ಸೂರ್ಯವಂಶಿ ಬಿಡುಗಡೆಗೆ ಅಂತೂ ದಿನ ಕೂಡಿಬಂತು; ಇಂದು ದಿನಾಂಕ ಘೋಷಣೆ ಮಾಡಿದ ಅಕ್ಷಯ್​ ಕುಮಾರ್​-ಕತ್ರೀನಾ ಕೈಫ್​

|

Updated on: Mar 14, 2021 | 5:06 PM

ಸೂರ್ಯವಂಶಿಯಲ್ಲಿ ಅಕ್ಷಯ್​ ಕುಮಾರ್​ ಡಿಎಸ್​ಪಿ ಪಾತ್ರದಲ್ಲಿ ಮಿಂಚಿದ್ದಾರೆ. ಕತ್ರೀನಾ ಅವರ ಪ್ರಿಯತಮೆಯಾಗಿ ನಟಿಸಿದ್ದಾರೆ. ಇನ್ನು ಈ ಜೋಡಿ 9ವರ್ಷಗಳ ಬಳಿಕ ಒಟ್ಟಾಗಿ ನಟಿಸುತ್ತಿರುವುದು ಇನ್ನೊಂದು ವಿಶೇಷ.

ಸೂರ್ಯವಂಶಿ ಬಿಡುಗಡೆಗೆ ಅಂತೂ ದಿನ ಕೂಡಿಬಂತು; ಇಂದು ದಿನಾಂಕ ಘೋಷಣೆ ಮಾಡಿದ ಅಕ್ಷಯ್​ ಕುಮಾರ್​-ಕತ್ರೀನಾ ಕೈಫ್​
ಅಕ್ಷಯ್​ ಕುಮಾರ್​ ಮತ್ತು ಕತ್ರೀನಾ ಕೈಫ್​
Follow us on

ಅಕ್ಷಯ್​ ಕುಮಾರ್​ ಮತ್ತು ಕತ್ರೀನಾ ಕೈಫ್ ಅಭಿನಯದ ಸೂರ್ಯವಂಶಿ ಸಿನಿಮಾ ಬಿಡುಗಡೆಯ ದಿನಾಂಕವನ್ನು ಇಂದು ಘೋಷಿಸಲಾಗಿದೆ. ಈ ಸಿನಿಮಾದ ನಿರ್ದೇಶಕ ರೋಹಿತ್​ ಶೆಟ್ಟಿಯವರ ಜನ್ಮದಿನದಂದೇ ಅಕ್ಷಯ್ ಕುಮಾರ್​ ಮತ್ತು ಕತ್ರೀನಾ ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಚಿತ್ರದ ಬಿಡುಗಡೆ ದಿನಾಂಕವನ್ನು ಬಹಿರಂಗ ಪಡಿಸಿದ್ದು ವಿಶೇಷ. ಅಂದ ಹಾಗೆ, ಬಹುನಿರೀಕ್ಷಿತ ಸೂರ್ಯವಂಶಿ ಏಪ್ರಿಲ್​ 30ರಂದು ತೆರೆಗೆ ಬರಲಿದೆ.

ಟ್ವೀಟ್​ ಮಾಡಿರುವ ನಟ ಅಕ್ಷಯ್​ ಕುಮಾರ್, ನನಗೆ ರೋಹಿತ್​ ಶೆಟ್ಟಿಯವರೊಂದಿಗೆ ಕೆಲಸ ಮಾಡಲು, ಬಾಂಧವ್ಯ ಬೆಳೆಯಲು ಕಷ್ಟವಾಗಲಿಲ್ಲ. ಇಬ್ಬರಲ್ಲೂ ಇದ್ದ ‘ಆ್ಯಕ್ಷನ್​’ ಎಂಬ ಮನಸ್ಥಿತಿ ನಮ್ಮನ್ನು ಬೇಗನೇ ಒಂದು ಮಾಡಿತು. ಹ್ಯಾಪಿ ಬರ್ತ್​ ಡೇ ರೋಹಿತ್​ ಎಂದು ಬರೆದುಕೊಂಡಿದ್ದಾರೆ. ಹಾಗೇ ಇನ್ನೊಂದು ಟ್ವೀಟ್​ನಲ್ಲಿ ಸೂರ್ವವಂಶಿ ಸಿನಿಮಾದ ಟೀಸರ್​ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಮಾರ್ಚ್​ 2ರಂದು ಸೂರ್ಯವಂಶಿಯ ಟ್ರೇಲರ್​ ಬಿಡುಗಡೆಯಾಯಿತು. ನಮ್ಮ ಪ್ರೀತಿಯ ಪ್ರೇಕ್ಷಕ ಅಭಿಮಾನಿಗಳು ಅದನ್ನು ಅಷ್ಟೇ ಪ್ರೀತಿಯಿಂದ ಒಪ್ಪಿಕೊಂಡರು. ಆದರೆ ಕೆಲವೇ ದಿನಗಳಲ್ಲಿ ಇಡೀ ಜಗತ್ತು ಸ್ತಬ್ಧವಾಯಿತು. ಇದಕ್ಕೆ ಕಾರಣವೂ ಗೊತ್ತು. ಅದಾದ ಬಳಿಕ ನಾವು ನಮ್ಮ ಸಿನಿಮಾ ಬಿಡುಗಡೆಯ ದಿನಾಂಕವನ್ನೂ ಮುಂದೂಡಿದ್ದಾಗಿ ಘೋಷಣೆ ಮಾಡಿದೆವು. ಹಾಗೇ, ಸೂರ್ಯವಂಶಿ ಸಿನಿಮಾ ಸರಿಯಾದ ಸಮಯಲ್ಲಿ, ಆದಷ್ಟು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂಬ ಭರವಸೆಯನ್ನೂ ನೀಡಿದ್ದೆವು. ಆ ಭರವಸೆ ನೀಡಿ ಒಂದು ವರ್ಷವೇ ಕಳೆಯಿತು. ಈ ಬಾರಿ ನಮ್ಮ ಪ್ರಾಮಿಸ್​ನಲ್ಲಿ ಯಾವುದೇ ಬದಲಾವಣೆ ಇಲ್ಲ. ಏಪ್ರಿಲ್​ 30ರಂದು ಖಂಡಿತ ಸಿನಿಮಾ ಬಿಡುಗಡೆಯಾಗಲಿದೆ ಎಂದು ಟ್ರೇಲರ್​ ವಿಡಿಯೋದ ಪ್ರಾರಂಭದಲ್ಲಿ ಹೇಳಲಾಗಿದೆ.

