ಕೊಡಗಿನ ಬೆಡಗಿ, ಕನ್ನಡದ ನಟಿ ಅಕ್ಷಿತಾ ಬೋಪಯ್ಯಗೆ ಸಿಕ್ತು ಕಾಲಿವುಡ್ ಸಿನಿಮಾ ಆಫರ್

|

Updated on: Jun 25, 2024 | 7:17 PM

ಬಿಎಸ್‍ಸಿ ವಿದ್ಯಾಭ್ಯಾಸ ಮಾಡಿರುವ ಅಕ್ಷಿತಾ ಬೋಪಯ್ಯ ಅವರು ಕ್ಲಾಸಿಕಲ್ ಡ್ಯಾನ್ಸರ್ ಸಹ ಹೌದು. ಶಿಕ್ಷಣ ಪೂರ್ಣಗೊಳ್ಳುತ್ತಿದ್ದಂತೆಯೇ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರಿಗೆ ಅನೇಕ ಅವಕಾಶಗಳು ಸಿಕ್ಕವು. ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡ ಬಳಿಕ ಅವರು ಕಾಲಿವುಡ್​ನತ್ತ ಹೆಜ್ಜೆ ಹಾಕಿದ್ದಾರೆ. ಜೊತೆಗೆ, ತೆಲುಗು ಚಿತ್ರರಂಗದಿಂದಲೂ ಅವರಿಗೆ ಅವಕಾಶಗಳು ಬರಲಾರಂಭಿಸಿವೆ.

ಕೊಡಗಿನ ಬೆಡಗಿ, ಕನ್ನಡದ ನಟಿ ಅಕ್ಷಿತಾ ಬೋಪಯ್ಯಗೆ ಸಿಕ್ತು ಕಾಲಿವುಡ್ ಸಿನಿಮಾ ಆಫರ್
ಅಕ್ಷಿತಾ ಬೋಪಯ್ಯ
Follow us on

ಪರಭಾಷೆಯಲ್ಲಿ ಕನ್ನಡದ ಪ್ರತಿಭೆಗಳಿಗೆ ಅವಕಾಶಗಳು ಸಿಗುತ್ತಿವೆ. ಈಗಾಗಲೇ ಕರುನಾಡಿನ ಹಲವು ನಟಿಯರು ಬೇರೆ ಭಾಷೆಯಲ್ಲಿ ಫೇಮಸ್​ ಆಗಿದ್ದಾರೆ. ಅವರ ಸಾಲಿಗೆ ನಟಿ ಅಕ್ಷಿತಾ ಬೋಪಯ್ಯ (Akshitha Bopaiah) ಸಹ ಸೇರ್ಪಡೆ ಆಗಿದ್ದಾರೆ. ಸ್ಯಾಂಡಲ್​ವುಡ್​ನ ಕೆಲವು ಸಿನಿಮಾಗಳಲ್ಲಿ (Kannada Movie) ಅಕ್ಷಿತಾ ಅವರು ಈಗಾಗಲೇ ನಟಿಸಿದ್ದಾರೆ. ಆ ಮೂಲಕ ಅವರು ಖ್ಯಾತಿ ಗಳಿಸಿದ್ದಾರೆ. ಇದರ ಜೊತೆಗೆ ಅವರು ತಮಿಳು ಸೀರಿಯಲ್​ನಲ್ಲೂ ಅಭಿನಯಿಸಿದ್ದರು. ಅಲ್ಲಿಯೂ ಅವರಿಗೆ ದೊಡ್ಡ ಗೆಲುವು ಸಿಕ್ಕಿದೆ. ಅಲ್ಲಿ ಅಭಿಮಾನಿಗಳನ್ನೂ ಅವರು ಸಂಪಾದಿಸಿದ್ದಾರೆ. ಅದರ ಬೆನ್ನಲ್ಲೇ ಅವರಿಗೆ ತಮಿಳು ಸಿನಿಮಾದಲ್ಲಿ (Tamil Movie) ನಟಿಸುವ ಅವಕಾಶ ಒದಗಿಬಂದಿದೆ.

