ಸುಶಾಂತ್ ಸಾವಿನಿಂದ ಬದಲಾಯಿತು ರಿಯಾ ಚಕ್ರವರ್ತಿ ಜೀವನ; ಇರುವ ಆರೋಪ ಒಂದೆರಡಲ್ಲ

ರಿಯಾ ಅವರು ಸುಶಾಂತ್​ಗೆ ತುಂಬಾನೇ ಟಾರ್ಚರ್ ಕೊಟ್ಟರು ಎನ್ನುವ ಆರೋಪ ಕೇಳಿ ಬಂತು. ಸುಶಾಂತ್ ಖಾತೆಯಿಂದ ಅವರು ಹಣ ವರ್ಗಾವಣೆ ಮಾಡಿಕೊಂಡರು ಎನ್ನುವ ಆರೋಪವೂ ಇದೆ. ಈ ಕಾರಣದಿಂದಲೇ ರಿಯಾ ರಿಯಾ ಅವರನ್ನು ಜೈಲಿಗೆ ಹಾಕಲಾಯಿತು. ಈ ಪ್ರಕರಣದ ಬೆನ್ನು ಹತ್ತಿದಾಗ ಡ್ರಗ್ಸ್ ವಿಚಾರ ಕೂಡ ಹೊರಬಿತ್ತು.

ಸುಶಾಂತ್ ಸಾವಿನಿಂದ ಬದಲಾಯಿತು ರಿಯಾ ಚಕ್ರವರ್ತಿ ಜೀವನ; ಇರುವ ಆರೋಪ ಒಂದೆರಡಲ್ಲ
ಸುಶಾಂತ್-ರಿಯಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jul 01, 2024 | 9:40 AM

ನಟಿ ರಿಯಾ ಚಕ್ರವರ್ತಿ ಅವರು ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕಾದವರು. ಆದರೆ, ಅವರ ಜೀವನ ಅಂದುಕೊಂಡಂತೆ ನಡೆಯಲೇ ಇಲ್ಲ. ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯಿಂದ ಅವರು ಸಾಕಷ್ಟು ತೊಂದರೆ ಎದುರಿಸಬೇಕಾಯಿತು. ಜೈಲು ಕೂಡ ಸೇರಿದರು. ಅವರು ಏನೇ ಸ್ಪಷ್ಟನೆ ಕೊಟ್ಟರೂ ಅವರ ವಿರುದ್ಧ ಇರುವ ಗಂಭೀರ ಆರೋಪ ಎಂದಿಗೂ ಮರೆಯಾಗುವಂಥದ್ದಲ್ಲ. ಇಂದು (ಜುಲೈ 1) ರಿಯಾ ಚಕ್ರವರ್ತಿ ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಅವರ ಮಾಡಿಕೊಂಡ ವಿವಾದದ ಬಗ್ಗೆ ಇಲ್ಲಿದೆ ವಿವರ.

2020ರ ಜೂನ್ 14ರಂದು ಸುಶಾಂತ್ ಸಿಂಗ್ ರಜಪೂತ್ ಅವರು ಆತ್ಮಹತ್ಯೆ ಮಾಡಿಕೊಂಡು ನಿಧನ ಹೊಂದಿದರು. ‘ಧೋನಿ: ದಿ ಅನ್​ಟೋಲ್ಟ್ ಸ್ಟೋರಿ’, ‘ಕೇದಾರ್​ನಾಥ್’ ಸೇರಿ ಅನೇಕ ಸಿನಿಮಾಗಳಲ್ಲಿ ಸುಶಾಂತ್ ನಟಿಸಿದ್ದರು. ಆದರೆ, ಅವರು ಆತ್ಮಹತ್ಯೆ ಮಾಡಿಕೊಳ್ಳೋ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಯಾರೆಂದರೆ ಯಾರೂ ಊಹಿಸಿರಲಿಲ್ಲ. ಅವರದ್ದು ಆತ್ಮಹತ್ಯೆ ಅಲ್ಲ, ಕೊಲೆ ಎಂಬ ಆರೋಪ ಇದೆ. ಅವರ ಸಾವಿಗೆ ರಿಯಾ ಚಕ್ರವರ್ತಿ ಕಾರಣ ಎಂದು ಹೇಳಲಾಗುತ್ತಿದೆ. ಇದನ್ನು ರಿಯಾ ಅಲ್ಲಗಳೆಯುತ್ತಲೇ ಬರುತ್ತಿದ್ದಾರೆ.

