ಅನೇಕ ಸ್ಟಾರ್ ಕಿಡ್ಗಳು ಬಾಲಿವುಡ್ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಕೆಲವರಿಗೆ ಯಶಸ್ಸು ಸಿಕ್ಕಿದೆ. ಆದರೆ, ಇನ್ನೂ ಕೆಲವರಿಗೆ ಗೆಲುವು ಸಿಕ್ಕಿಲ್ಲ. ಸ್ಟಾರ್ ಕಲಾವಿದರ ಮಕ್ಕಳಾದರೂ ಅವರು ತಮ್ಮ ತನವನ್ನು ಸಾಬೀತು ಮಾಡಿಕೊಳ್ಳಬೇಕು. ಅಂದಾಗ ಮಾತ್ರ ಜನಪ್ರಿಯತೆ ಪಡೆಯಲು ಸಾಧ್ಯ. ಆಲಿಯಾ ಭಟ್ (Alia Bhatt) ಖ್ಯಾತ ನಿರ್ದೇಶಕ ಮಹೇಶ್ ಭಟ್ ಅವರ ಮಗಳು. ಈ ಕಾರಣದಿಂದಲೇ ಅವರಿಗೆ ಬಾಲಿವುಡ್ನಲ್ಲಿ ಸುಲಭದಲ್ಲಿ ಅವಕಾಶ ಸಿಕ್ಕಿತು. ಇದನ್ನು ಅವರೂ ಒಪ್ಪಿಕೊಳ್ಳುತ್ತಾರೆ. ಆದರೆ, ಅವರು ತನ್ನ ತನವನ್ನು ಸಾಬೀತು ಮಾಡಿದ್ದಾರೆ. ಅವರು ಹೇಳಿರುವ ಹೇಳಿಕೆ ವೈರಲ್ ಆಗಿದೆ.
ಆಲಿಯಾ ಭಟ್ ಅವರು ‘ಕಾಫಿ ವಿತ್ ಕರಣ್’ ಶೋದಲ್ಲಿ ಭಾಗಿ ಆಗಿದ್ದಾರೆ. ಈ ವೇಳೆ ಅವರ ಹಳೆಯ ಹೇಳಿಕೆ ವೈರಲ್ ಆಗಿದೆ. ‘ಯಾವುದೇ ಕುಟುಂಬದಿಂದ ಬಂದರೂ ಕೊನೆಯಲ್ಲಿ ಅದು ನಮ್ಮ ಜರ್ನಿಯೇ ಆಗಿರುತ್ತದೆ. ನಿಮ್ಮ ತಂದೆ, ತಾಯಿ, ಅಜ್ಜ ಇದನ್ನು ಬದಲಾಯಿಸಲು ಸಾಧ್ಯವಿಲ್ಲ. ಸ್ಟಾರ್ ಮಕ್ಕಳಿಗೆ ಇದು ಸುಲಭ ಎಂದು ಹೇಳುವ ಎಲ್ಲ ಜನರ ಮುಖಕ್ಕೆ ಗುದ್ದಲು ಬಯಸುತ್ತೇನೆ’ ಎಂದು ಆಲಿಯಾ ಭಟ್ ಹೇಳಿದ್ದರು.
ಸೋನಮ್ ಕಪೂರ್, ಅನನ್ಯಾ ಪಾಂಡೆ ದೊಡ್ಡ ಹಿನ್ನೆಲೆ ಹೊಂದಿರುವವರು. ಆದರೆ, ಅವರಿಗೆ ತಮ್ಮ ತನವನ್ನು ಸಾಬೀತು ಮಾಡಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಅವರಿಗೆ ಈವರೆಗೆ ದೊಡ್ಡ ಗೆಲುವು ಸಿಕ್ಕಿಲ್ಲ. ನಟನೆಯ ಮೂಲಕ ತಮ್ಮನ್ನು ತಾವು ಸಾಬೀತು ಮಾಡಿಕೊಳ್ಳಲು ಅವರ ಬಳಿ ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಅವರು ಹೆಚ್ಚು ಗುರುತಿಸಿಕೊಂಡಿಲ್ಲ. ಆದರೆ, ಆಲಿಯಾ ಭಟ್ ಇವರಿಗಿಂತ ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ.
& we’re rolling ..
day one of bringing our jigra to life.. stay tuned as we bring to you a piece of our hearts.. fingers and toes crossed for the journey aheaddddddd ..
love
TEAM JIGRA pic.twitter.com/CB1RXhBxHh— Alia Bhatt (@aliaa08) October 4, 2023
ಇದನ್ನೂ ಓದಿ: SSE Side B Review: ‘ಸೈಡ್ ಎ’ ಬಳಿಕ ಮನು, ಪ್ರಿಯಾ ಬದುಕು ಬದಲಾದರೂ ‘ಸೈಡ್ ಬಿ’ ಲಯ ಬದಲಾಗಿಲ್ಲ
ಆಲಿಯಾ ಭಟ್ ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ‘ರಾಜಿ’, ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸೇರಿ ಅನೇಕ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಇತ್ತೀಚೆಗೆ ಅವರಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಿದೆ. ಹಾಲಿವುಡ್ ಚಿತ್ರರಂಗಕ್ಕೂ ಅವರು ಕಾಲಿಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