‘ನಿರ್ಮಾಪಕರಿಂದ ಮೋಸ ಆಗಿದೆ, ನನಗೆ ಹಣ ಕೊಟ್ಟಿಲ್ಲ’: ಚಿತ್ರರಂಗದ ಕರಾಳ ಸತ್ಯ ಹೇಳಿದ ಅಕ್ಷಯ್​ ಕುಮಾರ್​

ಈ ವರ್ಷ ಆರಂಭದಲ್ಲಿ ಅಕ್ಷಯ್​ ಕುಮಾರ್​ ನಟನೆಯ ‘ಬಡೆ ಮಿಯಾ ಚೋಟೆ ಮಿಯಾ’ ತೆರೆಕಂಡಿತು. ಕೆಲವೇ ದಿನಗಳ ಹಿಂದೆ ‘ಸರ್ಫಿರಾ’ ಸಿನಿಮಾ ಬಿಡುಗಡೆ ಆಯಿತು. ಆಗಸ್ಟ್​ 15ರಂದು ‘ಖೇಲ್​ ಖೇಲ್​ ಮೇ’ ಸಿನಿಮಾ ರಿಲೀಸ್​ ಆಗಲಿದೆ. ಈಗಾಗಲೇ ಅವರಿಗೆ ಸತತ ಸೋಲು ಎದುರಾಗಿದೆ. ತಮಗೆ ನಿರ್ಮಾಪಕರು ಮೋಸ ಮಾಡಿದ್ದಾರೆ ಎಂದು ಅಕ್ಷಯ್​ ಕುಮಾರ್​ ಆರೋಪಿಸಿದ್ದಾರೆ.

‘ನಿರ್ಮಾಪಕರಿಂದ ಮೋಸ ಆಗಿದೆ, ನನಗೆ ಹಣ ಕೊಟ್ಟಿಲ್ಲ’: ಚಿತ್ರರಂಗದ ಕರಾಳ ಸತ್ಯ ಹೇಳಿದ ಅಕ್ಷಯ್​ ಕುಮಾರ್​
ಅಕ್ಷಯ್​ ಕುಮಾರ್
Follow us
|

Updated on: Jul 25, 2024 | 7:03 PM

ಬಾಲಿವುಡ್​ನ ಖ್ಯಾತ ನಟ ಅಕ್ಷಯ್​ ಕುಮಾರ್​ ಅವರು ಸರಿಯಾದ ಗೆಲುವು ಸಿಗದೇ ಸೊರಗಿದ್ದಾರೆ. ಅವರು ಮಾಡಿದ ಎಲ್ಲ ಸಿನಿಮಾಗಳೂ ಸೋಲುತ್ತಿವೆ. ಏನೇ ಪ್ರಯತ್ನ ಮಾಡಿದರೂ, ಎಷ್ಟೇ ಸಿನಿಮಾ ಮಾಡಿದರೂ ಅವರಿಗೆ ಸಕ್ಸಸ್​ ಸಿಗುತ್ತಿಲ್ಲ. ಗಡಿಬಿಡಿಯಲ್ಲಿ ಸಿನಿಮಾ ಕೆಲಸಗಳನ್ನು ಮುಗಿಸುವುದೇ ಈ ಪರಿಸ್ಥಿತಿಗೆ ಕಾರಣ ಎಂದು ಅನೇಕರು ಟೀಕಿಸಿದ್ದಾರೆ. ಈ ಬಗ್ಗೆ ಅಕ್ಷಯ್​ ಕುಮಾರ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ. ತಮಗೂ ಕೂಡ ನಿರ್ಮಾಪಕರಿಂದ ಮೋಸ ಆಗಿದೆ ಎಂದು ಅಕ್ಷಯ್​ ಕುಮಾರ್​ ಹೇಳಿದ್ದಾರೆ.

