AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಫೂರ್ತಿದಾಯಕ ಕಥೆ ನೀಡಿದ್ದಕ್ಕೆ ಕನ್ನಡಿಗ ಕ್ಯಾಪ್ಟನ್​ ಗೋಪಿನಾಥ್​ಗೆ ಅಕ್ಷಯ್​ ಕುಮಾರ್​ ಧನ್ಯವಾದ

ಕಡಿಮೆ ದರದಲ್ಲಿ ಬಡವರು ಸಹ ವಿಮಾನದಲ್ಲಿ ಪ್ರಯಾಣ ಮಾಡುವಂತಾಗಬೇಕು ಎಂಬ ಕನಸು ಇಟ್ಟುಕೊಂಡು, ಅದನ್ನು ಸಾಧ್ಯವಾಗಿಸಿದ ಕನ್ನಡದ ಸಾಧಕ ಕ್ಯಾಪ್ಟನ್​ ಜಿ.ಆರ್​. ಗೋಪಿನಾಥ್​ ಅವರ ಬದುಕು ನಿಜಕ್ಕೂ ಸ್ಫೂರ್ತಿದಾಯಕ ಆಗಿದೆ. ಆ ಕಥೆಯನ್ನು ಆಧರಿಸಿ ಈಗ ‘ಸರ್ಫಿರಾ’ ಸಿನಿಮಾ ಮಾಡಲಾಗಿದೆ. ಈ ಸಿನಿಮಾದಲ್ಲಿ ನಟ ಅಕ್ಷಯ್​ ಕುಮಾರ್​ ಅವರು ಅಭಿನಯಿಸಿದ್ದಾರೆ.

ಸ್ಫೂರ್ತಿದಾಯಕ ಕಥೆ ನೀಡಿದ್ದಕ್ಕೆ ಕನ್ನಡಿಗ ಕ್ಯಾಪ್ಟನ್​ ಗೋಪಿನಾಥ್​ಗೆ ಅಕ್ಷಯ್​ ಕುಮಾರ್​ ಧನ್ಯವಾದ
ಅಕ್ಷಯ್​ ಕುಮಾರ್​, ಕ್ಯಾಪ್ಟನ್​ ಜಿ.ಆರ್​. ಗೋಪಿನಾಥ್​
ಮದನ್​ ಕುಮಾರ್​
|

Updated on: Jun 19, 2024 | 3:20 PM

Share

ಬಾಲಿವುಡ್​ ನಟ ಅಕ್ಷಯ್​ ಕುಮಾರ್​ (Akshay Kumar) ಅಭಿನಯದ ಹೊಸ ಸಿನಿಮಾ ‘ಸರ್ಫಿರಾ’ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದ ಟ್ರೇಲರ್​ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಅಂದಹಾಗೆ, ಇದು ಕನ್ನಡಿಗ ಕ್ಯಾಪ್ಟನ್​ ಗೋಪಿನಾಥ್​ (Captain GR Gopinath) ಅವರ ಜೀವನದ ವಿವರಗಳನ್ನು ಆಧಾರವಾಗಿ ಇಟ್ಟುಕೊಂಡು ತಯಾರಾದ ಸಿನಿಮಾ. ಟ್ರೇಲರ್​ ಬಿಡುಗಡೆ ಬಳಿಕ ಕ್ಯಾಪ್ಟನ್​ ಗೋಪಿನಾಥ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಆ ಕುರಿತು ಬರೆದುಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಅಕ್ಷಯ್​ ಕುಮಾರ್​ ಅವರು ಕ್ಯಾಪ್ಟನ್​ ಗೋಪಿನಾಥ್​ಗೆ ಧನ್ಯವಾದ ತಿಳಿಸಿದ್ದಾರೆ. ‘ಸರ್ಫಿರಾ’ ಸಿನಿಮಾ (Sarfira Movie) ಜುಲೈ 12ರಂದು ಬಿಡುಗಡೆ ಆಗಲಿದೆ.

