Shubha Poonja: ಈ ವಾರ ಸೇಫ್ ಆದ ಶುಭಾ ಪೂಂಜಾಗೆ ಕಿಚ್ಚ ಸುದೀಪ್ ಕಡೆಯಿಂದ ಸರ್ಪ್ರೈಸ್ ಗಿಫ್ಟ್
ಬಿಗ್ ಬಾಸ್ನ ಸೂಪರ್ ಸಂಡೆ ವಿತ್ ಸುದೀಪ ಕಾರ್ಯಕ್ರಮದಲ್ಲಿ ಸುದೀಪ್ ಮಾತನಾಡಿದ್ದಾರೆ. ಈ ವಿಡಿಯೋವನ್ನು ಕಲರ್ಸ್ ಕನ್ನಡ ವಾಹಿನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ವೀಕೆಂಡ್ ಬಂತೆಂದರೆ ಬಿಗ್ ಬಾಸ್ ಮನೆಗೆ ವಿಶೇಷ ಕಳೆ ಬರುತ್ತದೆ. ಕಿಚ್ಚ ಸುದೀಪ್ ಬರೋದೇ ಇದಕ್ಕೆ ಕಾರಣ. ‘ಕನ್ನಡ ಬಿಗ್ ಬಾಸ್ ಸೀಸನ್ 8’ ಎರಡನೇ ವಾರ ಪೂರ್ಣಗೊಳಿಸುತ್ತಿದೆ. ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರ ಹೋಗುತ್ತಾರೆ ಅನ್ನೋದು ಸದ್ಯದ ಕುತೂಹಲ. ಈ ಕುತೂಹಲಗಳ ಮಧ್ಯೆಯೇ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಶುಭಾ ಪೂಂಜಾ ಬೆನ್ನು ತಟ್ಟಿದ್ದಾರೆ. ಎರಡನೇ ವಾರ ನೇರವಾಗಿ ನಾಮಿನೇಟ್ ಆದವರ ಸಾಲಿನಲ್ಲಿ ಪೂಜಾ ಇದ್ದರು. ಆದರೆ, ಅವರು ಮನೆಯಲ್ಲಿ ಸ್ಪರ್ಧಾತ್ಮಕವಾಗಿ ಆಡಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಗಿತ್ತು. ಅಷ್ಟೇ ಅಲ್ಲ, ಟಾಸ್ಕ್ ವಿಚಾರ ಬಂದಾಗಲೂ ಎಲ್ಲರನ್ನೂ ಒಂದೇ ರೀತಿ ಕಂಡಿದ್ದರು. ಎದುರಾಳಿಗಳಿಗೂ ಟಿಪ್ಸ್ ನೀಡಿದ್ದರು ಶುಭಾ. ಇದು ಸುದೀಪ್ಗೆ ಇಷ್ಟವಾಗಿದೆ. ಹೀಗಾಗಿ, ಶುಭಾಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿ ಚಪ್ಪಾಳೆ ತಟ್ಟಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಈ ವಾರ ಯಾರು ಸೇಫ್ ಆಗುತ್ತಾರೆ ಎನ್ನುವ ವಿಚಾರವನ್ನು ಮನೆ ಸದಸ್ಯರಿಗೆ ಕೇಳಿದಾಗ ಬಹುತೇಕರು ಶುಭಾ ಅವರ ಹೆಸರನ್ನು ಹೇಳಿದ್ದರು. ಅಂತೆಯೇ ಶುಭಾ ಸೇಫ್ ಆದರು. ಸೇಫ್ ಆಗುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಶುಭಾ ಕುಣಿದು ಕುಪ್ಪಳಿಸಿದ್ದಾರೆ.
ಬಿಗ್ ಬಾಸ್ನ ಸೂಪರ್ ಸಂಡೆ ವಿತ್ ಸುದೀಪ ಕಾರ್ಯಕ್ರಮದಲ್ಲಿ ಸುದೀಪ್ ಮಾತನಾಡಿದ್ದಾರೆ. ಈ ವಿಡಿಯೋವನ್ನು ಕಲರ್ಸ್ ಕನ್ನಡ ವಾಹಿನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಈ ವಾರ ಒಬ್ಬರು ಆಲ್ರೌಂಡರ್ ಸಿಕ್ಕಿದ್ರು ಅಂತ ನನಗನ್ನಿಸಿತು. ಆಟ ಆಡುವಾಗ ಮನಸ್ಸಿಟ್ಟು ಆಡಿದರು. ತಪ್ಪು ಮಾಡಿದಾಗ ಒಪ್ಪಿಕೊಂಡರು. ಬೇರೆಯವರು ತಪ್ಪು ಮಾಡಿದಾಗ ನೇರವಾಗಿ ಹೇಳಿದರು. ಸೈಡ್ಗೆ ಕರೆದು ತಿದ್ದಿದರು. ಚಿಕ್ಕ ಚಿಕ್ಕ ವಿಚಾರಗಳನ್ನು ದೊಡ್ಡದಾಗಿ ತೆಗೆದುಕೊಳ್ಳಲ್ಲ. ಅವರು ಬಹಳಾನೇ ಪ್ರಾಮಾಣಿಕ. ಅವರು ಬೇರಾರು ಅಲ್ಲ ನಮ್ಮ ಗಾಬರಿ ಗೋಪಾಲಮ್ಮ ಶುಭಾ ಪೂಂಜಾ ಎಂದರು ಸುದೀಪ್. ಈ ಮೂಲಕ ಸುದೀಪ್ ಈ ವಾರದ ಚಪ್ಪಾಳೆಯನ್ನು ಶುಭಾಗೆ ನೀಡಿದರು. ಇದು ಅವರಿಗೆ ಸರ್ಪ್ರೈಸ್ ಗಿಫ್ಟ್ ಸಿಕ್ಕಂತಾಗಿದೆ.
View this post on Instagram