ಸಿನಿಮಾದ ನಾಯಕಿ ಕತ್ರೀನಾ ಕೈಫ್​ ಕೂಡ ಸಿನಿಮಾ ಟ್ರೇಲರ್​ ಜತೆ ಬಿಡುಗಡೆ ದಿನಾಂಕವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿಕೊಂಡಿದ್ದಾರೆ. ಸೂರ್ಯವಂಶಿ ಜಗತ್ತಿನಾದ್ಯಂತ ಏಪ್ರಿಲ್​ 30ರಂದು ತೆರೆಗೆ ಅಪ್ಪಳಿಸುತ್ತಿದೆ ಎಂದು ಖುಷಿಯನ್ನು ಹಂಚಿಕೊಂಡಿದ್ದಾರೆ.

ಸೂರ್ಯವಂಶಿಯಲ್ಲಿ ಅಕ್ಷಯ್​ ಕುಮಾರ್​ ಡಿಎಸ್​ಪಿ ಪಾತ್ರದಲ್ಲಿ ಮಿಂಚಿದ್ದಾರೆ. ಕತ್ರೀನಾ ಅವರ ಪ್ರಿಯತಮೆಯಾಗಿ ನಟಿಸಿದ್ದಾರೆ. ಇನ್ನು ಈ ಜೋಡಿ 9ವರ್ಷಗಳ ಬಳಿಕ ಒಟ್ಟಾಗಿ ನಟಿಸುತ್ತಿರುವುದು ಇನ್ನೊಂದು ವಿಶೇಷ. ಈ ಹಿಂದೊಮ್ಮೆ ಅಕ್ಷಯ್ ಕುಮಾರ್ ಬಗ್ಗೆ ಮಾತನಾಡಿದ್ದ ಕತ್ರೀನಾ ಕೈಫ್​, ಅಕ್ಷಯ್ ಕುಮಾರ್ ಅವರು ತುಂಬ ಶ್ರಮಜೀವಿ. ಅವರಿಂದ ನಾನು ಶ್ರದ್ಧೆ, ಸಮಯನಿಷ್ಠೆಯನ್ನು ಕಲಿತಿದ್ದೇನೆ ಎಂದೂ ಹೇಳಿದ್ದರು. ಅಕ್ಷಯ್ ಕುಮಾರ್​ ಮತ್ತು ಕತ್ರೀನಾ ಈ ಹಿಂದೆ ನಮಸ್ತೆ ಲಂಡನ್​, ಸಿಂಗ್​ ಈಸ್​ ಕಿಂಗ್​, ಹಮ್ಕೋ ದಿವಾನಾ ಕರ್​ ಗಯೆ, ವೆಲ್​ಕಮ್​ ಮತ್ತು ಟೀಸ್​ ಮರ್​ ಖಾನ್​ ಸಿನಿಮಾಗಳಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದರು. ಸೂರ್ಯವಂಶಿಯ ಕ್ಲೈಮ್ಯಾಕ್ಸ್​ನಲ್ಲಿ ಅಜಯ್​ ದೇವಗನ್​ ಮತ್ತು ರಣವೀರ್​ ಸಿಂಗ್ ಕಾಣಿಸಿಕೊಳ್ಳಲಿದ್ದು, ಅಭಿಮಾನಿಗಳಂತೂ ತುಂಬ ಕುತೂಹಲದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: ‘ಅಸಭ್ಯವಾಗಿ ಮುಟ್ಟಿದರೆ ಬಿಗ್​ ಬಾಸ್​ ಸಹಿಸಲ್ಲ’: ಸುದೀಪ್​ ಹೀಗೆ ಎಚ್ಚರಿಕೆ ನೀಡಿದ್ದು ಯಾರಿಗೆ?

 

Published On - 5:02 pm, Sun, 14 March 21