‘ಸರ್ಫಿರಾ ಸಿನಿಮಾದ ಟ್ರೇಲರ್​ಗೆ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿದೆ. 1 ರೂಪಾಯಿಗೆ ವಿಮಾನದ ಟಿಕೆಟ್​ ನೀಡಿ ನಾವು ಏರ್​ ಡೆಕ್ಕನ್​ ಲಾಂಚ್​ ಮಾಡಿದಾಗ ವೆಬ್​ಸೈಟ್​ ಕ್ರ್ಯಾಶ್​ ಆಗಿತ್ತು. ಈಗ ಟ್ರೇಲರ್​ಗೆ ಸಿಕ್ಕ ಜನಸ್ಪಂದನೆ ನೋಡಿ ನನಗೆ ಅದೆಲ್ಲ ನೆನಪಾಯಿತು. ನಾನು ಹುಚ್ಚ ಎಂದು ಜನರು ಭಾವಿಸಿದ್ದರು. ಹೌದು, ನಾನು ಹುಚ್ಚನಾಗಿದ್ದೆ’ ಎಂದು ಕ್ಯಾಪ್ಟನ್​ ಗೋಪಿನಾಥ್​ ‘ಎಕ್ಸ್​’ (ಟ್ವಿಟರ್​) ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರದ ವೇಳೆ ಪರಸ್ಪರ ತಬ್ಬಿಕೊಂಡ ಅಕ್ಷಯ್, ಶಾರುಖ್

ನಟ ಅಕ್ಷಯ್​ ಕುಮಾರ್​ ಅವರು ಗೋಪಿನಾಥ್​ ಪೋಸ್ಟ್​ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಖಂಡಿತಾ ಹೌದು ಸರ್​.. ಏನಾದರೂ ಅಸಾಧಾರಣವಾದದ್ದು ಮಾಡಬೇಕಾದರೆ ಸ್ವಲ್ಪ ಹುಚ್ಚತನ ಅತ್ಯವಶ್ಯಕ. ಇಂಥ ಸ್ಫೂರ್ತಿದಾಯಕ ಕಥೆಯನ್ನು ನಮಗೆ ನೀಡಿದ್ದಕ್ಕಾಗಿ ಧನ್ಯವಾದಗಳು’ ಎಂದು ಅಕ್ಷಯ್​ ಕುಮಾರ್​ ಅವರು ಪ್ರತಿಕ್ರಿಯಿಸಿದ್ದಾರೆ. ಈ ಸಿನಿಮಾಗೆ ಸುಧಾ ಕೊಂಗರಾ ನಿರ್ದೇಶನ ಮಾಡಿದ್ದಾರೆ.

ಕಡಿಮೆ ದರದಲ್ಲಿ ಬಡವರೂ ವಿಮಾನದಲ್ಲಿ ಪ್ರಯಾಣ ಮಾಡುವಂತೆ ಆಗಬೇಕು ಎಂಬ ಕನಸು ಇಟ್ಟುಕೊಂಡು, ಅದನ್ನು ಸಾಧ್ಯವಾಗಿಸಿದ ಕನ್ನಡಿಗ ಕ್ಯಾಪ್ಟನ್​ ಜಿ.ಆರ್​. ಗೋಪಿನಾಥ್​ ಅವರ ಜೀವನ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. ಆ ವಿವರಗಳನ್ನು ಇಟ್ಟುಕೊಂಡು ತಮಿಳಿನಲ್ಲಿ ‘ಸೂರರೈ ಪೋಟ್ರು’ ಸಿನಿಮಾ ಮಾಡಲಾಗಿತ್ತು. ಒಟಿಟಿಯಲ್ಲಿ ತೆರೆಕಂಡ ಆ ಸಿನಿಮಾದಲ್ಲಿ ಸೂರ್ಯ ಮುಖ್ಯ ಪಾತ್ರ ಮಾಡಿದ್ದರು. ಆ ಸಿನಿಮಾ ‘ಸರ್ಫಿರಾ’ ಶೀರ್ಷಿಕೆಯಲ್ಲಿ ಈಗ ಹಿಂದಿಗೆ ರಿಮೇಕ್​ ಆಗಿದೆ. ಇದರಲ್ಲಿ ಕ್ಯಾಪ್ಟನ್​ ಜಿ.ಆರ್​. ಗೋಪಿನಾಥ್​ ಅವರ ಪಾತ್ರಕ್ಕೆ ಅಕ್ಷಯ್​ ಕುಮಾರ್​ ಬಣ್ಣ ಹಚ್ಚಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ?
ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ?
ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ
ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ
ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