ಟಾಲಿವುಡ್ ಹೀರೋ ನಾಗಾರ್ಜುನ ಒಡೆತನದ ಎನ್. ಕನ್ವೆನ್ಷನ್ ಹಾಲ್ನ ನೆಲಸಮ ಮಾಡಿದ್ದಾರೆ. ದಾಖಲೆಗಳನ್ನು ನೀಡಿ ಅವರು ಕೋರ್ಟ್ನಿಂದ ಮಧ್ಯಂತರ ಆದೇಶ ತೆಗೆದುಕೊಂಡು ಬಂದಿದ್ದರು. ಆದಾಗ್ಯೂ ಈ ಕಟ್ಟಡವನ್ನು ನೆಲಸಮ ಮಾಡಲಾಗಿದೆ. ಈ ಬಗ್ಗೆ ಅವರು ಸಿಟ್ಟಾಗಿದ್ದಾರೆ. ತಮ್ಮ ತಪ್ಪಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಕಟ್ಟಡ ನೆಲಕಚ್ಚುತ್ತಿರುವ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರ ಬಾಡಿಗೆ ಬಗ್ಗೆ ಇಲ್ಲಿದೆ ಮಾಹಿತಿ.
ಎನ್.ಕನ್ವೆನ್ಷನ್ ಹಾಲ್ ಇರೋದು ಹೈದರಾಬಾದ್ನ ಮಾದಾಪುರದ ತಿಮ್ಮಿಡಕುಂಟ ಕೆರೆ ಸಮೀಪ. ಇದು ನಗರದ ಅತ್ಯಂತ ದುಬಾರಿ ಪ್ರದೇಶಗಳಲ್ಲಿ ಒಂದು. ಮದುವೆ, ಹುಟ್ಟುಹಬ್ಬದ ಪಾರ್ಟಿ, ಗೆಟ್ ಟುಗೆದರ್ ಕಾರ್ಯಕ್ರಮಗಳಿಗೆ ಇದನ್ನು ಬುಕ್ ಮಾಡಲಾಗುತ್ತಿತ್ತು. ಈಗ ಕೆರೆ ಒತ್ತುವರಿ ಆರೋಪದ ಅಡಿಯಲ್ಲಿ ಇದನ್ನು ಒಡೆದು ಹಾಕಲಾಗಿದೆ. ಇದು ನಾಗಾರ್ಜುನ ಅವರಿಗೆ ಶಾಕಿಂಗ್ ಎನಿಸಿದೆ.
ಎನ್. ಕನ್ವೆನ್ಷನ್ನಲ್ಲಿ ಸಮಾರಂಭ ಮಾಡಿದರೆ ಬಾಡಿಗೆ ಎಷ್ಟು ಎಂದು ಅನೇಕರು ಕೇಳಿದ್ದಾರೆ. ನಗರದ ಅನೇಕ ಉದ್ಯಮಿಗಳು, ಚಿತ್ರರಂಗದ ಗಣ್ಯರು ಮತ್ತು ರಾಜಕಾರಣಿಗಳು ಇಲ್ಲಿ ಸಮಾರಂಭ ಮಾಡಲು ಇಚ್ಛೆ ತೋರಿಸುತ್ತಿದ್ದರು. ಹಾಲ್ನ ಪಕ್ಕದಲ್ಲಿ ಇರುವ ಸುಂದರ ಕೆರೆ ಎಲ್ಲರನ್ನು ಆಕರ್ಷಿಸುತ್ತಿತ್ತು. ಇದು ನಗರದ ಹೃದಯದ ಭಾಗದಲ್ಲಿ ಇರುವುದರಿಂದ ಆಗಮಿಸೋ ಅತಿಥಿಗಳಿಗೆ ಸುಲಭ ಆಗುತ್ತಿತ್ತು. ನಗರದ ಯಾವುದೇ ಫಂಕ್ಷನ್ ಹಾಲ್ನಲ್ಲಿ ಕಾಣದ ನಿಸರ್ಗ ಸೊಬಗು ಇಲ್ಲಿ ಕಾಣುತ್ತಿತ್ತು ಅನ್ನೋದು ವಿಶೇಷ.
ಮೂರು ಸಾವಿರಕ್ಕೂ ಹೆಚ್ಚು ಮಂದಿ ಇಲ್ಲಿ ಕುಳಿತು ಸಮಾರಂಭ ನೋಡಬಹುದಿತ್ತು ಬರೋಬ್ಬರಿ 27 ಸಾವಿರ ಚದರ ಅಡಿ ವಿಸ್ತೀರ್ಣದದಲ್ಲಿ ಈ ಹಾಲ್ನ ಆವರಣ ಇದೆ. ಕೆಲವೊಮ್ಮೆ ಇಲ್ಲಿ ಸಿನಿಮಾದ ಕಾರ್ಯಕ್ರಮಗಳೂ ನಡೆದಿದ್ದು ಇದೆ. ಬೃಹತ್ ಫಂಕ್ಷನ್ ಹಾಲ್ ಜೊತೆಗೆ ಬರ್ತ್ ಡೇ ಆಚರಣೆಗೆ ಮಿನಿ ಫಂಕ್ಷನ್ ಹಾಲ್ಗಳೂ ಇಲ್ಲಿ ಇವೆ. ಇದರ ಕನಿಷ್ಠ ಬಾಡಿಗೆ ರೂ.5 ಲಕ್ಷದಿಂದ ಆರಂಭವಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಭಾರತದ ಮೂರನೇ ಶ್ರೀಮಂತ ನಟ ನಾಗಾರ್ಜುನ; ನಟನ ಆಸ್ತಿ ವಿವರ
ಇಲ್ಲಿನ ಹಾಲ್ಗೆ ಗಂಟೆಗೆ ದರ ವಿಧಿಸುತ್ತಾರೆ ಎಂಬ ಮಾತೂ ಇದೆ. ಹೈದರಾಬಾದ್ನಲ್ಲಿ ಅನೇಕ ಫಂಕ್ಷನ್ ಹಾಲ್ ಇದ್ದರೂ ಎನ್. ಕನ್ವೆನ್ಷನ್ ಹಾಲ್ ಹೆಚ್ಚು ಗಮನ ಸೆಳೆಯುತ್ತದೆ. ಇಲ್ಲಿನ ದರ ತುಸು ಹೆಚ್ಚಾದರೂ ಹಿತಕರ ವಾತಾವರಣದಲ್ಲಿ ನಿಸರ್ಗದ ಸೊಬಗನ್ನು ಸವಿದು ಅತಿಥಿಗಳು ವಿಶೇಷ ರೀತಿಯಲ್ಲಿ ಸಂಭ್ರಮಿಸುತ್ತಾರೆ. ಈಗ ಈ ಕಟ್ಟಡವೇ ಇಲ್ಲದಂತೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.