ತಮ್ಮ ಸಿನಿಮಾ ನಿರ್ಮಿಸಿ ಕೈ ಸುಟ್ಟುಕೊಂಡ ನಿರ್ಮಾಪಕನಿಗೆ ಅಕ್ಷಯ್​ ಕುಮಾರ್ ಸಹಾಯ

ಅಕ್ಷಯ್​ ಕುಮಾರ್ ನಟನೆಯ ಸಾಲು ಸಾಲು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ‘ಪೂಜಾ ಎಂಟರ್​ಟೇನ್ಮೆಂಟ್​’ ಸಂಸ್ಥೆಗೆ ನೂರಾರು ಕೋಟಿ ರೂಪಾಯಿ ನಷ್ಟ ಆಗಿದೆ. ಈ ಸಂದರ್ಭದಲ್ಲಿ ಅಕ್ಷಯ್​ ಕುಮಾರ್​ ಅವರು ನಿರ್ಮಾಪಕರ ಬೆಂಬಲಕ್ಕೆ ನಿಂತಿದ್ದಾರೆ. ಸಾಲದ ಸುಳಿಗೆ ಸಿಲುಕಿರುವ ವಶು ಭಗ್ನಾನಿ ಮತ್ತು ಜಾಕಿ ಭಗ್ನಾನಿ ಅವರನ್ನು ಅಕ್ಷಯ್​ ಕುಮಾರ್ ಭೇಟಿ ಮಾಡಿದ್ದಾರೆ.

ತಮ್ಮ ಸಿನಿಮಾ ನಿರ್ಮಿಸಿ ಕೈ ಸುಟ್ಟುಕೊಂಡ ನಿರ್ಮಾಪಕನಿಗೆ ಅಕ್ಷಯ್​ ಕುಮಾರ್ ಸಹಾಯ
ಜಾಕಿ ಭಗ್ನಾನಿ, ಅಕ್ಷಯ್​ ಕುಮಾರ್​
Follow us
ಮದನ್​ ಕುಮಾರ್​
|

Updated on: Jul 01, 2024 | 10:06 PM

ನಟ ಅಕ್ಷಯ್​ ಕುಮಾರ್​ ಅವರ ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ಸೋಲುತ್ತಿವೆ. ಅವರ ಸಿನಿಮಾಗೆ ಬಂಡವಾಳ ಹೂಡಿದ ನಿರ್ಮಾಪಕರು ಕೈ ಸುಟ್ಟುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾಗೆ ಬಾಲಿವುಡ್​ ನಿರ್ಮಾಪಕರಾದ ವಶು ಭಗ್ನಾನಿ ಹಾಗೂ ಜಾಕಿ ಭಗ್ನಾನಿ ಅವರು ಬಂಡವಾಳ ಹೂಡಿದ್ದರು. ಆದರೆ ಬಾಕ್ಸ್​ ಆಫೀಸ್​ನಲ್ಲಿ ಆ ಸಿನಿಮಾ ಮುಗ್ಗರಿಸಿತು. ಅದರ ಪರಿಣಾಮವಾಗಿ ನಿರ್ಮಾಪಕರಿಗೆ ಭಾರಿ ನಷ್ಟ ಆಯಿತು. ಈಗ ಅವರ ಸಹಾಯಕ್ಕೆ ಅಕ್ಷಯ್​ ಕುಮಾರ್​ ನಿಂತಿದ್ದಾರೆ. ‘ನನ್ನ ಸಂಭಾವನೆಯನ್ನು ತಡವಾಗಿ ಕೊಡಿ ಪರವಾಗಿಲ್ಲ’ ಎಂದು ಅಕ್ಷಯ್​ ಕುಮಾರ್​ ಹೇಳಿದ್ದಾರೆ.