ಅಕ್ಷಿತಾ ಬೋಪಯ್ಯ ಅವರು ಕನ್ನಡದ ‘ಬ್ರಹ್ಮಚಾರಿ’, ‘ಶಿವಾರ್ಜುನ’, ‘ಐ ಲವ್ ಯೂ’ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆ ಮೂಲಕ ಅವರು ಪ್ರೇಕ್ಷಕರನ್ನು ರಂಜಿಸಿದ್ದಾರೆ. ಕಿರುತೆರೆಯಲ್ಲೂ ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ. ಅಕ್ಷಿತಾ ಅವರು ಅಭಿನಯಿಸುತ್ತಿದ್ದ ತಮಿಳು ಸೀರಿಯಲ್​ ಇತ್ತೀಚೆಗೆ ಮುಕ್ತಾಯ ಆಯಿತು. ಹಾಗಾದರೆ ಮುಂದೇನು ಎಂಬ ಅಭಿಮಾನಿಗಳ ಪ್ರಶ್ನೆ ಉತ್ತರ ಸಿಕ್ಕಿದೆ.

ಬೇರೆ ಸೀರಿಯಲ್​ಗಳಿಂದ ಅಕ್ಷಿತಾ ಬೋಪಯ್ಯ ಅವರಿಗೆ ಅನೇಕ ಅವಕಾಶಗಳು ಇದ್ದರೂ ಕೂಡ ಆ ಬಗ್ಗೆ ಅವರು ಗಮನ ಹರಿಸಿಲ್ಲ. ಬದಲಿಗೆ, ಕಾಲಿವುಡ್ ಸಿನಿಮಾ ಮೇಲೆ ಅವರು ಆಸಕ್ತಿ ತೋರಿಸಿದ್ದಾರೆ. ತಮಿಳು ಸಿನಿಮಾದಲ್ಲೀಗ ಅವರು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕಾಲಿವುಡ್​ನಲ್ಲಿ ಅವರಿಗೆ ಒಂದು ಅವಕಾಶ ಸಿಕ್ಕಿದೆ. ಕನ್ನಡದ ‘ಸಿದ್ಲಿಂಗು 2’ ಸಿನಿಮಾವನ್ನು ನಿರ್ಮಾಣ ಮಾಡಿದ್ದ ಸಂಸ್ಥೆಯೇ ಈಗ ತಮಿಳಿನಲ್ಲಿ ಹೊಸ ಸಿನಿಮಾ ನಿರ್ಮಿಸುತ್ತಿದ್ದು, ಅದಕ್ಕೆ ಅಕ್ಷಿತಾ ಬೋಪಯ್ಯ ನಾಯಕಿ ಆಗಿದ್ದಾರೆ.

ಇದನ್ನೂ ಓದಿ: ಜೂ.30ಕ್ಕೆ ಚಲನಚಿತ್ರ ನಿರ್ಮಾಪಕರ ಸಂಘದ ಕಟ್ಟಡ ಉದ್ಘಾಟನೆ ಮಾಡಲಿರುವ ಸಿಎಂ

ಅಕ್ಷಿತಾ ಬೋಪಯ್ಯ ಒಪ್ಪಿಕೊಂಡಿರುವ ಈ ಸಿನಿಮಾ ತಮಿಳಿನ ಜೊತೆಗೆ ತೆಲುಗಿನಲ್ಲೂ ಮೂಡಿಬರಲಿದೆ. ಈ ಸಿನಿಮಾದಲ್ಲಿ ಅಕ್ಷಿತಾ ಅವರ ಪಾತ್ರ ಯಾವ ರೀತಿ ಇದೆ ಎಂಬುದನ್ನು ಇನ್ನೂ ಬಹಿರಂಗ ಆಗಿಲ್ಲ. ಒಳ್ಳೆಯ ತಂಡದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ ಎಂಬ ಖುಷಿ ಅವರಿಗೆ ಇದೆ. ಕೊಡುಗು ಸುತ್ತಮುತ್ತ ಈ ಸಿನಿಮಾದ ಶೂಟಿಂಗ್​ ನಡೆದಿದೆ.

ಗೊತ್ತಿಲ್ಲದ ಭಾಷೆಯ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವುದು ಸುಲಭವಲ್ಲ. ಅದನ್ನು ಒಂದು ಸವಾಲಿನ ರೀತಿ ಸ್ವೀಕರಿಸಿದ ಅಕ್ಷಿತಾ ಅವರು ಗಮನ ಸೆಳೆದಿದ್ದಾರೆ. ಇಷ್ಟೆಲ್ಲ ಆದರೂ ಕೂಡ ಕನ್ನಡ ಚಿತ್ರರಂಗವೇ ತಮ್ಮ ಪಾಲಿನ ಖಾಯಂ ನೆಲೆ ಎಂಬುದು ಅವರ ನಿಲುವು. ಹಾಗಾಗಿ ‘ಕರ್ನಾಟಕದ ಅಳಿಯ’, ‘ಮಿಸ್ಟರ್ ಆಂಡ್ ಮಿಸೆಸ್’ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.