‘ಸಿನಿಮಾ ಚೆನ್ನಾಗಿಲ್ಲ, ಸೂರ್ಯ ಅದ್ಭುತ’; ‘ಕಂಗುವ’ ನೋಡಿ ಜನ ಹೇಳಿದ್ದೇನು?

ಕೆಲವರು ಸೂರ್ಯ ಅವರ ನಟನೆಯನ್ನು ಹೊಗಳಿದ್ದಾರೆ. ‘ಸೂರ್ಯ ಅವರು ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ‘ಮೊದಲಾರ್ಧ ಓಕೆ, ದ್ವಿತೀಯಾರ್ಧ ಚೆನ್ನಾಗಿದೆ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಸಿನಿಮಾನ ಸಂಪೂರ್ಣವಾಗಿ ತೆಗಳಿದ್ದಾರೆ.

‘ಸಿನಿಮಾ ಚೆನ್ನಾಗಿಲ್ಲ, ಸೂರ್ಯ ಅದ್ಭುತ’; ‘ಕಂಗುವ’ ನೋಡಿ ಜನ ಹೇಳಿದ್ದೇನು?
ಕಂಗುವಾ
Follow us
ರಾಜೇಶ್ ದುಗ್ಗುಮನೆ
|

Updated on: Nov 14, 2024 | 10:47 AM

ಸೂರ್ಯ ನಟನೆಯ ‘ಕಂಗುವ’ ಸಿನಿಮಾ ಇಂದು (ನವೆಂಬರ್ 14) ರಿಲೀಸ್ ಆಗಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರಕ್ಕೆ ಮುಂಜಾನೆಯಿಂದಲೇ ಶೋ ಆಯೋಜನೆ ಮಾಡಲಾಗಿತ್ತು. ಸಿನಿಮಾ ನೋಡಿದ ಅನೇಕರು ತಮ್ಮ ಅಭಿಪ್ರಾಯ ಹೊರಹಾಕುತ್ತಿದ್ದಾರೆ. ಕೆಲವರು ಚಿತ್ರವನ್ನು ಮೆಚ್ಚಿಕೊಂಡರೆ, ಇನ್ನೂ ಕೆಲವರು ತೆಗಳಿದ್ದಾರೆ. ಟ್ವಿಟರ್​ನಲ್ಲಿ ಅನೇಕರು ಅನುಭವ ಹಂಚಿಕೊಂಡಿದ್ದಾರೆ.

ಕೆಲವರು ಸೂರ್ಯ ಅವರ ನಟನೆಯನ್ನು ಹೊಗಳಿದ್ದಾರೆ. ‘ಸೂರ್ಯ ಅವರು ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ‘ಮೊದಲಾರ್ಧ ಓಕೆ, ದ್ವಿತೀಯಾರ್ಧ ಚೆನ್ನಾಗಿದೆ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಸಿನಿಮಾನ ಸಂಪೂರ್ಣವಾಗಿ ತೆಗಳಿದ್ದಾರೆ. ಕೆಲವರು ‘ಸೂಪರ್’ ಎಂದು ಹೇಳುತ್ತಾ ಕುಹಕವಾಗಿ ನಕ್ಕಿದ್ದಾರೆ.

ದಿಶಾ ಪಟಾಣಿ ಅವರು ‘ಕಂಗುವ’ ಚಿತ್ರಕ್ಕೆ ನಾಯಕಿ. ಆದರೆ, ಅವರ ಪಾತ್ರ ಕೆಲವೇ ನಿಮಿಷಕ್ಕೆ ಮಾತ್ರ ಸೀಮಿತವಾಗಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ‘ದಕ್ಷಿಣ ಭಾರತಕ್ಕೆ ಬಾಲಿವುಡ್ ನಟಿಯರನ್ನು ಕರೆಸಿ ಈ ರೀತಿ ಮಾಡಬಾರದು ಎಂದು ಕೆಲವರು ಅಭಿಪ್ರಾಯ ಹೊರಹಾಕಿದ್ದೂ ಇದೆ.

ಇದನ್ನೂ ಓದಿ: ಈ ವಾರ ಬಾಕ್ಸ್ ಆಫೀಸ್​ನಲ್ಲಿ ಶಿವಣ್ಣ Vs ಸೂರ್ಯ; ಬಾಕ್ಸ್ ಆಫೀಸ್​ನಲ್ಲಿ ಗೆಲುವು ಯಾರಿಗೆ?

ಶಿವ ಅವರು ಖ್ಯಾತ ನಿರ್ದೇಶಕರು. ‘ವಿಶ್ವಾಸಂ’ ರೀತಿಯ ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ‘ಕಂಗುವ’ ಚಿತ್ರ ಹಿಟ್ ಸಾಲಿಗೆ ಸೇರುತ್ತದೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.