GT vs RR: ಗೆಲ್ಲುವ ಪಂದ್ಯವನ್ನು ಕೈಚೆಲ್ಲಿದ ಗುಜರಾತ್; ರಾಜಸ್ಥಾನ್ಗೆ 2ನೇ ಜಯ
GT vs RR IPL 2026: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ 9ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಗುಜರಾತ್ ಟೈಟನ್ಸ್ ವಿರುದ್ಧ 6 ರನ್‌ಗಳ ರೋಚಕ ಜಯ ಸಾಧಿಸಿತು. ಗುಜರಾತ್‌ಗೆ ಇದು ಸತತ ಎರಡನೇ ಸೋಲಾದರೆ, ರಾಜಸ್ಥಾನ್ ಸತತ ಎರಡನೇ ಗೆಲುವು ದಾಖಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 210 ರನ್ ಗಳಿಸಿತು, ಗುಜರಾತ್ 204 ರನ್ ಗಳಿಸಿ ಸೋಲಪ್ಪಿಕೊಂಡಿತು.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 (IPL 2026) ರ 9ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ (GT vs RR) ತಂಡಗಳು ಮುಖಾಮುಖಿಯಾಗಿದ್ದವು. ಈ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿದ ಗುಜರಾತ್ ಟೈಟನ್ಸ್ ಲೀಗ್ನಲ್ಲಿ ಸತತ ಎರಡನೇ ಪಂದ್ಯವನ್ನು ಸೋತರೆ, ಇತ್ತ ಸಾಂಘಿಕ ಪ್ರದರ್ಶನ ನೀಡಿದ ರಾಜಸ್ಥಾನ್ ಸತತ ಎರಡನೇ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 210 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಗುಜರಾತ್ 204 ರನ್ ಕಲೆಹಾಕಲಷ್ಟೇ ಶಕ್ತವಾಗಿ 7 ರನ್ಗಳಿಂದ ಸೋಲೊಪ್ಪಿಕೊಂಡಿತು.
210 ರನ್ ಕಲೆಹಾಕಿದ ರಾಜಸ್ಥಾನ್
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ 6 ವಿಕೆಟ್‌ಗಳ ನಷ್ಟಕ್ಕೆ 210 ರನ್ ಗಳಿಸಿತು. ರಾಜಸ್ಥಾನ ಪರ ಧ್ರುವ್ ಜುರೆಲ್ ಮತ್ತು ಯಶಸ್ವಿ ಜೈಸ್ವಾಲ್ ಸ್ಫೋಟಕ ಇನ್ನಿಂಗ್ಸ್ ಆಡಿದರು. ಯಶಸ್ವಿ ಜೈಸ್ವಾಲ್ 36 ಎಸೆತಗಳಲ್ಲಿ 55 ರನ್ ಗಳಿಸಿದರೆ, ಧ್ರುವ್ ಜುರೆಲ್ 41 ಎಸೆತಗಳಲ್ಲಿ 75 ರನ್ ಗಳಿಸಿದರು. ವೈಭವ್ ಸೂರ್ಯವಂಶಿ ಕೂಡ 33 ರನ್‌ಗಳ ಕಾಣಿಕೆ ನೀಡಿದರು. ಉಳಿದಂತೆ ತಂಡದ ಯಾವ ಬ್ಯಾಟ್ಸ್ಮನ್ ಕೂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಇತ್ತ ರಾಜಸ್ಥಾನ್ ಪರ ಕಗಿಸೋ ರಬಾಡ ಅತ್ಯಧಿಕ 2 ವಿಕೆಟ್ ಪಡೆದರು.
GT vs RR IPL 2026 Highlights: ರಾಜಸ್ಥಾನ್ ವಿರುದ್ಧ ಗುಜರಾತ್‌ಗೆ 6 ರನ್ ಸೋಲು
ಗುಜರಾತ್‌ಗೆ ಕೈಕೊಟ್ಟ ಮಧ್ಯಮ ಕ್ರಮಾಂಕ
ಈ ಗುರಿ ಬೆನ್ನಟ್ಟಿದ ಗುಜರಾತ್ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್ಗೆ 78 ರನ್‌ಗಳ ಜೊತೆಯಾಟವೂ ಸಿಕ್ಕಿತು. ಆರಂಭಿಕ ಸಾಯಿ ಸುದರ್ಶನ್ 44 ಎಸೆತಗಳಲ್ಲಿ 73 ರನ್‌ಗಳ ಅಮೋಘ ಇನ್ನಿಂಗ್ಸ್ ಕೂಡ ಆಡಿದರು. ಆದರೆ ಸುದರ್ಶನ್ ವಿಕೆಟ್ ಪತನದ ಬಳಿಕ ರಾಜಸ್ಥಾನ್ ಬ್ಯಾಟಿಂಗ್ ಹಳಿತಪ್ಪಿತು. ಮಧ್ಯಮ ಕ್ರಮಾಂಕದ ಯಾವೊಬ್ಬ ಬ್ಯಾಟ್ಸ್ಮನ್ ಕೂಡ 20 ರನ್‌ಗಳ ಗಡಿ ದಾಟಲಿಲ್ಲ. ಇದರ ಪರಿಣಾಮವಾಗಿ ಗೆಲ್ಲುವ ಹಂತದಲ್ಲಿದ್ದ ಗುಜರಾತ್ ಸೋಲಿನ ಒತ್ತಡಕ್ಕೆ ಸಿಲುಕಿತು. ಇಲ್ಲಿ ಜೊತೆಯಾದ ರಶೀದ್ ಖಾನ್ ಮತ್ತು ಕಗಿಸೋ ರಬಾಡ ಕ್ರಮವಾಗಿ 24 ಮತ್ತು 23 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ಗೆಲುವಿಗಾಗಿ ಹೋರಾಟ ನೀಡಿದರು. ಆದರೆ ಕೊನೆಯ ಓವರ್ನಲ್ಲಿ ಮ್ಯಾಜಿಕ್ ಮಾಡಿದ ತುಷಾರ್ ದೇಶಪಾಂಡೆ, ಗುಜರಾತ್ ತಂಡ ಗುರಿ ಬೆನ್ನಟ್ಟದಂತೆ ತಡೆಯುವಲ್ಲಿ ಯಶಸ್ವಿಯಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:26 pm, Sat, 4 April 26




