AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ಬಾಕ್ಸ್ ಆಫೀಸ್​ನಲ್ಲಿ ಶಿವಣ್ಣ Vs ಸೂರ್ಯ; ಬಾಕ್ಸ್ ಆಫೀಸ್​ನಲ್ಲಿ ಗೆಲುವು ಯಾರಿಗೆ?

ಈ ವಾರ ಕನ್ನಡ ಮತ್ತು ತಮಿಳು ಚಿತ್ರಗಳು ತೆರೆಕಾಣುತ್ತಿವೆ. ಶಿವರಾಜ್ ಕುಮಾರ್ ಅಭಿನಯದ ‘ಭೈರತಿ ರಣಗಲ್’ ಮತ್ತು ಸೂರ್ಯ ಅಭಿನಯದ ‘ಕಂಗುವಾ’ ಚಿತ್ರಗಳು ಪ್ರಮುಖವಾಗಿವೆ. ‘ಭೈರತಿ ರಣಗಲ್’ ‘ಮಫ್ತಿ’ ಚಿತ್ರದ ಪ್ರೀಕ್ವೆಲ್ ಆಗಿದ್ದು, ‘ಕಂಗುವಾ’ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಸೂರ್ಯ ನಟಿಸಿದ್ದಾರೆ.

ಈ ವಾರ ಬಾಕ್ಸ್ ಆಫೀಸ್​ನಲ್ಲಿ ಶಿವಣ್ಣ Vs ಸೂರ್ಯ; ಬಾಕ್ಸ್ ಆಫೀಸ್​ನಲ್ಲಿ ಗೆಲುವು ಯಾರಿಗೆ?
ಕಂಗುವ-ಭೈರತಿ ರಣಗಲ್
ರಾಜೇಶ್ ದುಗ್ಗುಮನೆ
|

Updated on:Nov 13, 2024 | 12:46 PM

Share

ದಸರಾ ಹಾಗೂ ದೀಪಾವಳಿಗೆ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗಿದ್ದವು. ಸಿನಿಪ್ರಿಯರು ಸಂಭ್ರಮಿಸಿದ್ದರು. ಈ ವಾರವೂ ಸಿನಿಮಾ ಲವರ್ಸ್​ಗೆ ಹಬ್ಬದ ವಾತಾವರಣ ನಿರ್ಮಾಣ ಆಗಿದೆ. ಶಿವರಾಜ್​ಕುಮಾರ್ ನಟನೆಯ ‘ಭೈರತಿ ರಣಗಲ್’ ಚಿತ್ರ ನವೆಂಬರ್ 15ರಂದು ತೆರೆಗೆ ಬರಲಿದ್ದು, ತಮಿಳಿನಲ್ಲಿ ಸೂರ್ಯ ಅಭಿನಯದ ‘ಕಂಗುವ’ ನವೆಂಬರ್ 14ರಂದು ರಿಲೀಸ್ ಆಗುತ್ತಿದೆ. ಈ ವಾರ ರಿಲೀಸ್ ಆಗುತ್ತಿರುವ ಸಿನಿಮಾಗಳ ಬಗ್ಗೆ ಇಲ್ಲಿದೆ ವಿವರ.

‘ಭೈರತಿ ರಣಗಲ್’

ಶಿವರಾಜ್​ಕುಮಾರ್ ಅವರು ಮಾಸ್ ಅವತಾರಗಳ ಮೂಲಕ ಫೇಮಸ್ ಆಗಿದ್ದಾರೆ. ಅವರ ನಟನೆಯ ‘ಭೈರತಿ ರಣಗಲ್’ ಚಿತ್ರ ನವೆಂಬರ್ 14ರಂದು ತೆರೆಗೆ ಬರುತ್ತಿದೆ. ಈ ಸಿನಿಮಾ ‘ಮಫ್ತಿ’ ಚಿತ್ರದ ಪ್ರೀಕ್ವೆಲ್. ಈ ಕಾರಣದಿಂದಲೂ ಪ್ರೇಕ್ಷಕರಲ್ಲಿ ನಿರೀಕ್ಷೆ ಮೂಡಿದೆ. ಶಿವಣ್ಣ ಅವರು ಭೈರತಿ ರಣಗಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ನರ್ತನ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ರುಕ್ಮಿಣಿ ವಸಂತ್, ರಾಹುಲ್ ಬೋಸ್ ಮೊದಲಾದವರು ನಟಿಸಿದ್ದಾರೆ. ‘ಗೀತಾ ಆರ್ಟ್ಸ್’ ಮೂಲಕ ಈ ಚಿತ್ರ ಸಿದ್ಧವಾಗಿದೆ. ಈ ಬ್ಯಾನರ್ ಅಡಿಯಲ್ಲಿ ಸಿದ್ಧವಾದ ಎರಡನೇ ಸಿನಿಮಾ ಇದು.

