AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿಗರಿಗೆ ನಾನೇ ಟಾರ್ಗೆಟ್​​ ಎಂದ ಸಿಎಂ: ಕಾರಣವನ್ನೂ ಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ

ಬಿಜೆಪಿಗರಿಗೆ ನಾನೇ ಟಾರ್ಗೆಟ್​​ ಎಂದ ಸಿಎಂ: ಕಾರಣವನ್ನೂ ಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ

Pramod Shastri G
| Edited By: |

Updated on: Apr 04, 2026 | 8:27 PM

Share

ಉಪಚುನಾವಣೆ ಪ್ರಚಾರದ ಮಧ್ಯೆ ಟಿವಿ9 ಜೊತೆ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಡವರ ಪರ ನಿಲುವಿನ ಕಾರಣ ಬಿಜೆಪಿ ತನ್ನನ್ನು ಟಾರ್ಗೆಟ್ ಮಾಡುತ್ತಿದೆ ಎಂದು ದೂರಿದ್ದಾರೆ. ಕಾಂಗ್ರೆಸ್ ಸರ್ಕಾರ ತನ್ನ ಕಾರ್ಯಕ್ರಮಗಳು ಮತ್ತು ಸಾಧನೆಗಳನ್ನು ಜನರಿಗೆ ತಿಳಿಸುತ್ತಿದ್ದು, ಜನ ಅವುಗಳನ್ನು ವಿಮರ್ಶಿಸಲಿದ್ದಾರೆ. ಬಿಜೆಪಿಗರು ನನ್ನ ಮೇಲೆ ಮಾತಿನ ದಾಳಿ ಮಾಡೋದನ್ನು ಬಿಟ್ಟು ಮತ್ತೇನನ್ನು ಮಾಡುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ.

ಬಾಗಲಕೋಟೆ, ಏಪ್ರಿಲ್​​ 04: ಉಪ ಚುನಾವಣೆಗೆ ಯಾವುದೇ ಅಜೆಂಡಾ ಎಂಬುದನ್ನು ಕಾಂಗ್ರೆಸ್​​ ಇಟ್ಟುಕೊಂಡಿಲ್ಲ. ನಮ್ಮ ಕೆಲಸಗಳನ್ನು ಜನರ ಮುಂದೆ ಇಟ್ಟಿದ್ದು, ಮತದಾರರು ಅವುಗಳ ವಿಮರ್ಶೆ ಮಾಡಿ ವೋಟ್​​ ಹಾಕಲಿದ್ದಾರೆ. ಬಿಜೆಪಿಗರು ನನ್ನ ಮೇಲೆ ಮಾತಿನ ದಾಳಿ ನಡೇಸೋದು ಬಿಟ್ಟು, ರಾಜ್ಯದಲ್ಲಿ ಅಧಿಕಾರದಲ್ಲಿದ್ದ 9 ವರ್ಷ ನಾವೇನು ಮಾಡಿದ್ದೇವೆ ಎಂಬುದನ್ನು ಹೇಳುತ್ತಿಲ್ಲ. ಸಿದ್ದರಾಮಯ್ಯನವರ ಮೇಲೆ ಅಟ್ಯಾಕ್​​ ಮಾಡಿ ಎಂದು ಆರ್​​ಎಸ್​​ಎಸ್​​ನವರು ಬಿಜೆಪಿಗರಿಗೆ ಹೇಳಿಕೊಟ್ಟಿದ್ದು, ಬಡವರ ಮತ್ತು ಹಿಂದುಳಿದವರ ಪರ ನಾನು ಇರೋದಕ್ಕೇ ಅವರು ನನ್ನನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಹಿಂದಿನ ಉಪ ಚುನಾವಣೆಗಳಂತೆ ಈಗಿನ ಎರಡೂ ಬೈ ಎಲೆಕ್ಷನ್​​ಗಳಲ್ಲಿಯೂ ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನೂ ಸಿಎಂ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us