AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಪ್ರೇಯಸಿ ಜೊತೆ ಡೇಟಿಂಗ್​ ಮಾಡುತ್ತಿರುವ ಹೃತಿಕ್​ ರೋಷನ್​; ಈಗ ಯಾವುದೂ ಗುಟ್ಟಾಗಿ ಉಳಿದಿಲ್ಲ

Hrithik Roshan Girlfriend: ಸಬಾ ಆಜಾದ್​ ಜೊತೆ ಹೃತಿಕ್ ರೋಷನ್​ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ವಿಚಾರ ಮೊದಲೆಲ್ಲ ಗಾಸಿಪ್​ ರೂಪದಲ್ಲಿ ಇತ್ತು. ಆದರೆ ಈಗ ಅವರಿಬ್ಬರು ಯಾವುದೇ ಹಿಂಜರಿಕೆ ಇಲ್ಲದೇ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಹೊಸ ಪ್ರೇಯಸಿ ಜೊತೆ ಡೇಟಿಂಗ್​ ಮಾಡುತ್ತಿರುವ ಹೃತಿಕ್​ ರೋಷನ್​; ಈಗ ಯಾವುದೂ ಗುಟ್ಟಾಗಿ ಉಳಿದಿಲ್ಲ
ಹೃತಿಕ್​ ರೋಷನ್​, ಸಬಾ ಆಜಾದ್​
ಮದನ್​ ಕುಮಾರ್​
|

Updated on: Aug 02, 2023 | 11:57 AM

Share

ನಟ ಹೃತಿಕ್​ ರೋಷನ್​ (Hrithik Roshan) ಅವರು ಸಿನಿಮಾ ಕೆಲಸಗಳಿಂದ ಸಣ್ಣ ಬ್ರೇಕ್​ ಪಡೆದುಕೊಂಡಿದ್ದಾರೆ. ಹಾಯಾಗಿ ಅವರು ವಿದೇಶದಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. ಅವರು ಸಿಂಗಲ್​ ಆಗಿ ರಜೆಯನ್ನು ಎಂಜಾಯ್​ ಮಾಡಿದ್ದರೆ ಇಷ್ಟು ಸುದ್ದಿ ಆಗುತ್ತಿರಲಿಲ್ಲ. ಆದರೆ ಹೃತಿಕ್ ರೋಷನ್​ ಅವರು ಎಲ್ಲರ ಗಮನ ಸೆಳೆಯುತ್ತಿರುವುದು ಹೊಸ ಪ್ರೇಯಸಿಯ ಕಾರಣದಿಂದ! ಹೌದು, ಸಬಾ ಆಜಾದ್​ (Saba Azad) ಜೊತೆ ಹೃತಿಕ್ ರೋಷನ್​ ಅವರು ಡೇಟಿಂಗ್​ (Dating) ಮಾಡುತ್ತಿದ್ದಾರೆ. ಈಗ ಅವರಿಬ್ಬರ ಪ್ರೀತಿಯ ವಿಚಾರ ಗುಟ್ಟಾಗಿ ಉಳಿದಿಲ್ಲ. ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿರುವ ಹಲವಾರು ಫೋಟೋಗಳು ಇಬರಿಬ್ಬರ ಸಂಬಂಧಕ್ಕೆ ಸಾಕ್ಷಿ ಒದಗಿಸುತ್ತಿವೆ.

ಈ ಮೊದಲು ಹೃತಿಕ್​ ರೋಷನ್​ ಅವರು ಸುಸಾನೆ ಖಾನ್​ ಜೊತೆ ಮದುವೆ ಆಗಿದ್ದರು. ಆ ದಂಪತಿಗೆ ಇಬ್ಬರು ಗಂಡು ಮಕ್ಕಳು ಜನಿಸಿದ್ದರು. ವರ್ಷಗಳು ಕಳೆದಂತೆ ಹೃತಿಕ್​ ರೋಷನ್​ ಮತ್ತು ಸುಸಾನೆ ಖಾನ್​ ಅವರ ನಡುವೆ ವೈಮನಸ್ಸು ಮೂಡಿತು. ಹಾಗಾಗಿ ಅವರು ಇಚ್ಛೇದನ ಪಡೆದುಕೊಂಡರು. ಡಿವೋರ್ಸ್​ ಬಳಿಕ ಮಕ್ಕಳ ಜವಾಬ್ದಾರಿಯನ್ನು ಇಬ್ಬರೂ ಹೊತ್ತುಕೊಂಡಿದ್ದಾರೆ. ಮಾಜಿ ಪತ್ನಿ ಸುಸಾನೆ ಖಾನ್​ರಿಂದ ಸಂಪೂರ್ಣ ದೂರ ಆಗಿರುವ ಹೃತಿಕ್​ ರೋಷನ್​ ಅವರು ಈಗ ಹೊಸ ಪ್ರೇಯಸಿ ಸಬಾ ಆಜಾದ್​ ಜೊತೆ ಸುತ್ತಾಡುತ್ತಿದ್ದಾರೆ.

