ಮಹೇಶ್ ಭಟ್ ಫ್ಯಾಮಿಲಿ ಟ್ರೀ: ಇವರ ಕುಟುಂಬದ ಯಾರೆಲ್ಲಾ ಚಿತ್ರರಂಗದಲ್ಲಿದ್ದಾರೆ ಗೊತ್ತಾ?

Alia Bhatt Family Tree: ಆಲಿಯಾ ಭಟ್ ನಟನೆಯ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಇತ್ತೀಚೆಗೆ ಥಿಯೇಟರ್​ನಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಅವರ ಕುಟುಂಬದ ವಂಶವೃಕ್ಷ ಇಲ್ಲಿದೆ..

ಮಹೇಶ್ ಭಟ್ ಫ್ಯಾಮಿಲಿ ಟ್ರೀ: ಇವರ ಕುಟುಂಬದ ಯಾರೆಲ್ಲಾ ಚಿತ್ರರಂಗದಲ್ಲಿದ್ದಾರೆ ಗೊತ್ತಾ?
ಆಲಿಯಾ ಭಟ್​ ಫ್ಯಾಮಿಲಿ
Follow us
 ಶ್ರೀಲಕ್ಷ್ಮೀ ಎಚ್
| Updated By: ಮದನ್​ ಕುಮಾರ್​

Updated on: Aug 04, 2023 | 6:51 PM

ನಿರ್ಮಾಪಕ, ನಿರ್ದೇಶಕ ಮಹೇಶ್ ಭಟ್​ (Mahesh Bhatt) ಕುಟುಂಬಕ್ಕೆ ಬಾಲಿವುಡ್‌ನಲ್ಲಿ ಒಳ್ಳೆಯ ಹೆಸರಿದೆ. ಮಹೇಶ್ ಭಟ್‌ನಿಂದ ಆಲಿಯಾ ಭಟ್‌ವರೆಗೆ ಈ ಕುಟುಂಬದ ಅನೇಕ ಸದಸ್ಯರು ಸಿನಿಮಾ ರಂಗದಲ್ಲಿ ತೊಡಗಿಕೊಂಡಿದ್ದಾರೆ. ಆಲಿಯಾ ಭಟ್ (Alia Bhatt) ಅವರು ಹಲವು ಆಫರ್​ಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಆಲಿಯಾ ಭಟ್ ನಟನೆಯ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಇತ್ತೀಚೆಗೆ ಥಿಯೇಟರ್​ನಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಕುಟುಂಬದ ವಂಶವೃಕ್ಷದ (Bhatt Family Tree) ಬಗ್ಗೆ ಇಲ್ಲಿದೆ ಮಾಹಿತಿ.

ಮಹೇಶ್ ಭಟ್: ಮಹೇಶ್ ಭಟ್ ಸೆಪ್ಟೆಂಬರ್ 20, 1948ರಂದು ಮುಂಬೈನಲ್ಲಿ ಜನಿಸಿದರು. ಮಹೇಶ್ ಭಟ್ ಬಾಲಿವುಡ್‌ನ ಪ್ರಸಿದ್ಧ ಚಲನಚಿತ್ರ ನಿರ್ಮಾಪಕರಲ್ಲಿ ಒಬ್ಬರು. ಅತ್ಯುತ್ತಮ ಸಿನಿಮಾಗಳನ್ನು ಚಿತ್ರರಂಗಕ್ಕೆ ನೀಡಿದ್ದಾರೆ. ಅವರ ತಂದೆ ನಾನಾಭಾಯ್ ಭಟ್ ಗುಜರಾತಿ ಬ್ರಾಹ್ಮಣ ಮತ್ತು ತಾಯಿ ಶಿರೀನ್ ಮೊಹಮ್ಮದ್ ಅಲಿ ಗುಜರಾತಿ ಮುಸ್ಲಿಂ. ನಾನಾಭಾಯ್​ಗೆ ಚಿತ್ರರಂಗದ ಜೊತೆ ಸಂಪರ್ಕವಿತ್ತು. ಅವರು ಹಿಂದಿ ಮತ್ತು ಗುಜರಾತಿ ಚಿತ್ರರಂಗದಲ್ಲಿ ನಿರ್ದೇಶಕರಾಗಿ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು.