‘ಕಂಗುವ’

ಕಂಗುವ ಸಿನಿಮಾದಲ್ಲಿ ಸೂರ್ಯ ಅವರು ನಟಿಸಿದ್ದು, ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಬಿ ಡಿಯೋಲ್ ವಿಲನ್ ಪಾತ್ರ ಮಾಡಿದ್ದು, ದಿಶಾ ಪಟಾಣಿ ಚಿತ್ರದ ನಾಯಕಿ. ಶಿವ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಚಿತ್ರಕ್ಕೆ ಇದೆ. ಈ ಸಿನಿಮಾ ಕೇಲವ 2ಡಿ ಮಾತ್ರವಲ್ಲದೆ, 3ಡಿಯಲ್ಲೂ ಲಭ್ಯವಿದೆ. ತಮಿಳಿನ ಜೊತೆಗೆ ಕನ್ನಡ, ತೆಲುಗು, ಹಿಂದಿ ಭಾಷೆಗಳಲ್ಲೂ ಸಿನಿಮಾ ರಿಲೀಸ್ ಆಗುತ್ತಿದೆ.

ಉಳಿದ ಸಿನಿಮಾಗಳು

ಕನ್ನಡದಲ್ಲಿ ಗಣೇಶ್ ರಾವ್ ನಟನೆಯ ‘ತಾರಕೇಶ್ವರ’, ತೆಲುಗಿನಲ್ಲಿ ವರುಣ್ ತೇಜ್ ನಟನೆಯ ‘ಮಟ್ಕಾ’ ಸಿನಿಮಾ ರಿಲೀಸ್ ಆಗುತ್ತಿದೆ. ದೀಪಾವಳಿಗೆ ಬಿಡುಗಡೆ ಕಂಡ ‘ಬಘೀರ’, ‘ಲಕ್ಕಿ ಭಾಸ್ಕರ್’ ಹಾಗೂ ‘ಅಮರನ್’ ಚಿತ್ರಗಳು ಉತ್ತಮ ಪ್ರದರ್ಶನ ಕಾಣುತ್ತಿದ್ದು, ಈಗಿನ ಸಿನಿಮಾಗಳ ಜೊತೆ ಸ್ಪರ್ಧೆಗೆ ಇಳಿಯಬೇಕಿದೆ.

ಇದನ್ನೂ ಓದಿ: ‘ಭೈರತಿ ರಣಗಲ್’ ಚಿತ್ರದಲ್ಲಿ ಶ್ರೀಮುರಳಿ ಸರ್​ಪ್ರೈಸ್ ಎಂಟ್ರಿ? ಉತ್ತರಿಸಿದ ಶಿವರಾಜ್​ಕುಮಾರ್

ಯಾವ ಸಿನಿಮಾಗೆ ಗೆಲುವು?

ಶಿವರಾಜ್​ಕುಮಾರ್ ಹಾಗೂ ಸೂರ್ಯ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಈ ಪೈಕಿ ಯಾವ ಸಿನಿಮಾ ಗೆಲುವು ಕಾಣಲಿದೆ ಎಂಬ ಪ್ರಶ್ನೆ ಮೂಡಿದೆ. ಕರ್ನಾಟಕದಲ್ಲಿ ‘ಭೈರತಿ ರಣಗಲ್’ ಗೆಲುವು ಪಕ್ಕಾ. ಉತ್ತಮ ವಿಮರ್ಶೆ ಪಡೆದರಷ್ಟೇ, ‘ಕಂಗುವ’ ತಮಿಳುನಾಡಿನಲ್ಲಿ ಗೆಲುವು ಕಾಣಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:04 pm, Wed, 13 November 24