AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಲ್ಲು ಅರ್ಜುನ್ ಆಲ್ಕೋಹಾಲ್ ಖರೀದಿಸಲು ಹೋದ ವಿಡಿಯೋ ವೈರಲ್; ಸ್ಪಷ್ಟನೆ ನೀಡಿದ ನಟ

ಅಲ್ಲು ಅರ್ಜುನ್ ಅವರ ವಿಡಿಯೋ ಒಂದು ಇತ್ತೀಚೆಗೆ ವೈರಲ್ ಆಗಿತ್ತು. ಗೋವಾದಲ್ಲಿ ತಂಗಿದ್ದ ಅವರು ಜನಸಾಮಾನ್ಯರಂತೆ ನಡೆದುಕೊಂಡು ಹೋಗಿ ಮದ್ಯ ಖರೀದಿ ಮಾಡಿದ್ದರು. ಅವರು ಆಲ್ಕೋಹಾಲ್ ಸ್ಟೋರ್​ಗೆ ಹೋಗುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದಕ್ಕೆ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.

ಅಲ್ಲು ಅರ್ಜುನ್ ಆಲ್ಕೋಹಾಲ್ ಖರೀದಿಸಲು ಹೋದ ವಿಡಿಯೋ ವೈರಲ್; ಸ್ಪಷ್ಟನೆ ನೀಡಿದ ನಟ
ಅಲ್ಲು ಅರ್ಜುನ್
ರಾಜೇಶ್ ದುಗ್ಗುಮನೆ
|

Updated on: Nov 14, 2024 | 8:51 AM

Share

‘ಪುಷ್ಪ 2’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ವೇಳೆ ಅಲ್ಲು ಅರ್ಜುನ್ ಅವರು ನಾನಾ ಮಾಧ್ಯಮಗಳಿಗೆ ಸಂದರ್ಶನ ನೀಡುವ ಕೆಲಸ ಮಾಡುತ್ತಿದ್ದಾರೆ. ವಿವಿಧ ಸಂದರ್ಶನಗಳಲ್ಲಿ ಸಿನಿಮಾ ಬಗ್ಗೆ ತಮಗೆ ಇರುವ ಅಭಿಪ್ರಾಯ ಹೊರಹಾಕುತ್ತಿದ್ದಾರೆ. ಅಲ್ಲದೆ, ವೈಯಕ್ತಿಕ ವಿಚಾರಗಳ ಬಗ್ಗೆಯೂ ಮಾತನಾಡಿದ್ದಾರೆ. ಈ ಮಧ್ಯೆ ಅವರು ಗೋವಾದಲ್ಲಿ ಆಲ್ಕೋಹಾಲ್ ಖರೀದಿಸಿದ ವಿಡಿಯೋ ಒಂದು ವೈರಲ್ ಆಗಿತ್ತು. ಇದಕ್ಕೆ ಅವರು ಸ್ಪಷ್ಟನೆ ನೀಡಿದ್ದಾರೆ.

ಅಲ್ಲು ಅರ್ಜುನ್ ಅವರ ವಿಡಿಯೋ ಒಂದು ಇತ್ತೀಚೆಗೆ ವೈರಲ್ ಆಗಿತ್ತು. ಗೋವಾದಲ್ಲಿ ತಂಗಿದ್ದ ಅವರು ಜನಸಾಮಾನ್ಯರಂತೆ ನಡೆದುಕೊಂಡು ಹೋಗಿ ಮದ್ಯ ಖರೀದಿ ಮಾಡಿದ್ದರು. ಅವರು ಆಲ್ಕೋಹಾಲ್ ಸ್ಟೋರ್​ಗೆ ಹೋಗುತ್ತಿರುವ ವಿಡಿಯೋ ವೈರಲ್ ಆಗಿತ್ತು. ‘ಅನ್​ಸ್ಟಾಪೆಬಲ್ ವಿತ್ ಎನ್​ಬಿಕೆ’ ಶೋನಲ್ಲಿ ಈ ವಿಚಾರ ಚರ್ಚೆಗೆ ಬಂದಿದೆ. ಹೋಸ್ಟ್ ನಂದಮೂರಿ ಬಾಲಕೃಷ್ಣ ಅವರು ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

‘ನಾನು ಮದ್ಯದ ಅಂಗಡಿಗೆ ಹೋಗಿದ್ದು ನಿಜ, ಆದರೆ, ಮದ್ಯ ನನಗಲ್ಲ, ನನ್ನ ಗೆಳೆಯನಿಗೆ ಆಗಿತ್ತು’ ಎಂದಿದ್ದಾರೆ ಅಲ್ಲು ಅರ್ಜುನ್. ಇಂದು (ನವೆಂಬರ್ 14) ಎಪಿಸೋಡ್ ಆಹಾ ಒಟಿಟಿ ಮೂಲಕ ಪ್ರಸಾರ ಕಾಣಲಿದೆ. ಅವರ ಗೆಳೆಯ ಕೂಡ ಈ ಶೋಗೆ ಬಂದಿದ್ದರು ಎಂದು ಹೇಳಲಾಗುತ್ತಿದೆ. ಎಪಿಸೋಡ್ ನೋಡಿದ ಬಳಿಕವೇ ಆ ಬಗ್ಗೆ ಸ್ಪಷ್ಟನೆ ಸಿಗಲಿದೆ.

ಬಾಲಯ್ಯ ಶೋನಲ್ಲಿ ಅನೇಕ ವಿಚಾರಗಳು ಚರ್ಚೆ ಆಗುತ್ತವೆ. ಬಾಲಯ್ಯ ಅವರು ಫಿಲ್ಟರ್ ಇಲ್ಲದೆ ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಾರೆ. ಈ ಕಾರಣದಿಂದಲೂ ಅವರು ಹೆಚ್ಚು ಸುದ್ದಿ ಆಗುತ್ತಿದ್ದಾರೆ. ಹೀಗಾಗಿ, ಅಲ್ಲು ಅರ್ಜುನ್ ಅವರಿಗೆ ಯಾವ ರೀತಿಯ ಪ್ರಶ್ನೆಗಳು ಎದುರಾಗುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ಪುಷ್ಪ 2’ ಟ್ರೇಲರ್​ ಬಗ್ಗೆ ಸಿಹಿ ಸುದ್ದಿ ನೀಡಿದ ಅಲ್ಲು ಅರ್ಜುನ್​; ನ.17ಕ್ಕೆ ಕಾತರ

ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಚಿತ್ರದ ಟ್ರೇಲರ್ ನವೆಂಬರ್ 17ರಂದು ಪಾಟ್ನಾದಲ್ಲಿ ರಿಲೀಸ್ ಆಗಲಿದೆ. ಯೂಟ್ಯೂಬ್​ ಮೂಲಕ ಇದನ್ನು ನೋಡಲು ಅವಕಾಶ ಇದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮೊದಲಾದವರು ನಟಿಸಿದ್ದಾರೆ. ಸುಕುಮಾರ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us