ಇದನ್ನೂ ಓದಿ: ‘ನಿಮಗೆ ಏನಾಗಿದೆ?’; ರಸ್ತೆ ಮೇಲೆ ತಳ್ಳಾಡಿಕೊಂಡ ಆಲಿಯಾ ಭಟ್​-ರಣವೀರ್ ಸಿಂಗ್

ಮಹೇಶ್ ಭಟ್ ವಿವಾದಗಳ ಮೂಲಕವೂ ಸುದ್ದಿ ಆಗಿದ್ದಾರೆ. ಮಹೇಶ್ ಭಟ್ ಕೇವಲ 20ನೇ ವಯಸ್ಸಿನಲ್ಲಿ ಕಿರಣ್ ಭಟ್ ಅವರನ್ನು ವಿವಾಹವಾದರು. ಪ್ರೇಮ ವಿವಾಹವಾಗಿದ್ದರೂ ಈ ಸಂಬಂಧ ಹೆಚ್ಚು ವರ್ಷ ಉಳಿಯಲಿಲ್ಲ. ಇವರು ಬೇರೆ ಆದರು. ಮೊದಲ ಮದುವೆಯಿಂದ ಮಹೇಶ್ ಭಟ್ ಅವರಿಗೆ ರಾಹುಲ್ ಭಟ್ ಮತ್ತು ಪೂಜಾ ಭಟ್ ಹೆಸರಿನ ಮಕ್ಕಳಿದ್ದಾರೆ. ಕಿರಣ್ ಭಟ್ 2003ರಲ್ಲಿ ನಿಧನರಾದರು. ಆಗ ಅವರಿಗೆ 66 ವರ್ಷ ವಯಸ್ಸಾಗಿತ್ತು.

ಇದನ್ನೂ ಓದಿ: ಕ್ಯೂಟ್ ಲುಕ್​ನಲ್ಲಿ ಗಮನ ಸೆಳೆದ ನಟಿ ಆಲಿಯಾ ಭಟ್

ಸೋನಿ ರಜ್ದಾನ್ 80 ಮತ್ತು 90ರ ದಶಕದ ಜನಪ್ರಿಯ ನಟಿ. ಕೆಲವು ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ. ಸೋನಿ ರಜ್ದಾನ್ ಮತ್ತು ಮಹೇಶ್ ಭಟ್ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈ ವೇಳೆ ಪ್ರೀತಿ ಮೂಡಿತ್ತು. 1986ರಲ್ಲಿ ಮಹೇಶ್ ಹಾಗೂ ಸೋನಿ ವಿವಾಹ ನಡೆಯಿತು. ಅವರಿಗೆ ಆಲಿಯಾ ಮತ್ತು ಶಾಹೀನ್ ಜನಿಸಿದರು.

ಆಲಿಯಾ ಭಟ್: ಆಲಿಯಾ ಭಟ್ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಪ್ರತಿಭಾವಂತ ನಟಿ ಎಂಬ ಪಟ್ಟ ಸಿಕ್ಕಿದೆ. ಆಲಿಯಾ ಭಟ್ 15 ಮಾರ್ಚ್ 1993ರಂದು ಮುಂಬೈನಲ್ಲಿ ಜನಿಸಿದರು. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಏಪ್ರಿಲ್ 14, 2022ರಂದು ಮುಂಬೈನ ಬಾಂದ್ರಾದಲ್ಲಿನ ಮದುವೆ ಆದರು. ಈ ದಂಪತಿಗೆ ರಹಾ ಹೆಸರಿನ ಮಗಳಿದ್ದಾಳೆ.

ಇದನ್ನೂ ಓದಿ: ಸೀರೆಯುಟ್ಟು ಮಿಂಚಿದ ಬಾಲಿವುಡ್ ನಟಿ ಆಲಿಯಾ ಭಟ್

ಪೂಜಾ ಭಟ್: ಪೂಜಾ ಭಟ್ ಅವರು ಚಿತ್ರರಂಗದಲ್ಲಿ ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ನಟನೆ ಮೂಲಕವೂ ಅವರು ಗುರುತಿಸಿಕೊಂಡಿದ್ದಾರೆ. ಸದ್ಯ ಅವರು ‘ಬಿಗ್ ಬಾಸ್ ಒಟಿಟಿ 2’ ರಿಯಾಲಿಟಿ ಶೋನಲ್ಲಿ ಸ್ಪರ್ಧೆ ಮಾಡಿದ್ದಾರೆ.

ಇಮ್ರಾನ್ ಹಶ್ಮಿ: ಇಮ್ರಾನ್​ ಹಶ್ಮಿಗೂ ಮಹೇಶ್ ಭಟ್ ಕುಟುಂಬಕ್ಕೂ ಸಂಬಂಧ ಇದೆ. ಇಮ್ರಾನ್ ಹಶ್ಮಿ ತಂದೆ ಹೆಸರು ಅನ್ವರ್ ಹಶ್ಮಿ. ಇವರು ನಟಿ ಪೂರ್ಣಿಮಾ ದಾಸ್ ವರ್ಮಾ (ನಿಜವಾದ ಹೆಸರು ಮೆಹ್ರಾಬಾನೋ ಅಲಿ) ಅವರ ಮಗ. ಪೂರ್ಣಿಮಾ ಸಹೋದರಿಯೇ ಶಿರೀನ್ ಮೊಹಮ್ಮದ್ ಅಲಿ. ಶಿರೀನ್ ಅವರು ಮಹೇಶ್ ಭಟ್ ತಾಯಿ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.