AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೀ-ರಿಲೀಸ್ ಆದ ‘ಕೋಯಿ ಮಿಲ್ ಗಯಾ’; 20 ವರ್ಷಗಳ ಬಳಿಕವೂ ಭರ್ಜರಿ ರೆಸ್ಪಾನ್ಸ್​

Koi Mil Gaya: ‘ಕೋಯಿ ಮಿಲ್ ಗಯಾ' ಚಿತ್ರ ಬೆಂಗಳೂರು ಸೇರಿ ದೇಶದ ಪ್ರಮುಖ 30 ನಗರಗಳಲ್ಲಿ ಮರು ಬಿಡುಗಡೆಯಾಗಿದೆ. PVR ಮತ್ತು INOX ಮಲ್ಟಿಪ್ಲೆಕ್ಸ್​ಗಳಲ್ಲಿ ಆಗಸ್ಟ್ 4ರಿಂದ ವೀಕ್ಷಣೆಗೆ ಲಭ್ಯವಿದೆ.

ರೀ-ರಿಲೀಸ್ ಆದ ‘ಕೋಯಿ ಮಿಲ್ ಗಯಾ’; 20 ವರ್ಷಗಳ ಬಳಿಕವೂ ಭರ್ಜರಿ ರೆಸ್ಪಾನ್ಸ್​
‘ಕೋಯಿ ಮಿಲ್ ಗಯಾ' ಸಿನಿಮಾ ಪೋಸ್ಟರ್​
 ಶ್ರೀಲಕ್ಷ್ಮೀ ಎಚ್
| Edited By: |

Updated on: Aug 04, 2023 | 8:09 PM

Share

ಹೃತಿಕ್ ರೋಷನ್ (Hrithik Roshan) ನಟನೆಯ ‘ಕೋಯಿ ಮಿಲ್ ಗಯಾ’ ಸಿನಿಮಾ 2003ರಲ್ಲಿ ರಿಲೀಸ್ ಆಗಿ ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆ ಪಡೆದಿತ್ತು. ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಮುಗಿಬಿದ್ದು ಈ ಸಿನಿಮಾ ವೀಕ್ಷಿಸಿದರು. ಹೃತಿಕ್ ರೋಷನ್ ಅವರ ವೃತ್ತಿಜೀವನಕ್ಕೆ ಈ ಚಿತ್ರ ಭರ್ಜರಿ ಮೈಲೇಜ್ ನೀಡಿತು. ‘ಕೋಯಿ ಮಿಲ್ ಗಯಾ’ (Koi Mil Gaya) ಬಿಡುಗಡೆಯಾಗಿ 20 ವರ್ಷಗಳನ್ನು ಪೂರೈಸಿದೆ. ಇದೇ ಸಂದರ್ಭದಲ್ಲಿ ಸಿನಿಮಾ ಮತ್ತೆ ರಿಲೀಸ್ (Koi Mil Gaya Re Release) ಆಗಿದೆ. ವಿಶೇಷ ಎಂದರೆ 20 ವರ್ಷಗಳ ಬಳಿಕ ಈ ಸಿನಿಮಾ ರೀ-ರಿಲೀಸ್ ಆದರೂ ಈ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.

‘ಕೋಯಿ ಮಿಲ್ ಗಯಾ’ ಚಿತ್ರ ಬೆಂಗಳೂರು ಸೇರಿ ದೇಶದ ಪ್ರಮುಖ 30 ನಗರಗಳಲ್ಲಿ ಮರು ಬಿಡುಗಡೆಯಾಗಿದೆ. PVR ಮತ್ತು INOX ಮಲ್ಟಿಪ್ಲೆಕ್ಸ್​ಗಳಲ್ಲಿ ಆಗಸ್ಟ್ 4ರಿಂದ ವೀಕ್ಷಣೆಗೆ ಲಭ್ಯವಿದೆ. ಬೆಂಗಳೂರಿನ ಅನೇಕ ಕಡೆಗಳಲ್ಲಿ ಜನರು ಸಿನಿಮಾ ವೀಕ್ಷಿಸುತ್ತಿದ್ದಾರೆ. ಈ ಚಿತ್ರವನ್ನು ಹೃತಿಕ್ ರೋಷನ್ ಅವರ ತಂದೆ ರಾಕೇಶ್ ರೋಷನ್ ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ಹೃತಿಕ್ ಎದುರು ಪ್ರೀತಿ ಜಿಂಟಾ ಕಾಣಿಸಿಕೊಂಡಿದ್ದರು. ಹೃತಿಕ್ ತಾಯಿಯ ಪಾತ್ರದಲ್ಲಿ ರೇಖಾ ನಟಿಸಿದ್ದರು.