ರಿಯಾ ಹಾಗೂ ಸುಶಾಂತ್ ಸಿಂಗ್ ಪರಸ್ಪರ ಡೇಟ್ ಮಾಡುತ್ತಿದ್ದರು. ಸುಶಾಂತ್ ಸಾಯುವುದಕ್ಕೂ ಕೆಲವೇ ವಾರ ಮೊದಲು ಇಬ್ಬರೂ ಬ್ರೇಕಪ್ ಮಾಡಿಕೊಂಡರು. ಇವರ ಬ್ರೇಕಪ್​ಗೆ ಕಾರಣ ತಿಳಿದಿಲ್ಲ. ಸುಶಾಂತ್​ಗೆ ರಿಯಾ ತುಂಬಾನೇ ಟಾರ್ಚರ್ ಕೊಟ್ಟರು ಎನ್ನುವ ಆರೋಪ ಬಂತು. ಸುಶಾಂತ್ ಖಾತೆಯಿಂದ ಅವರು ಹಣ ವರ್ಗಾವಣೆ ಮಾಡಿಕೊಂಡರು ಎನ್ನುವ ಆರೋಪವೂ ಇದೆ. ಈ ಕಾರಣದಿಂದಲೇ ರಿಯಾ ಅವರನ್ನು ಜೈಲಿಗೆ ಹಾಕಲಾಯಿತು. ಈ ಪ್ರಕರಣದ ಬೆನ್ನು ಹತ್ತಿದಾಗ ಡ್ರಗ್ಸ್ ವಿಚಾರ ಕೂಡ ಹೊರಬಿತ್ತು.

ರಿಯಾ-ಸುಶಾಂತ್ ಸಂಬಂಧದ ಬಗ್ಗೆ ಅವರ ಸಹೋದರಿ ಪ್ರಿಯಾಂಕಾ ಮಾತನಾಡಿದ್ದರು. ‘ಸುಶಾಂತ್ ಸಿಂಗ್ ಅವರ ಜೀವನ 2019ರಿಂದ ನಾಶ ಆಗುತ್ತಲೇ ಬಂದಿದೆ. ರಿಯಾ ಅವರ ಜೀವನಕ್ಕೆ ಬಂದಾಗಿನಿಂದ ಸುಶಾಂತ್ ಜೀವನ ಹಾಳಾಯಿತು. ಅವಳು ಬಂದ ಆರೇ ದಿನಕ್ಕೆ ನನ್ನ ಹಾಗೂ ಸುಶಾಂತ್ ಮಧ್ಯೆ ಮಿಸ್ ಅಂಡರ್​ಸ್ಟ್ಯಾಂಡಿಂಗ್ ಬಂತು’ ಎಂದಿದ್ದರು ಪ್ರಿಯಾಂಕಾ.

ಇದನ್ನೂ ಓದಿ: ಸುಶಾಂತ್ ಸಿಂಗ್ ಅಂತಿಮ ದರ್ಶನಕ್ಕೆ ಹೋಗಲಿಲ್ಲವೇಕೆ? ಮಾಜಿ ಗರ್ಲ್​ಫ್ರೆಂಡ್ ಅಂಕಿತಾ ಕೊಟ್ಟರು ಕಾರಣ

‘ಸುಶಾಂತ್ ಅವರದ್ದು ಆತ್ಮಹತ್ಯೆ ಅಲ್ಲ, ಸುಶಾಂತ್ ಜೀವನವನ್ನು ನಾಶ ಮಾಡಲೆಂದೇ ಅವಳನ್ನು ಕಳುಹಿಸಲಾಗಿದೆ’ ಎಂದು ಪ್ರಿಯಾಂಕಾ ಹೇಳಿದ್ದರು. ಸುಶಾಂತ್ ಸಿಂಗ್ ರಜಪೂತ್ ಅವರದ್ದು ಕೊಲೆ ಎಂಬ ಆರೋಪ ಇದೆ. ಈ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಆದರೆ, ಈವರೆಗೆ ಪ್ರಕರಣದ ತನಿಖೆ ಪೂರ್ಣಗೊಂಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್