ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್​ ಭೇಟಿಯಾದ ಟಾಲಿವುಡ್ ದಿಗ್ಗಜ ನಿರ್ಮಾಪಕರು

ಆಂಧ್ ಪ್ರದೇಶದ ಉಪಮುಖ್ಯ ಮಂತ್ರಿ ಪವನ್ ಕಲ್ಯಾಣ್ ಅವರನ್ನು ತೆಲುಗು ಚಿತ್ರರಂಗದ ಹಿರಿಯ ನಿರ್ಮಾಪಕರು ಭೇಟಿಯಾಗಿ ಅಭಿನಂದನೆ ಸಲ್ಲಿಸುವ ಜೊತೆಗೆ ಚಿತ್ರರಂಗದ ಬಗ್ಗೆ ಚರ್ಚಿಸಿದ್ದಾರೆ.

ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್​ ಭೇಟಿಯಾದ ಟಾಲಿವುಡ್ ದಿಗ್ಗಜ ನಿರ್ಮಾಪಕರು
ಪವನ್ ಕಲ್ಯಾಣ್ ಭೇಟಿಯಾದ ನಿರ್ಮಾಪಕರು
Follow us
|

Updated on: Jun 25, 2024 | 9:41 AM

ಆಂಧ್ರ ಪ್ರದೇಶ (Andhra Pradesh) ಸರ್ಕಾರ ಬದಲಾಗಿರುವುದು ಆಂಧ್ರದ ಅಭಿವೃದ್ಧಿ ಮೇಲೆ ಮಾತ್ರವಲ್ಲದೆ ದೊಡ್ಡ ಪ್ರಭಾವವನ್ನು, ಪರಿಣಾಮವನನು ತೆಲುಗು ಚಿತ್ರರಂಗದ ಮೇಲೆ ಬೀರಲಿದೆ. ಈ ಹಿಂದೆ ಜಗನ್ ಸರ್ಕಾರ ಆಂಧ್ರದಲ್ಲಿ ಇದ್ದಾಗ ತೆಲುಗು ಚಿತ್ರರಂಗವನ್ನು ನಿಯಂತ್ರಿಸುವ ಪ್ರಯತ್ನ ಮಾಡಲಾಗಿತ್ತು. ಟಿಕೆಟ್ ದರಗಳ ಇಳಿಕೆ, ತೆರಿಗೆ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ, ಸರ್ಕಾರವೇ ಚಿತ್ರಮಂದಿರಗಳ ಟಿಕೆಟ್ ರೇಟು ನಿಗದಿ ಮಾಡುವುದು, ಬೆನಿಫಿಟ್ ಶೋ, ಫ್ಯಾನ್ಸ್ ಶೋ ರದ್ದು, ಚಿತ್ರಮಂದಿರಗಳ ಮೇಲೆ ದಾಳಿ ಇನ್ನೂ ಅನೇಕ ಕಾರ್ಯಗಳು ನಡೆದಿದ್ದವು. ಇದು ತೆಲುಗು ಸಿನಿಮಾ ಮಂದಿಯ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ತೆಲುಗು ಚಿತ್ರರಂಗದ ಅನೇಕ ನಟರು, ನಿರ್ಮಾಪಕರು ಜಗನ್ ಸರ್ಕಾರ ವಿರುದ್ಧ ಏರಿದ ದನಿಯಲ್ಲಿ ಮಾತನಾಡಿದ್ದರು. ಚಿರಂಜೀವಿ, ಮಹೇಶ್ ಬಾಬು, ಪ್ರಭಾಸ್, ರಾಜಮೌಳಿ ಇನ್ನೂ ಕೆಲವರು ಸಿಎಂ ಜಗನ್ ಅನ್ನು ಭೇಟಿಯಾಗಿ ಚಿತ್ರರಂಗದ ಮೇಲೆ ಹೇರಲಾಗುತ್ತಿರುವ ಕಠಿಣ ನಿಯಮಗಳನ್ನು ಸಡಿಲಿಸುವಂತೆ ಮನವಿ ಮಾಡಿದ್ದರು. ಮೆಗಾಸ್ಟಾರ್ ಚಿರಂಜೀವಿಯಂತೂ ಜಗನ್ ಮುಂದೆ ಕೈ ಮುಗಿದು ಕೇಳಿಕೊಂಡಿರುವ ವಿಡಿಯೋ ವೈರಲ್ ಆಗಿತ್ತು. ಈಗ ಜಗನ್ ಸರ್ಕಾರವನ್ನು ಎಲ್ಲರೂ ಸೇರಿ ಕೆಳಗಿಳಿಸಿದ್ದಾರೆ. ಈಗ ಹೊಸ ಸರ್ಕಾರ ಬಂದಿದೆ. ಅದರಲ್ಲೂ ಚಿತ್ರರಂಗದ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಉಪ ಮುಖ್ಯಮಂತ್ರಿ ಆಗಿದ್ದಾರೆ.

