ಖ್ಯಾತ ಗೀತ ಸಾಹಿತಿ, ಪತ್ರಕರ್ತ ಶ್ಯಾಮಸುಂದರ ಕುಲಕರ್ಣಿ ಇನ್ನಿಲ್ಲ

‘ಒಲವಿನ ಉಡುಗೊರೆ ಕೊಡಲೇನು’, ‘ಕನ್ನಡ ಹೊನ್ನುಡಿ ದೇವಿಯನು ಪೂಜಿಸುವೆ’, ‘ಯಾವ ಹೂವು ಯಾರ ಮುಡಿಗೋ’, ‘ಸೇವಂತಿಯೇ-ಸೇವಂತಿಯೇ’ ಇನ್ನೂ ಹಲವಾರು ಕನ್ನಡ ಹಾಡುಗಳನ್ನು ಬರೆದಿರುವ ಶ್ಯಾಮಸುಂದರ ಕುಲಕರ್ಣಿ ನಿಧನ ಹೊಂದಿದ್ದಾರೆ.

ಖ್ಯಾತ ಗೀತ ಸಾಹಿತಿ, ಪತ್ರಕರ್ತ ಶ್ಯಾಮಸುಂದರ ಕುಲಕರ್ಣಿ ಇನ್ನಿಲ್ಲ
Follow us
ಮಂಜುನಾಥ ಸಿ.
|

Updated on: Nov 13, 2024 | 6:15 PM

‘ಒಲವಿನ ಉಡುಗೊರೆ ಕೊಡಲೇನು’, ‘ಕನ್ನಡ ಹೊನ್ನುಡಿ ದೇವಿಯನು ಪೂಜಿಒಸುವೆ’ ಇನ್ನೂ ಹಲವು ಅತ್ಯುತ್ತಮ ಹಾಡುಗಳನ್ನು ಕನ್ನಡ ಸಿನಿಮಾಗಳಿಗೆ ಬರೆದಿರುವ ಖ್ಯಾತ ಚಿತ್ರ ಸಾಹಿತಿ ಶ್ಯಾಮಸುಂದರ ಕುಲಕರ್ಣಿ ಅವರು ಅಕ್ಟೋಬರ್ 31 ರಂದು ನಿಧನ ಹೊಂದಿದ್ದಾರೆ. ಆದರೆ ಸುದ್ದಿ ತಡವಾಗಿ ಬಹಿರಂಗಗೊಂಡಿದೆ. ತಮ್ಮ ಸಾವು ಸುದ್ದಿ ಆಗಬಾರದೆಂದು ಅವರು ಬಯಸಿದ್ದರು ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ನಿಧನದ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಹತ್ತು ವರ್ಷಗಳಿಂದಲೂ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗುತ್ತಿದೆ.

‘ಒಲವಿನ ಉಡುಗೊರೆ’ ಸಿನಿಮಾದ ‘ಒಲವಿನ ಉಡುಗೊರೆ ಕೊಡಲೇನು’, ‘ಪರಾಜಿತ’ ಸಿನಿಮಾದ ‘ಸುತ್ತಮುತ್ತಲು ಸಂಜೆಗತ್ತಲು ಸಂಜೆ ಗತ್ತಲು’, ‘ಅಜೇಯ’ ಸಿನಿಮಾದ ‘ಹೀರೋ ಹೀರೋ ಹೀರೋ ನಾನೇ ನಾನೇ ನಾನೇ’, ‘ಸೂರ್ಯವಂಶ’ ಸಿನಿಮಾದ ‘ಸೇವಂತಿಯೆ ಸೇವಂತಿಯೆ’, ‘ಭರತ್’ ಸಿನಿಮಾದ ‘ನೀಲಿ ಬಾನಲಿ’ ‘ಒಂದು ಸಿನಿಮಾ ಕತೆ’ ಸಿನಿಮಾದ ‘ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ’, ‘ಬೆಸುಗೆ’ ಸಿನಿಮಾದ ‘ಯಾವ ಹೂವು ಯಾರ ಮುಡಿಗೊ…ಯಾರ ಒಲವು ಯಾರ ಕಡೆಗೊ’ ಸೇರಿದಂತೆ ಅನೇಕ ಜನಪ್ರಿಯ ಗೀತೆಗಳನ್ನು ಶ್ಯಾಮಸುಂದರ ಕುಲಕರ್ಣಿ ಅವರು ರಚಿಸಿದ್ದಾರೆ.

ಗಾಯಕಿ ವಾಣಿಜಯರಾಂ ಅವರ ಕನ್ನಡದ ಮೊದಲ ಹಾಡು ‘ಮೂಡಣದಾ ರವಿ…’ ಹಾಡು ಕೆ ಶ್ಯಾಮಸುಂದರ ಕುಲಕರ್ಣಿಯವರು ಬರೆದ ಮೊದಲ ಹಾಡಾಗಿತ್ತು. ಹಾಡುಗಳು ಮಾತ್ರವೇ ಅಲ್ಲದೆ ಕನ್ನಡದ ಕೆಲವು ಜನಪ್ರಿಯ ಸಿನಿಮಾಗಳಿಗೆ ಸಂಭಾಷಣೆ, ಕೆಲವಕ್ಕೆ ಚಿತ್ರಕತೆಗಳನ್ನು ಸಹ ಬರೆದಿದ್ದಾರೆ.

ಇದನ್ನೂ ಓದಿ:ಕನ್ನಡ ಹಾಡು ಹಾಡಿ ಪ್ರಧಾನಿ ಮೋದಿಯ ಮೆಚ್ಚುಗೆಗೆ ಪಾತ್ರರಾದ ಶಿವಶ್ರೀ ಯಾರು?

ಖ್ಯಾತ ಪತ್ರಕರ್ತರೂ ಆಗಿದ್ದ ಶ್ಯಾಮಸುಂದರ ಕುಲಕರ್ಣಿ ಅವರು ಕನ್ನಡ ಚಿತ್ರರಂಗದೊಂದಿಗೆ ಆಪ್ತ ಬಂಧ ಹೊಂದಿದ್ದರು. ಸಂಯುಕ್ತ ಕರ್ನಾಟಕದಲ್ಲಿ ಹಲವು ವರ್ಷ ಕೆಲಸ ಮಾಡಿದ್ದ ಶ್ಯಾಮಸುಂದರ ಕುಲಕರ್ಣಿ ಅವರು, ನಟಿ ಕಲ್ಪನಾ ಅವರಿಂದ ಅಂಕಣಗಳನ್ನು ಬರೆಸಿದ್ದರು. ಕನ್ನಡದ ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ನೇರವಾಗಿ, ಪರೋಕ್ಷವಾಗಿ ಅವರು ಸಹಾಯ ಮಾಡಿದ್ದರು. ಡಾ ರಾಜ್​ಕುಮಾರ್, ವಿಷ್ಣುವರ್ಧನ್ ಸೇರಿದಂತೆ ಹಲವು ದಿಗ್ಗಜರೊಟ್ಟಿಗೆ ಆಪ್ತ ಸ್ನೇಹ ಹೊಂದಿದ್ದರು. ಹಲವರ ಸಂದರ್ಶನಗಳನ್ನು ಅವರು ಪ್ರಕಟಿಸಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.