು ಸಿಎಂ ವಿಜಯ್​
ನೀವೇ ಸಿಎಂ ಆಗಿ ಎಂದಾಗಲೂ ಆಗಿಲ್ಲವಲ್ಲ: ಹೆಚ್​.ಡಿ.ಕುಮಾರಸ್ವಾಮಿ ಟಾಂಗ್
ನೀವೇ ಸಿಎಂ ಆಗಿ ಎಂದಾಗಲೂ ಆಗಿಲ್ಲವಲ್ಲ: ಹೆಚ್​.ಡಿ.ಕುಮಾರಸ್ವಾಮಿ ಟಾಂಗ್