ಮಹೇಶ್ ಬಾಬು ರಿಮೇಕ್ ಸಿನಿಮಾಗಳನ್ನೇಕೆ ಮಾಡಲ್ಲ? ಇಲ್ಲಿದೆ ಕಾರಣ

ಮಹೇಶ್ ಬಾಬು ಅವರು ರಿಮೇಕ್ ಚಿತ್ರಗಳಲ್ಲಿ ನಟಿಸಿಲ್ಲ. ಅವರು ಹೋಲಿಕೆಗಳನ್ನು ತಪ್ಪಿಸಲು ಮತ್ತು ಮೂಲ ಕಥೆಗಳನ್ನು ಬೆಂಬಲಿಸಲು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಇದು ಅವರ ಹತ್ತು ವರ್ಷಗಳ ಹಿಂದಿನ ನಿಲುವಾಗಿದ್ದು, ಅವರು ಇಂದಿಗೂ ಅದನ್ನು ಪಾಲಿಸುತ್ತಿದ್ದಾರೆ.

ಮಹೇಶ್ ಬಾಬು ರಿಮೇಕ್ ಸಿನಿಮಾಗಳನ್ನೇಕೆ ಮಾಡಲ್ಲ? ಇಲ್ಲಿದೆ ಕಾರಣ
ಮಹೇಶ್ ಬಾಬು
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Nov 14, 2024 | 7:57 AM

ಮಹೇಶ್ ಬಾಬು ಅವರು ಸದ್ಯ ರಾಜಮೌಳಿ ನಿರ್ದೇಶನದ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮಹೇಶ್ ಬಾಬು ಸಿನಿಮಾ ಎಂದರೆ ಗೆಲುವು ಪಕ್ಕಾ ಅನ್ನೋದು ಅಭಿಮಾನಿಗಳ ಊಹೆ. ಮಹೇಶ್ ಬಾಬು ಅವರು ಈವರೆಗೆ ಯಾವುದೇ ಸಿನಿಮಾನ ರಿಮೇಕ್ ಮಾಡಿಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ಈ ಮೊದಲು ಹೇಳಿದ್ದರು.

ಪ್ರತಿ ಇಂಡಸ್ಟ್ರಿಯಲ್ಲಿ ರಿಮೇಕ್ ಕಾನ್ಸೆಪ್ಟ್ ಇದೆ. ದಕ್ಷಿಣದ ಹಲವು ಸೂಪರ್ ಹಿಟ್ ಚಿತ್ರಗಳನ್ನು ಪರಭಾಷೆಗೆ ರಿಮೇಕ್ ಮಾಡಿದ ಉದಾಹರಣೆ ಸಾಕಷ್ಟು ಇದೆ. ಅದೇ ರೀತಿ ತಮಿಳು ಚಿತ್ರಗಳನ್ನು ತೆಲುಗಿಗೆ, ಕನ್ನಡದ ಚಿತ್ರಗಳನ್ನು ತೆಲುಗು ಹಾಗೂ ತಮಿಳಿಗೆ ರಿಮೇಕ್ ಮಾಡಲಾಗಿದೆ. ಮಹೇಶ್ ಬಾಬು ನಟನೆಯ ‘ಪೋಕಿರಿ’ ಹಿಂದಿಗೆ ‘ವಾಂಟೆಡ್’ ಹೆಸರಲ್ಲಿ ರಿಮೇಕ್ ಆಗಿದೆ. ‘ಒಕ್ಕಡು’ ಸಿನಿಮಾ ‘ತೇವಾರ್’ ಆಗಿ ರಿಮೇಕ್ ಆಗಿದೆ. ಮೊದಲು ಜೋರಾಗಿದ್ದ ರಿಮೇಕ್ ಟ್ರೆಂಡ್ ಈಗ ಸ್ವಲ್ಪ ಕಡಿಮೆ ಆಗುತ್ತಿದೆ. ಆದರೆ, ಮಹೇಶ್ ಬಾಬು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಸಮಂತಾ ಅವರು ಮಹೇಶ್ ಬಾಬು ಅವರಿಗೆ ‘ನೀವು ರಿಮೇಕ್ ಸಿನಿಮಾ ಏಕೆ ಮಾಡಲ್ಲ’ ಎಂದು ಕೇಳಿದ್ದರು. ಇದಕ್ಕೆ ಮಹೇಶ್ ಬಾಬು ಉತ್ತರ ಕೊಟ್ಟಿದ್ದರು. ‘ನಾನು ಎಂದಿಗೂ ರಿಮೇಕ್ ಸಿನಿಮಾ ಮಾಡಲ್ಲ. ಈ ರೀತಿಯ ಸಿನಿಮಾ ಮಾಡಿದಾಗ ಸಾಕಷ್ಟು ಹೋಲಿಕೆ ನಡೆಯುತ್ತದೆ. ಇದು ನನಗೆ ಇಷ್ಟ ಆಗಲ್ಲ’ ಎಂದು ಮಹೇಶ್ ಬಾಬು ಅವರು ಹೇಳಿದ್ದರು. ಹಾಗಂತ ಇದು ಮಹೇಶ್ ಬಾಬು ಅವರು ಈಗ ಹೇಳಿದ ಮಾತಲ್ಲ. 10 ವರ್ಷಗಳ ಹಿಂದೆಯೇ ಇದನ್ನು ಹೇಳಿದ್ದರು. ಮತ್ತು  ಅದನ್ನು ಈಗಲೂ ನಡೆಸಿಕೊಂಡು ಬರುತ್ತಿದ್ದಾರೆ ಅನ್ನೋದು ವಿಶೇಷ.

ಇದನ್ನೂ ಓದಿ: ಕೇವಲ 1 ಸಿನಿಮಾ ಹಿಟ್ ನೀಡಿದ ನಟನಿಂದ ಮಹೇಶ್ ಬಾಬುಗೆ ಅವಮಾನ; ಫ್ಯಾನ್ಸ್ ಗರಂ

ಮಹೇಶ್ ಬಾಬು ‘SSMB 29’ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾಗಾಗಿ ಅವರು ಉದ್ದ ಕೂದಲು ಬಿಟ್ಟಿದ್ದಾರೆ. ಜಿಮ್​ನಲ್ಲಿ ಸಾಕಷ್ಟು ವರ್ಕೌಟ್ ಕೂಡ ಮಾಡಿದ್ದಾರೆ. ಈ ಸಿನಿಮಾ ಯಾವಾಗ ಸೆಟ್ಟೇರುತ್ತದೆ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. 2026ರ ವೇಳೆಗೆ ಈ ಚಿತ್ರ ರಿಲೀಸ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ, ತಂಡ ಈ ಬಗ್ಗೆ ಯಾವುದೇ ಕ್ಲ್ಯಾರಿಟಿ ಕೊಟ್ಟಿಲ್ಲ. ವಿವಿಧ ಇಂಡಸ್ಟ್ರಿಯ ಕಲಾವಿದರು ಸಿನಿಮಾದಲ್ಲಿ ನಟಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.