‘ಟಾಕ್ಸಿಕ್​’ ಬಿಟ್ಟುಕೊಡುವ ದಿನಾಂಕದಲ್ಲಿ ರಿಲೀಸ್​ ಆಗತ್ತಾ ಅಕ್ಷಯ್​ ಕುಮಾರ್​ ಸಿನಿಮಾ?

ಯಶ್​ ನಟನೆಯ ‘ಟಾಕ್ಸಿಕ್’ ಸಿನಿಮಾದ ರಿಲೀಸ್​ ಡೇಟ್​ ಬದಲಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ‘ಟಾಕ್ಸಿಕ್​’ ಬಿಟ್ಟುಕೊಡುವ ದಿನಾಂಕದ ಮೇಲೆ ಬೇರೆ ನಟರ ಸಿನಿಮಾಗಳು ಕಣ್ಣಿಟ್ಟಿವೆ. 2025ರ ಏ.​10ಕ್ಕೆ ಅಕ್ಷಯ್​ ಕುಮಾರ್​ ಅಭಿನಯದ ‘ಜಾಲಿ ಎಲ್​ಎಲ್​ಬಿ 3’ ಸಿನಿಮಾ ತೆರೆಕಾಣುವ ಸೂಚನೆ ಸಿಕ್ಕಿದೆ. ಆ ಬಗ್ಗೆ ಇಲ್ಲಿದೆ ವಿವರ..

‘ಟಾಕ್ಸಿಕ್​’ ಬಿಟ್ಟುಕೊಡುವ ದಿನಾಂಕದಲ್ಲಿ ರಿಲೀಸ್​ ಆಗತ್ತಾ ಅಕ್ಷಯ್​ ಕುಮಾರ್​ ಸಿನಿಮಾ?
ಯಶ್​, ಅಕ್ಷಯ್​ ಕುಮಾರ್​
Edited By:

Updated on: Aug 08, 2024 | 11:33 AM

ನಟ ಅಕ್ಷಯ್​ ಕುಮಾರ್​ ಅವರು ಒಂದರ ಹಿಂದೊಂದು ಸಿನಿಮಾಗಳನ್ನು ಮಾಡುತ್ತಾ ಬ್ಯುಸಿ ಆಗಿದ್ದಾರೆ. ಅವರು ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ಬಿಡುಗಡೆ ಆಗಿ ಸೋಲುತ್ತಿವೆ. ಮುಂಬರುವ ಸಿನಿಮಾಗಳ ರಿಲೀಸ್​ ದಿನಾಂಕದ ಬಗ್ಗೆಯೂ ಈಗಲೇ ಪ್ಲ್ಯಾನ್​ ಆಗಿದೆ. ಅಕ್ಷಯ್​ ಕುಮಾರ್​ ಅವರು ‘ಜಾಲಿ ಎಲ್​ಎಲ್​ಬಿ 3’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಬಿಡುಗಡೆ ಡೇಟ್​ ಬಗ್ಗೆ ಒಂದು ಹೊಸ ಸುದ್ದಿ ಕೇಳಿಬಂದಿದೆ. 2025ರ ಏಪ್ರಿಲ್​ 10ರಂದು ಈ ಸಿನಿಮಾ ರಿಲೀಸ್​ ಆಗುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ.