ಅಕ್ಷಯ್​ ಕುಮಾರ್​ ನಟನೆಯ ‘ಸರ್ಫಿರಾ’ ಸಿನಿಮಾ ಬಿಡುಗಡೆಯಾಗಿ ಸೋತಿತು. ಅದಕ್ಕೂ ಮುನ್ನ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾ ಕೂಡ ಬಾಕ್ಸ್​ ಆಫೀಸ್​ನಲ್ಲಿ ನೆಲ ಕಚ್ಚಿತ್ತು. ಆ ಸಿನಿಮಾವನ್ನು ನಿರ್ಮಾಣ ಮಾಡಿದ್ದ ಜಾಕಿ ಭಗ್ನಾನಿ ಮತ್ತು ವಶು ಭಗ್ನಾನಿ ಅವರು ಆಸ್ತಿ ಮಾರಿಕೊಳ್ಳುವ ಪರಿಸ್ಥಿತಿಗೆ ಬಂದರು. ಇದಕ್ಕೆಲ್ಲ ಅಕ್ಷಯ್​ ಕುಮಾರ್​ ಕಾರಣ ಎಂದು ಅನೇಕರು ಆರೋಪಿಸಿದ್ದುಂಟು.

ಇದನ್ನೂ ಓದಿ:  ‘ಉಚಿತ ಟೀ, ಸಮೋಸಾ ಕೊಡ್ತೀವಿ, ಸಿನಿಮಾ ನೋಡೋಕೆ ಬನ್ನಿ’: ಅಕ್ಷಯ್​ ಕುಮಾರ್​ ಚಿತ್ರಕ್ಕೆ ಹೀನಾಯ ಸ್ಥಿತಿ

ಶಾಕಿಂಗ್​ ಸಂಗತಿ ಏನೆಂದರೆ, ಅನೇಕ ನಿರ್ಮಾಪಕರಿಂದ ಅಕ್ಷಯ್​ ಕುಮಾರ್​ ಅವರಿಗೆ ಮೋಸ ಆಗಿದೆ. ಆ ಬಗ್ಗೆ ಅವರು ಈಗ ಬಾಯಿ ಬಿಟ್ಟಿದ್ದಾರೆ. ‘ಕಾಮನ್​ ಆಗಿ ಈ ರೀತಿ ಆಗುತ್ತದೆ. ಆ ಬಳಿಕ ಅಂಥವರ ಜೊತೆ ನಾನು ಮಾತನಾಡುವುದಿಲ್ಲ. ಸುಮ್ಮನೇ ಮೌನವಾಗಿ ಇರುತ್ತೇನೆ. ಒಂದಿಬ್ಬರು ನಿರ್ಮಾಪಕರಿಂದ ಸಂಭಾವನೆ ಬರುವುದೇ ಇಲ್ಲ. ಅದು ಮೋಸವಲ್ಲದೇ ಮತ್ತೇನೂ ಅಲ್ಲ’ ಎಂದಿದ್ದಾರೆ ಅಕ್ಷಯ್​ ಕುಮಾರ್​.

ಇದನ್ನೂ ಓದಿ: ತಮ್ಮ ಸಿನಿಮಾ ನಿರ್ಮಿಸಿ ಕೈ ಸುಟ್ಟುಕೊಂಡ ನಿರ್ಮಾಪಕನಿಗೆ ಅಕ್ಷಯ್​ ಕುಮಾರ್ ಸಹಾಯ

ಗುಣಮಟ್ಟಕ್ಕೆ ಗಮನ ನೀಡದೇ ಕೇವಲ ಸಿನಿಮಾಗಳ ಸಂಖ್ಯೆ ಹೆಚ್ಚಿಸುತ್ತಾರೆ ಎಂಬ ಕಾರಣಕ್ಕೆ ಅಕ್ಷಯ್​ ಅವರನ್ನು ಟೀಕಿಸಲಾಗುತ್ತಿದೆ. ಅದಕ್ಕೂ ಅಕ್ಷಯ್​ ಕುಮಾರ್​ ಪ್ರತಿಕ್ರಿಯೆ ನೀಡಿದ್ದಾರೆ. ‘ಕೇವಲ ನಾನು ಒಂದು ಸಿನಿಮಾ ಮಾಡಿದೆ, ಇನ್ನುಳಿದ ದಿನಗಳಲ್ಲಿ ಏನು ಮಾಡಲಿ?’ ಎಂದು ಅವರು ಪ್ರಶ್ನಿಸಿದ್ದಾರೆ. ತಾವು ಹೆಚ್ಚು ಸಿನಿಮಾಗಳನ್ನು ಮಾಡುವುದರಿಂದ ಉದ್ಯೋಗಾವಕಾಶ ಹೆಚ್ಚುತ್ತದೆ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು