AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada 8: ಬಿಗ್​ ಬಾಸ್​​ನಲ್ಲಿರುವ ಶುಭಾ ಪೂಂಜಾಗೆ ಅಶ್ಲೀಲ ಕಮೆಂಟ್​; ನಿಮಗೂ ಅಕ್ಕ-ತಂಗಿ ಇದ್ದಾರೆ ಅಲ್ವೇ? ನಟಿ ಪ್ರಶ್ನೆ!

ಬಿಗ್​ ಬಾಸ್​ ಮನೆಯಲ್ಲಿರುವ ಸ್ಪರ್ಧಿಗಳ ಬಗ್ಗೆ ಹೊರಗೆ ಒಂದು ಚರ್ಚೆ ಇದ್ದೇ ಇರುತ್ತದೆ. ಸಾಮಾಜಿಕ ಜಾಲತಾಣದಲ್ಲಿರುವ ಕೆಲ ಟ್ರೋಲ್​ ಪೇಜ್​ಗಳು ಮನೆಯ ಒಳಗೆ ಹೋದವರನ್ನು ಬೆಂಬಲಿಸಿ ಪೋಸ್ಟ್​ ಮಾಡಿದ ಉದಾಹರಣೆ ಕೂಡ ಇದೆ.

Bigg Boss Kannada 8: ಬಿಗ್​ ಬಾಸ್​​ನಲ್ಲಿರುವ ಶುಭಾ ಪೂಂಜಾಗೆ ಅಶ್ಲೀಲ ಕಮೆಂಟ್​; ನಿಮಗೂ ಅಕ್ಕ-ತಂಗಿ ಇದ್ದಾರೆ ಅಲ್ವೇ? ನಟಿ ಪ್ರಶ್ನೆ!
ರಾಜೇಶ್ ದುಗ್ಗುಮನೆ
|

Updated on:Mar 02, 2021 | 5:58 PM

Share

ನಟಿ ಶುಭಾ ಪೂಂಜಾ ಸ್ಯಾಂಡಲ್​ವುಡ್​ನಲ್ಲಿ ಮಿಂಚಿದ್ದರು. ಇತ್ತೀಚೆಗೆ ಅವರಿಗೆ ಬೇಡಿಕೆ ಕಡಿಮೆ ಆಗಿದೆ ಎಂಬುದು ಗುಟ್ಟಿನ ವಿಚಾರವೇನಲ್ಲ. ಹೀಗಿರುವಾಗಲೇ ಅವರು ಬಿಗ್​ ಬಾಸ್​ ಮನೆ ಪ್ರವೇಶಿಸಿದ್ದಾರೆ. ಮೊದಲ ದಿನವೇ ಕಣ್ಣೀರು ಕೂಡ ಹಾಕಿದ್ದಾರೆ. ಹೀಗಿರುವಾಗಲೇ ಅವರ ಬಗ್ಗೆ ಕೆಟ್ಟ ಕಮೆಂಟ್​ ಒಂದು ಬಂದಿದೆ! ಈ ಬಗ್ಗೆ ಅವರು ಸಿಟ್ಟಾಗಿದ್ದಾರೆ. ನಿಮಗೆ ಅಕ್ಕ ತಂಗಿ ಇದ್ದಾರೆ ಅಲ್ಲವೇ ಎಂದು ಕೂಡ ಕೇಳಿದ್ದಾರೆ! ಬಿಗ್​ ಬಾಸ್​ ಮನೆಯಲ್ಲಿರುವ ಸ್ಪರ್ಧಿಗಳ ಬಗ್ಗೆ ಹೊರಗೆ ಒಂದು ಚರ್ಚೆ ಇದ್ದೇ ಇರುತ್ತದೆ. ಸಾಮಾಜಿಕ ಜಾಲತಾಣದಲ್ಲಿರುವ ಕೆಲ ಟ್ರೋಲ್​ ಪೇಜ್​ಗಳು ಮನೆಯ ಒಳಗೆ ಹೋದವರನ್ನು ಬೆಂಬಲಿಸಿ ಪೋಸ್ಟ್​ ಮಾಡಿದ ಉದಾಹರಣೆ ಕೂಡ ಇದೆ. ಇದರ ಜತೆಗೆ ಬಿಗ್​ ಬಾಸ್​ ಮನೆಗೆ ತೆರಳಿದವರ ಆಪ್ತರು ಅಥವಾ ಕುಟುಂಬದವರು ಅವರ ಸೋಶಿಯಲ್​ ಮೀಡಿಯಾವನ್ನು ಹ್ಯಾಂಡಲ್​ ಮಾಡುತ್ತಾರೆ. ಈಗ ಬಿಗ್​ ಬಾಸ್​ ಮನೆಗೆ ತೆರಳಿದ ರಘು ಗೌಡ, ಶುಭಾ ಪೂಂಜಾ ಸೇರಿ ಅನೇಕರ ಸಾಮಾಜಿಕ ಖಾತೆಯನ್ನು ಅವರ ಕುಟುಂಬದವರೇ ನೋಡಿಕೊಳ್ಳುತ್ತಿದ್ದಾರೆ.

ಅದೇ ರೀತಿ ಶುಭಾ ಪೂಂಜಾ ಅವರ ಫೇಸ್​ಬುಕ್​ ಹ್ಯಾಂಡಲ್​ ಮಾಡುತ್ತಿರುವವರು ಬಿಗ್​ ಬಾಸ್​ ಮನೆ ಒಳಗೆ ಅವರು ಇರುವ ಫೋಟೋ ಒಂದನ್ನು ಹಾಕಿದ್ದರು. ಈ ಫೋಟೋ ನೋಡಿದ ಕೆಲ ಅಭಿಮಾನಿಗಳು ಆಲ್​ ದಿ ಬೆಸ್ಟ್​ ಎಂದು ಕಮೆಂಟ್​ ಹಾಕಿದ್ದರು. ಆದರೆ, ಕೆಲವರು ಮಾತ್ರ ಕೆಟ್ಟದಾಗಿ ಕಮೆಂಟ್​ ಹಾಕಿದ್ದರು.

ಇದಕ್ಕೆ ಶುಭಾ ಪೂಂಜಾ ಫೇಸ್​ಬುಕ್​ ಖಾತೆಯಿಂದ ಉತ್ತರ ಸಿಕ್ಕಿದೆ. ನಿಮಗೂ ಅಕ್ಕ-ತಂಗಿ ಇದ್ದಾರೆ ಅಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಕೆಟ್ಟದಾಗಿ ಪ್ರಶ್ನೆ ಮಾಡಿದವರಿಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ‘ಸುದೀಪ್ ಅಂಕಲ್.. ದಯವಿಟ್ಟು ಮನಸ್ಸು ಮಾಡಿ ನನಗೆ ಬಿಗ್​ ಬಾಸ್ ಮನೆಗೆ ಹೋಗೋಕೆ ಅವಕಾಶ ಮಾಡಿಕೊಡಿ, ಪ್ಲೀಸ್​!’

Published On - 5:54 pm, Tue, 2 March 21

ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್