‘ಜಾಲಿ ಎಲ್​ಎಲ್​ಬಿ 3’ ಸಿನಿಮಾದಲ್ಲಿ ಅಕ್ಷಯ್​ ಕಮಾರ್​ ಜೊತೆ ಅರ್ಷದ್​ ವಾರ್ಸಿ ಅಭಿನಯಿಸುತ್ತಿದ್ದಾರೆ. ಒಂದೊಳ್ಳೆಯ ರಿಲೀಸ್​ ಡೇಟ್​ ಸಿಕ್ಕರೆ ಚಿತ್ರತಂಡಕ್ಕೆ ನಿಜಕ್ಕೂ ಅನುಕೂಲ ಆಗುತ್ತದೆ. 2025ರ ಏಪ್ರಿಲ್​ 10ಕ್ಕೆ ಸಿನಿಮಾ ಬಿಡುಗಡೆ ಮಾಡಿದರೆ, ಅದರ ಜೊತೆ ಬರುವ ಸಾಲು ಸಾಲು ರಜೆಗಳಿಂದ ಸಿನಿಮಾಗೆ ಸಖತ್​ ಕಲೆಕ್ಷನ್​ ಆಗಲಿದೆ ಎಂಬುದು ನಿರ್ಮಾಪಕರ ಲೆಕ್ಕಾಚಾರ.

ಯಶ್​ ಅಭಿನಯದ ‘ಟಾಕ್ಸಿಕ್​’ ಸಿನಿಮಾ ಮುಂದಿನ ವರ್ಷ ಏಪ್ರಿಲ್​ 10ಕ್ಕೆ ಬಿಡುಗಡೆ ಆಗಲಿದೆ ಎಂದು ಅಭಿಮಾನಿಗಳು ಕಾದಿದ್ದಾರೆ. ಆದರೆ ಈಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ‘ಟಾಕ್ಸಿಕ್​’ ರಿಲೀಸ್ ಡೇಟ್​ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಯಶ್​ ಬಿಟ್ಟುಕೊಡುವ ಈ ದಿನಾಂಕವನ್ನು ಉಪಯೋಗಿಸಿಕೊಳ್ಳಲು ‘ಜಾಲಿ ಎಲ್​ಎಲ್​ಬಿ 3’ ಸಿನಿಮಾ ತಂಡದವರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ‘ನಿರ್ಮಾಪಕರಿಂದ ಮೋಸ ಆಗಿದೆ, ನನಗೆ ಹಣ ಕೊಟ್ಟಿಲ್ಲ’: ಚಿತ್ರರಂಗದ ಕರಾಳ ಸತ್ಯ ಹೇಳಿದ ಅಕ್ಷಯ್​ ಕುಮಾರ್​

ಅಕ್ಷಯ್​ ಕುಮಾರ್​ ಅವರು ಸಿನಿಮಾಗಳಿಗೆ ಹಣ ಹೂಡಿದ ನಿರ್ಮಾಪಕರು ಕೈ ಸುಟ್ಟುಕೊಳ್ಳುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅಕ್ಷಯ್​ ಕುಮಾರ್ ಅಭಿನಯಿಸಿದ ಯಾವುದೇ ಸಿನಿಮಾಗಳು ಕೂಡ ಗೆದ್ದಿಲ್ಲ. ಆದ್ದರಿಂದ ಹೇಗಾದರೂ ಮಾಡಿ ಅವರ ಮುಂದಿನ ಸಿನಿಮಾಗಳನ್ನು ಗೆಲ್ಲಿಸಲು ಪ್ರಯತ್ನಗಳು ನಡೆಯುತ್ತಿದೆ. ‘ಜಾಲಿ ಎಲ್ಎಲ್​ಬಿ 3’ ಸಿನಿಮಾ ಸೂಕ್ತ ದಿನಾಂಕದಲ್ಲಿ ತೆರೆಕಂಡರೆ ಬಾಕ್ಸ್​ ಆಫೀಸ್​ ಗಳಿಕೆಗೆ ಅನುಕೂಲ ಆಗಲಿದೆ ಎಂದು ತಂಡದವರು ಪ್ಲ್ಯಾನ್​ ಮಾಡುತ್ತಿದ್ದಾರೆ. ರಿಲೀಸ್​ ಡೇಟ್​ ಬಗ್ಗೆ ಅಧಿಕೃತ ಹೇಳಿಕೆ ಹೊರಬೀಳುವುದು ಬಾಕಿ ಇದೆ.​ ​

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:57 pm, Fri, 26 July 24

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us