ಸಬಾ ಆಜಾದ್​ ಮತ್ತು ಹೃತಿಕ್ ರೋಷನ್​ ಅವರು ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ವಿಚಾರ ಮೊದಲೆಲ್ಲ ಗಾಸಿಪ್​ ರೂಪದಲ್ಲಿ ಇತ್ತು. ಆ ಬಗ್ಗೆ ಹೃತಿಕ್​ ರೋಷನ್​ ಅವರಾಗಲಿ, ಸಬಾ ಆಜಾದ್​ ಅವರಾಗಲಿ ಯಾವುದೇ ವಿಷಯ ಬಾಯಿ ಬಿಟ್ಟಿರಲಿಲ್ಲ. ಆದರೆ ಈಗ ಅವರಿಬ್ಬರು ಯಾವುದೇ ಹಿಂಜರಿಕೆ ಇಲ್ಲದೇ ತಮ್ಮ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸದ್ಯ ಹೃತಿಕ್​ ರೋಷನ್​ ಮತ್ತು ಸಬಾ ಅಜಾದ್​ ಅವರು ಅರ್ಜೆಂಟಿನಾಗೆ ತೆರೆಳಿದ್ದಾರೆ. ಅಲ್ಲಿನ ಸುಂದರವಾದ ಸ್ಥಳಗಳಲ್ಲಿ ರಜೆಯ ಮಜಾ ಸವಿಯುತ್ತಿದ್ದಾರೆ.

ಇದನ್ನೂ ಓದಿ: Hrithik Roshan: ‘ಫೈಟರ್​’ ಚಿತ್ರದಲ್ಲಿ ಹೃತಿಕ್​ ರೋಷನ್​ಗೆ 85 ಕೋಟಿ ರೂ. ಸಂಭಾವನೆ; ದೀಪಿಕಾ ಪಡುಕೋಣೆ ಸಂಬಳ ಎಷ್ಟು?

ಬಾಲಿವುಡ್​ನಲ್ಲಿ ಹೃತಿಕ್​ ರೋಷನ್​ ಅವರಿಗೆ ಸಖತ್​ ಬೇಡಿಕೆ ಇದೆ. ಸೈಫ್​ ಅಲಿ ಖಾನ್​ ಜೊತೆ ಅವರು ನಟಿಸಿದ ‘ವಿಕ್ರಮ್​ ವೇದ’ ಸಿನಿಮಾ ಕಳೆದ ವರ್ಷ ಬಿಡುಗಡೆ ಆಯಿತು. ಆದರೆ ಹೇಳಿಕೊಳ್ಳುವ ಮಟ್ಟಕ್ಕೆ ಜನಮೆಚ್ಚುಗೆ ಸಿಗಲಿಲ್ಲ. ಈಗ ಹೃತಿಕ್​ ರೋಷನ್​ ಅವರ ಕೈಯಲ್ಲಿ ‘ಫೈಟರ್​’ ಮತ್ತು ‘ವಾರ್​ 2’ ಚಿತ್ರಗಳು ಇವೆ. ‘ಫೈಟರ್​’ ಸಿನಿಮಾಗೆ ದೀಪಿಕಾ ಪಡುಕೋಣೆ ನಾಯಕಿ. ಇನ್ನು, ‘ವಾರ್​ 2’ ಚಿತ್ರದಲ್ಲಿ ಹೃತಿಕ್​ ರೋಷನ್​ ಅವರು ಜೂನಿಯರ್​ ಎನ್​ಟಿಆರ್​ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು