Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್​ ನಿರ್ದೇಶಕರ ಸಹವಾಸವೇ ಬೇಡ ಅಂತ ಮಹತ್ವದ ನಿರ್ಧಾರ ತೆಗೆದುಕೊಂಡ ಪ್ರಭಾಸ್​?

Prabhas Next Movie: ಪ್ರಭಾಸ್​ ಅವರ ವೃತ್ತಿಜೀವನದಲ್ಲಿ ಈಗ ಎಲ್ಲವೂ ಸರಿ ಇಲ್ಲ. ಮಾಡಿದ ಸಿನಿಮಾಗಳೆಲ್ಲವೂ ಫ್ಲಾಪ್​ ಆಗುತ್ತಿವೆ. ಹಾಗಾಗಿ ಅವರು ಗೆಲುವಿಗಾಗಿ ಬೇರೆಯದೇ ಪ್ಲ್ಯಾನ್​ ಮಾಡುತ್ತಿದ್ದಾರೆ.

ಬಾಲಿವುಡ್​ ನಿರ್ದೇಶಕರ ಸಹವಾಸವೇ ಬೇಡ ಅಂತ ಮಹತ್ವದ ನಿರ್ಧಾರ ತೆಗೆದುಕೊಂಡ ಪ್ರಭಾಸ್​?
ಪ್ರಭಾಸ್​, ಹೃತಿಕ್​ ರೋಷನ್​, ಸಿದ್ದಾರ್ಥ್​ ಆನಂದ್​
Follow us
ಮದನ್​ ಕುಮಾರ್​
|

Updated on: Aug 02, 2023 | 3:34 PM

ನಟ ಪ್ರಭಾಸ್​ (Prabhas) ಮತ್ತು ಅವರ ಅಭಿಮಾನಿಗಳು ‘ಆದಿಪುರುಷ್​’ ಸಿನಿಮಾ ಮೇಲೆ ಇಟ್ಟುಕೊಂಡಿದ್ದ ನಿರೀಕ್ಷೆ ಸಣ್ಣದೇನಲ್ಲ. ಆದರೆ ಆ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮೂಡಿಬಂದಿರಲಿಲ್ಲ. ಹಾಗಾಗಿ ಮೊದಲ ದಿನವೇ ಪ್ರೇಕ್ಷಕರಿಗೆ ಭಾರಿ ನಿರಾಸೆ ಆಗಿತ್ತು. ಆ ಚಿತ್ರಕ್ಕೆ ನಿರ್ದೇಶನ ಮಾಡಿದ್ದು ಬಾಲಿವುಡ್​ ನಿರ್ದೇಶಕ ಓಂ ರಾವತ್​. ‘ಆದಿಪುರುಷ್​’ ಬಿಡುಗಡೆ ಆಗುವುದಕ್ಕೂ ಮುನ್ನ ‘ಪಠಾಣ್​’ ಚಿತ್ರದ ನಿರ್ದೇಶಕ ಸಿದ್ದಾರ್ಥ್ ಆನಂದ್​ (Siddharth Anand) ಜೊತೆ ಒಂದು ಸಿನಿಮಾ ಮಾಡಲು ಪ್ರಭಾಸ್​ ಒಪ್ಪಿಕೊಂಡಿದ್ದರು. ಆ ಚಿತ್ರಕ್ಕೆ ‘ಮೈತ್ರಿ ಮೂವೀ ಮೇಕರ್ಸ್​’ ಬಂಡವಾಳ ಹೂಡಲಿದೆ ಎಂದು ಸುದ್ದಿ ಆಗಿತ್ತು. ಆದರೆ ಈಗ ಆ ಪ್ರಾಜೆಕ್ಟ್ ಬಗ್ಗೆ ಪ್ರಭಾಸ್​ ಅವರು ಉತ್ಸಾಹ ತೋರಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೇ, ಬಾಲಿವುಡ್​ (Bollywood) ನಿರ್ದೇಶಕರ ಸಹವಾಸವೇ ಬೇಡ ಎಂಬ ನಿರ್ಧಾರಕ್ಕೆ ಅವರು ಬಂದಿದ್ದಾರೆ ಎಂದು ಗಾಸಿಪ್​ ಹಬ್ಬಿದೆ.