ಟಿಡಿಪಿ-ಜನಸೇನಾ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಟಾಲಿವುಡ್​ನ ನಿರ್ಮಾಪಕರು ಖುಷಿಯಾಗಿದ್ದು, ಇತ್ತೀಚೆಗಷ್ಟೆ ತೆಲುಗು ಚಿತ್ರರಂಗದ ಹಿರಿಯ ನಿರ್ಮಾಪಕರುಗಳೆಲ್ಲ ಸೇರಿ ಪವನ್ ಕಲ್ಯಾಣ್​ರನ್ನು ಭೇಟಿಯಾಗಿ ಚಿತ್ರರಂಗದ ಬಗ್ಗೆ ಚರ್ಚೆ ನಡೆಸಿದ್ದಾರೆ. ಜೊತೆಗೆ ಮೊದಲ ಬಾರಿ ಅಸೆಂಬ್ಲಿ ಪ್ರವೇಶಿಸಿ ಉಪ ಮುಖ್ಯಮಂತ್ರಿಯಾಗಿ ಆಯ್ಕೆ ಆದ ಪವನ್ ಕಲ್ಯಾಣ್ ಅವರನ್ನು ಅಭಿನಂದಿಸಿದ್ದಾರೆ.

ಇದನ್ನೂ ಓದಿ:ಏನಾಗಲಿದೆ ಪವನ್ ಕಲ್ಯಾಣ್ ಮೂರು ಸಿನಿಮಾಗಳ ಭವಿಷ್ಯ?

ತೆಲುಗು ಚಿತ್ರರಂಗದ ಹಿರಿಯ ನಿರ್ಮಾಪಕರಾದ ಅಲ್ಲು ಅರವಿಂದ್, ಅಶ್ವಿನಿ ದತ್, ಎಸ್ ರಾಧಾಕೃಷ್ಣ, ದಿಲ್ ರಾಜು, ಡಿವಿವಿ ದಯಾನಂದ್, ಬನ್ನಿ ವಾಸು, ನಾಗವಂಶಿ, ವಿಶ್ವಪ್ರಸಾದ್, ವಂಶಿ ಕೃಷ್ಣ ಇನ್ನೂ ಹಲವಾರು ನಿರ್ಮಾಪಕರು ಒಟ್ಟಿಗೆ ತೆರಳಿ ಪವನ್ ಕಲ್ಯಾಣ್ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು. ಅಲ್ಲದೆ ಚಿತ್ರರಂಗದ ಸಮಸ್ಯೆಗಳ ಕುರಿತಾಗಿ ಚುಟುಕಾಗಿ ಸಭೆಯನ್ನು ಸಹ ನಡೆಸಿದರು.

ಚುನಾವಣಾ ಪ್ರಚಾರದ ಸಮಯದಲ್ಲಿಯೇ ಮಾತನಾಡಿದ್ದ ಪವನ್ ಕಲ್ಯಾಣ್, ಜಗನ್ ಸರ್ಕಾರ ತೆಲುಗು ಚಿತ್ರರಂಗದ ವಿರುದ್ಧ ದಬ್ಬಾಳಿಕೆ ನಡೆಸುತ್ತಿದೆ ಎಂದು ದನಿ ಎತ್ತಿದ್ದರು. ತಾವು ಅಧಿಕಾರಕ್ಕೆ ಬಂದರೆ ವಿಶ್ವಮಟ್ಟದಲ್ಲಿ ಗುರುತು ಪಡೆದುಕೊಂಡಿರುವ ತೆಲುಗು ಚಿತ್ರರಂಗಕ್ಕೆ ಶಕ್ತಿ ತುಂಬುವ ಕಾರ್ಯ ಮಾಡುವುದಾಗಿ ಹೇಳಿದ್ದರು. ಸಿಎಂ ಚಂದ್ರಬಾಬು ನಾಯ್ಡು ಸಹ ಇದೇ ಮಾತುಗಳನ್ನು ಹೇಳಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಕಾಂಗ್ರೆಸ್ ನಾಯಕರು ಯಾರನ್ನೇ ಸಿಎಂ ಮಾಡಿದರೂ ನಂಗೆ ಸಂಬಂಧಿಸದ ವಿಷಯ: ರೇವಣ್ಣ
ಕಾಂಗ್ರೆಸ್ ನಾಯಕರು ಯಾರನ್ನೇ ಸಿಎಂ ಮಾಡಿದರೂ ನಂಗೆ ಸಂಬಂಧಿಸದ ವಿಷಯ: ರೇವಣ್ಣ
ದರ್ಶನ್ ಬಂಧನದ ದಿನ ‘ಡೆವಿಲ್’ ಸಿನಿಮಾ ಸೆಟ್​ನಲ್ಲಿ ಏನಾಯ್ತು? ವಿನಯ್
ದರ್ಶನ್ ಬಂಧನದ ದಿನ ‘ಡೆವಿಲ್’ ಸಿನಿಮಾ ಸೆಟ್​ನಲ್ಲಿ ಏನಾಯ್ತು? ವಿನಯ್
ಡಿಕೆ ಸುರೇಶ್​ರನ್ನು ಸೋಲಿಸಿದ್ದು ಸಿದ್ದರಾಮಯ್ಯ; ಅಶೋಕರಿಂದ ಅಸಂಬದ್ಧ ಹೇಳಿಕೆ
ಡಿಕೆ ಸುರೇಶ್​ರನ್ನು ಸೋಲಿಸಿದ್ದು ಸಿದ್ದರಾಮಯ್ಯ; ಅಶೋಕರಿಂದ ಅಸಂಬದ್ಧ ಹೇಳಿಕೆ
ಸಿಎಂ ಮತ್ತು ಡಿಸಿಎಂ ಆಯ್ಕೆ ಮಾಡೋದು ಸ್ವಾಮೀಜಿಗಳಲ್ಲ: ಸಿದ್ದರಾಮಯ್ಯ, ಸಿಎಂ
ಸಿಎಂ ಮತ್ತು ಡಿಸಿಎಂ ಆಯ್ಕೆ ಮಾಡೋದು ಸ್ವಾಮೀಜಿಗಳಲ್ಲ: ಸಿದ್ದರಾಮಯ್ಯ, ಸಿಎಂ
ಸ್ವಾಮೀಜಿಗಳು ಹೇಳುತ್ತಿರುವ ಹಿಂದೆ ಬಿಜೆಪಿ ಕೈವಾಡ ಇರಬಹುದು: ಚಲುವರಾಯಸ್ವಾಮಿ
ಸ್ವಾಮೀಜಿಗಳು ಹೇಳುತ್ತಿರುವ ಹಿಂದೆ ಬಿಜೆಪಿ ಕೈವಾಡ ಇರಬಹುದು: ಚಲುವರಾಯಸ್ವಾಮಿ
ದರ್ಶನ್ ನಡೆದು ಬಂದ ಹಾದಿಯ ಬಗ್ಗೆ ಸಾರಾ ಗೋವಿಂದು ವಿಶ್ಲೇಷಣೆ
ದರ್ಶನ್ ನಡೆದು ಬಂದ ಹಾದಿಯ ಬಗ್ಗೆ ಸಾರಾ ಗೋವಿಂದು ವಿಶ್ಲೇಷಣೆ
ತೆರಿಗೆ ಹಣ ಹಂಚಿಕೆ ತಾರತಮ್ಯವಾದರೆ ಪ್ರತಿಭಟನೆ ನಡೆಸುವ ಬಗ್ಗೆ ಸಿಎಂ ಸುಳಿವು
ತೆರಿಗೆ ಹಣ ಹಂಚಿಕೆ ತಾರತಮ್ಯವಾದರೆ ಪ್ರತಿಭಟನೆ ನಡೆಸುವ ಬಗ್ಗೆ ಸಿಎಂ ಸುಳಿವು
ಹುಬ್ಬಳ್ಳಿ: ಕಿಮ್ಸ್​​​ ನೂತನ ಕಟ್ಟಡದ ಚಾವಣಿಯ ಪಿಒಪಿ ಕುಸಿತ, ತಪ್ಪಿದ ದುರಂತ
ಹುಬ್ಬಳ್ಳಿ: ಕಿಮ್ಸ್​​​ ನೂತನ ಕಟ್ಟಡದ ಚಾವಣಿಯ ಪಿಒಪಿ ಕುಸಿತ, ತಪ್ಪಿದ ದುರಂತ
ಹಿರೀಕ ರಾಜಣ್ಣ ಶ್ರೀಗಳ ಬಗ್ಗೆ ಎಚ್ಚರದಿಂದ ಮಾತಾಡಬೇಕು: ನಿಖಿಲ್ ಕುಮಾರಸ್ವಾಮಿ
ಹಿರೀಕ ರಾಜಣ್ಣ ಶ್ರೀಗಳ ಬಗ್ಗೆ ಎಚ್ಚರದಿಂದ ಮಾತಾಡಬೇಕು: ನಿಖಿಲ್ ಕುಮಾರಸ್ವಾಮಿ
ನಿನ್ನೆ ನಾನು ಕರೆದ ಸಭೆ ಸೌಹಾರ್ದಯುತ ವಾತಾವರಣದಲ್ಲಿ ನಡೆಯಿತು: ಸಿದ್ದರಾಮಯ್ಯ
ನಿನ್ನೆ ನಾನು ಕರೆದ ಸಭೆ ಸೌಹಾರ್ದಯುತ ವಾತಾವರಣದಲ್ಲಿ ನಡೆಯಿತು: ಸಿದ್ದರಾಮಯ್ಯ