ಅಂದಾಜು 300 ಕೋಟಿ ರೂಪಾಯಿ ಬಜೆಟ್​ನಲ್ಲಿ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾ ನಿರ್ಮಾಣ ಆಗಿತ್ತು. ಆದರೆ ಗಲ್ಲಾಪಟ್ಟೆಗೆಯಲ್ಲಿ ನಿರೀಕ್ಷಿತ ಪ್ರಮಾಣದ ಕಲೆಕ್ಷನ್​ ಆಗಲಿಲ್ಲ. ಆದ್ದರಿಂದ ಈ ಸಿನಿಮಾಗೆ ಕೆಲಸ ಮಾಡಿದ ಅನೇಕರಿಗೆ ನಿರ್ಮಾಪಕರು ಸಂಬಳ ನೀಡಿಲ್ಲ. ಇದು ದೊಡ್ಡ ವಿವಾದ ಸೃಷ್ಟಿ ಮಾಡಿತ್ತು. ಈಗ ಅಕ್ಷಯ್​ ಕುಮಾರ್​ ಅವರು ನಿರ್ಮಾಪಕರನ್ನು ಭೇಟಿ ಆಗಿದ್ದಾರೆ. ಆ ಬಗ್ಗೆ ಜಾಕಿ ಭಗ್ನಾನಿ ಮಾತನಾಡಿದ್ದಾರೆ.

‘ಈ ವಿಚಾರ ಮಾತನಾಡಲು ಅಕ್ಷಯ್​ ಸರ್​ ಇತ್ತೀಚೆಗೆ ಭೇಟಿ ಆಗಿದ್ದರು. ಚಿತ್ರತಂಡದವರಿಗೆ ಸಹಾಯ ಮಾಡಲು ಅವರು ಮುಂದೆ ಬಂದಿದ್ದಾರೆ. ಸಿನಿಮಾಗಾಗಿ ಕೆಲಸ ಮಾಡಿದ ಎಲ್ಲರಿಗೂ ಸಂಬಳ ನೀಡುವ ತನಕ ತಮ್ಮ ಸಂಭಾವನೆಯನ್ನು ನೀಡುವುದು ಬೇಡ ಅಂತ ಅವರು ಹೇಳಿದ್ದಾರೆ. ನಮ್ಮ ಸಂದರ್ಭವನ್ನು ಅರ್ಥ ಮಾಡಿಕೊಂಡಿದ್ದಕ್ಕೆ ಅಕ್ಷಯ್​ ಕುಮಾರ್ ಅವರಿಗೆ ಧನ್ಯವಾದಗಳು’ ಎಂದು ಜಾಕಿ ಭಗ್ನಾನಿ ಹೇಳಿದ್ದಾರೆ.

ಇದನ್ನೂ ಓದಿ: ಸ್ಫೂರ್ತಿದಾಯಕ ಕಥೆ ನೀಡಿದ್ದಕ್ಕೆ ಕನ್ನಡಿಗ ಕ್ಯಾಪ್ಟನ್​ ಗೋಪಿನಾಥ್​ಗೆ ಅಕ್ಷಯ್​ ಕುಮಾರ್​ ಧನ್ಯವಾದ

‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾ ಮಾತ್ರವಲ್ಲದೇ, ಅಕ್ಷಯ್​ ಕುಮಾರ್​ ನಟನೆಯ ‘ಮಿಷನ್​ ರಾಣಿಗಂಜ್​’, ‘ಕಟ್​ಪುಟ್ಲಿ’, ‘ಬೆಲ್​ ಬಾಟಂ’ ಸಿನಿಮಾಗಳಿಗೂ ವಶು ಭಗ್ನಾನಿ, ಜಾಕಿ ಭಗ್ನಾನಿ ಅವರು ಹಣ ಹೂಡಿದ್ದರು. ಆ ಸಿನಿಮಾಗಳಿಂದಲೂ ಅವರಿಗೆ ನಷ್ಟ ಆಯಿತು. ಇದರಿಂದಾಗಿ ಅವರು ಮುಂಬೈನಲ್ಲಿ ಇರುವ ಆಸ್ತಿ ಮಾರಾಟ ಮಾಡಿಕೊಂಡರು. ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಅನೇಕರನ್ನು ಮನೆಗೆ ಕಳಿಸಿದರು. ಒಟ್ಟಿನಲ್ಲಿ ಅವರು ಭಾರಿ ನಷ್ಟ ಅನುಭವಿಸಿದ್ದಾರೆ. ಅವರ ಕಷ್ಟವನ್ನು ಅರ್ಥ ಮಾಡಿಕೊಂಡಿರುವ ಅಕ್ಷಯ್​ ಕುಮಾರ್​ ಅವರು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