ಪ್ರಭಾಸ್​ ಅವರ ವೃತ್ತಿಜೀವನದಲ್ಲಿ ಈಗ ಎಲ್ಲವೂ ಸರಿ ಇಲ್ಲ. ಮಾಡಿದ ಸಿನಿಮಾಗಳೆಲ್ಲವೂ ಫ್ಲಾಪ್​ ಆಗುತ್ತಿವೆ. ‘ಸಾಹೋ’, ‘ರಾಧೆ ಶ್ಯಾಮ್​’ ಮತ್ತು ‘ಆದಿಪುರುಷ್​’ ಸಿನಿಮಾಗಳ ಸರಣಿ ಸೋಲಿನಿಂದ ಅವರ ಅಭಿಮಾನಿಗಳಿಗೆ ಬೇಸರ ಆಗಿದೆ. ‘ಸಲಾರ್​’ ಮತ್ತು ‘ಕಲ್ಕಿ 2898 ಎಡಿ’ ಸಿನಿಮಾಗಳು ಗೆಲ್ಲಲೇಬೇಕಿದೆ. ಆ ಚಿತ್ರಗಳಿಗೆ ಆ್ಯಕ್ಷನ್​-ಕಟ್​ ಹೇಳುತ್ತಿರುವುದು ದಕ್ಷಿಣ ಭಾರತದ ನಿರ್ದೇಶಕರು. ‘ಆದಿಪುರುಷ್​’ ಸೋತ ಬಳಿಕ ಬಾಲಿವುಡ್​ ನಿರ್ದೇಶಕರ ಬಗ್ಗೆ ಪ್ರಭಾಸ್​ಗೆ ಭರವಸೆ ಕಡಿಮೆ ಆಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Prabhas: ‘ಪ್ರಾಜೆಕ್ಟ್​ ಕೆ’ ಫಸ್ಟ್​ ಲುಕ್​: ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ; ಪ್ರಭಾಸ್​ ಅಭಿಮಾನಿಗಳಿಗೆ ನಿರಾಸೆ

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ನಿರ್ದೇಶಕ ಸಿದ್ದಾರ್ಥ್​ ಆನಂದ್​ ಮತ್ತು ಪ್ರಭಾಸ್​ ಕಾಂಬಿನೇಷನ್​ನಲ್ಲಿ ಹೊಸ ಸಿನಿಮಾ ಸೆಟ್ಟೇರಬೇಕಿತ್ತು. ಆ ಚಿತ್ರದಲ್ಲಿ ಹೃತಿಕ್​ ರೋಷನ್​ ಕೂಡ ಪ್ರಮುಖ ಪಾತ್ರ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಸದ್ಯಕ್ಕೆ ಆ ಪ್ರಾಜೆಕ್ಟ್​ ಶುರು ಮಾಡಲು ಪ್ರಭಾಸ್​ ಅವರಿಗೆ ಮನಸ್ಸಿಲ್ಲ. ಅದರ ಬದಲು ತಮಿಳಿನ ಖ್ಯಾತ ನಿರ್ದೇಶಕ ಲೋಕೇಶ್​ ಕನಗರಾಜ್​ ಜೊತೆ ಪ್ರಭಾಸ್​ ಸಿನಿಮಾ ಮಾಡುವ ಬಗ್ಗೆ ಆಲೋಚನೆ ಮಾಡುತ್ತಿದ್ದಾರೆ ಎಂದು ಗಾಸಿಪ್​ ಕೇಳಿಬರುತ್ತಿದೆ. ಆ ಚಿತ್ರಕ್ಕೂ ‘ಮೈತ್ರಿ ಮೂವೀ ಮೇಕರ್ಸ್​’ ಬಂಡವಾಳ ಹೂಡಲಿದೆ.

ಇದನ್ನೂ ಓದಿ: Prabhas: ಕನ್ನಡ ನಿರ್ಮಾಪಕರ ಜತೆ ಹೊಸ ಸಿನಿಮಾಗೆ ಸಹಿ ಮಾಡಿದ ಪ್ರಭಾಸ್​; ಸೋಲಿನ ಬಳಿಕವೂ ಭಾರಿ ಡಿಮ್ಯಾಂಡ್​

ಲೋಕೇಶ್​ ಕನಗರಾಜ್​ ಅವರು ಸದ್ಯ ‘ಲಿಯೋ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಚಿತ್ರದಲ್ಲಿ ದಳಪತಿ ವಿಜಯ್​ ಅವರು ಮುಖ್ಯಭೂಮಿಕೆ ನಿಭಾಯಿಸುತ್ತಿದ್ದಾರೆ. ತ್ರಿಷಾ ಕೃಷ್ಣನ್​, ಸಂಜಯ್​ ದತ್​ ಮುಂತಾದ ಕಲಾವಿದರು ಕೂಡ ಈ ಸಿನಿಮಾದಲ್ಲಿ ಇದ್ದಾರೆ. ಈಗಾಗಲೇ ‘ಖೈದಿ’, ‘ವಿಕ್ರಂ’ ಮುಂತಾದ ಹಿಟ್​ ಸಿನಿಮಾಗಳನ್ನು ನೀಡಿದ ಖ್ಯಾತಿ ಲೋಕೇಶ್​ ಕನಗರಾಜ್​ ಅವರಿಗೆ ಇದೆ. ಅವರ ಜೊತೆ ಪ್ರಭಾಸ್​ ಕೈ ಜೋಡಿಸುತ್ತಾರೆ ಎಂಬ ಸುದ್ದಿ ಕೇಳಿಬಂದಿರುವುದು ಅಭಿಮಾನಿಗಳ ನಿರೀಕ್ಷೆ ಹೆಚ್ಚುವಂತೆ ಮಾಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!