ಇದನ್ನೂ ಓದಿ: ಹೊಸ ಪ್ರೇಯಸಿ ಜೊತೆ ಡೇಟಿಂಗ್​ ಮಾಡುತ್ತಿರುವ ಹೃತಿಕ್​ ರೋಷನ್​; ಈಗ ಯಾವುದೂ ಗುಟ್ಟಾಗಿ ಉಳಿದಿಲ್ಲ

‘ಕೋಯಿ ಮಿಲ್​ ಗಯಾ’ ಸಿನಿಮಾ ಎರಡು ದಶಕ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ರಾಕೇಶ್ ರೋಷನ್ ಇತ್ತೀಚೆಗೆ ಮಾತನಾಡಿದ್ದರು. ಹೃತಿಕ್​ ಅವರ ಕಲೆಯನ್ನು ಜಗತ್ತಿಗೆ ತೋರಿಸಲು ಈ ಸಿನಿಮಾ ನಿರ್ದೇಶನ ಮಾಡಿದ್ದಾಗಿ ಅವರು ಹೇಳಿದ್ದರು. ಹೃತಿಕ್ ರೋಷನ್ ನಟನೆಯ ‘ಕಹೋ ನಾ ಪ್ಯಾರ್ ಹೈ’ ಭರ್ಜರಿ ಯಶಸ್ಸು ಕಂಡಿತು. ಇದಾದ ಬಳಿಕ ಹೃತಿಕ್ ನಟನೆಯ ಸಿನಿಮಾಗಳು ಸತತವಾಗಿ ಫ್ಲಾಪ್ ಆಗಿದ್ದವು. ಅವರಿಗೆ ‘ಕೋಯಿ ಮಿಲ್ ಗಯಾ’ ಸಿನಿಮಾ ಯಶಸ್ಸು ಕೊಟ್ಟಿತು.

ಇದನ್ನೂ ಓದಿ: Hrithik Roshan: ‘ಸಿಟಾಡೆಲ್​’ ವೆಬ್​ ಸಿರೀಸ್​ ನೋಡಿ ಮೆಚ್ಚುಗೆ ಸೂಚಿಸಿದ ಹೃತಿಕ್​ ರೋಷನ್​; ಪ್ರಿಯಾಂಕಾಗೆ ಖುಷಿ

ಹೃತಿಕ್ ಕೂಡ ಗೆಲ್ಲಲೇಬೇಕು ಎಂದುಕೊಂಡಿದ್ದರು. ಹೆಚ್ಚು ಶ್ರಮ ಹಾಕಿ ಅವರು ಎರಡು ಶೇಡ್​​ಗಳಲ್ಲಿ ಕಾಣಿಸಿಕೊಂಡಿದ್ದರು. ಒಂದು ಕಡೆ ಬುದ್ಧಿಮಾಂದ್ಯ ಹುಡುಗನ ರೀತಿಯಲ್ಲಿ ಕಾಣಿಸಿಕೊಂಡರೆ, ನಂತರ ವಿಶೇಷ ಶಕ್ತಿ ಪಡೆಯುವ ವ್ಯಕ್ತಿಯ ಪಾತ್ರ ಮಾಡಿದ್ದರು. ಈ ಪಾತ್ರವನ್ನು ನಿರ್ವಹಿಸಲು ಅವರು ವಿಶೇಷ ಸಿದ್ಧತೆ ಮಾಡಿಕೊಂಡಿದ್ದರು.

ಇದನ್ನೂ ಓದಿ: Hrithik Roshan: ‘ಫೈಟರ್​’ ಚಿತ್ರದಲ್ಲಿ ಹೃತಿಕ್​ ರೋಷನ್​ಗೆ 85 ಕೋಟಿ ರೂ. ಸಂಭಾವನೆ; ದೀಪಿಕಾ ಪಡುಕೋಣೆ ಸಂಬಳ ಎಷ್ಟು?

‘ಕ್ರಿಶ್ 4’ ಚಿತ್ರಕ್ಕೆ ಸಿದ್ಧತೆ

‘ಕೋಯಿ ಮಿಲ್ ಗಯಾ’ ದೊಡ್ಡ ಹಿಟ್ ಆದ ಬಳಿಕ ಇದನ್ನು ಫ್ರಾಂಚೈಸಿ ಮಾಡಿದರು ರಾಕೇಶ್. ನಂತರ ‘ಕ್ರಿಶ್’ ಮಾಡಿದರು. ಇದಾದ ನಂತರ ‘ಕ್ರಿಶ್ 3′ ಬಂತು. ಈಗ ‘ಕ್ರಿಶ್ 4’ ತರಲು ತಯಾರಿ ನಡೆಯುತ್ತಿದೆ. 2024ರಲ್ಲಿ ಈ ಚಿತ್ರದ ಕೆಲಸ ಶುರುವಾಗುವ ಸಾಧ್ಯತೆ ಇದೆ. ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್