‘ಮರ್ಯಾದೆ ಪ್ರಶ್ನೆ’ ಟ್ರೇಲರ್ ಬಿಡುಗಡೆ ಮಾಡಿದ ಸುದೀಪ್; ಎಲ್ಲರಿಗೂ ಇಷ್ಟ ಆಯ್ತು
‘ಸಕ್ಕತ್ ಸ್ಟೂಡಿಯೋ’ ಮೂಲಕ ‘ಮರ್ಯಾದೆ ಪ್ರಶ್ನೆ’ ಸಿನಿಮಾ ನಿರ್ಮಾಣ ಆಗಿದೆ. ಕಿಚ್ಚ ಸುದೀಪ್ ಅವರು ಟ್ರೇಲರ್ ರಿಲೀಸ್ ಮಾಡಿ ಶುಭ ಹಾರೈಸಿದ್ದಾರೆ. ನಾಗರಾಜ ಸೋಮಯಾಜಿ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ನ.22ಕ್ಕೆ ಈ ಚಿತ್ರ ರಿಲೀಸ್ ಆಗಲಿದೆ. ಸುನಿಲ್ ರಾವ್, ಪೂರ್ಣಚಂದ್ರ ಮೈಸೂರು, ತೇಜು ಬೆಳವಾಡಿ, ಪ್ರಭು ಮುಂಡ್ಕುರ್, ಶೈನ್ ಶೆಟ್ಟಿ, ರಾಕೇಶ್ ಅಡಿಗ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ.
ಕಿಚ್ಚ ಸುದೀಪ್ ಅವರು ‘ಮರ್ಯಾದೆ ಪ್ರಶ್ನೆ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ರಿಯಲಿಸ್ಟಿಕ್ ರಿವೆಂಜ್ ಡ್ರಾಮಾ ಇದೆ ಎಂಬುದನ್ನು ಟ್ರೇಲರ್ ಮೂಲಕ ತೋರಿಸಲಾಗಿದೆ. ‘ನನಗೆ ಈ ಟ್ರೇಲರ್ ಬಹಳ ಇಷ್ಟವಾಯ್ತು. ಅನೇಕ ವಿಚಾರಗಳನ್ನು ತಿಳಿಸಿಯೂ ಕೂಡ ಕುತೂಹಲ ಕಾಪಾಡಿಕೊಳ್ಳುವ ರೀತಿಯಲ್ಲಿ ಟ್ರೇಲರ್ ಕಟ್ ಮಾಡಿರುವುದು ಹಿಡಿಸಿತು. ಈ ಚಿತ್ರದಲ್ಲಿ ವಿಭಿನ್ನತೆ ಕಾಣಿಸಿದೆ. ಎಲ್ಲಾ ವಿಭಾಗಗಳ ಕೆಲಸ ಚೆನ್ನಾಗಿದೆ’ ಎಂದು ಕಿಚ್ಚ ಸುದೀಪ್ ಅವರು ಹೊಗಳಿದಿದ್ದಾರೆ. ಸುದೀಪ್ ಮಾತ್ರವಲ್ಲದೇ ಕನ್ನಡ ಚಿತ್ರರಂಗದ ಅನೇಕ ಯುವ ನಿರ್ದೇಶನರು ಈ ಟ್ರೇಲರ್ ಮೆಚ್ಚಿಕೊಂಡಿದ್ದಾರೆ.
‘ಮರ್ಯಾದೆ ಪ್ರಶ್ನೆ’ ಸಿನಿಮಾ ನವೆಂಬರ್ 22ರಂದು ಬಿಡುಗಡೆ ಆಗಲಿದೆ. 300ಕ್ಕೂ ಅಧಿಕ ಆರ್‌ಜೆಗಳು, ನಟ-ನಟಿಯರು, ಡಾಕ್ಟರ್‌ಗಳು, ಗಾಯಕರು, ಲಾಯರ್ಗಳು ಹಾಗೂ ಉದ್ಯಮಿಗಳು ಈ ಚಿತ್ರದ ಟ್ರೇಲರ್ ನೋಡಿ ಹೊಗಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ‘ಮರ್ಯಾದೆ ಪ್ರಶ್ನೆ’ ಬಗ್ಗೆ ಟಾಕ್ ಸೃಷ್ಟಿ ಆಗಿದೆ. ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯ ಸಿನಿಮಾಗಳ ಮೂಲಕ ಹಸರು ಮಾಡಿದ ಅನೇಕ ಯುವ ನಿರ್ದೇಶಕರು ಮೆಚ್ಚುಗೆ ಸೂಚಿಸಿದ್ದಾರೆ.
ಈ ಸಿನಿಮಾಗೆ ನಾಗರಾಜ ಸೋಮಯಾಜಿ ನಿರ್ದೇಶನ ಮಾಡಿದ್ದಾರೆ. ‘ನಮ್ಮ ಸುತ್ತಮುತ್ತಲಿನ ಕಥೆಗಳನ್ನ ಪ್ರೇಕ್ಷಕರು ಬಹಳ ಇಷ್ಟಪಡುತ್ತಾರೆ. ಅದನ್ನ ಸಿನಿಮಾ ಮಾಡುವಾಗ ಹೆಚ್ಚು ನೈಜವಾಗಿ ಮೂಡಿಬಂದರೆ ನೋಡುವವರಿಗೆ ಕೂಡ ಹತ್ತಿರ ಆಗುತ್ತದೆ. ನಮ್ಮ ಕನ್ನಡದ ಪ್ರೇಕ್ಷಕರು ಈವರೆಗೆ ತನಕ ಸಿನಿಮಾಗಳ ಕೈ ಬಿಟ್ಟಿಲ್ಲ’ ಎಂದು ನಿರ್ದೇಶಕರು ಹೇಳಿದ್ದಾರೆ. ಸಕ್ಕತ್ ಸ್ಟುಡಿಯೋದ ಆರ್‌ಜೆ ಪ್ರದೀಪ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ‘ಹೊಸತನದ ಹಾಗೂ ನೆಲಮೂಲದ ರಿಯಲಿಸ್ಟಿಕ್ ಕಥೆಗಳನ್ನು ಜಾಗತಿಕ ಪ್ರೇಕ್ಷಕರಿಗೆ ಪ್ರಸ್ತುತಪಡಿಸುವ ಕನಸನ್ನು ‘ಸಕ್ಕತ್ ಸ್ಟುಡಿಯೋ’ ಹೊಂದಿದೆ. ನಮ್ಮ ಮೊದಲ ಹೆಜ್ಜೆಯಾದ ‘ಮರ್ಯಾದೆ ಪ್ರಶ್ನೆ’ ಸಿದ್ಧವಾಗಿದೆ. ಪ್ರತಿ ವರ್ಷ ಕನಿಷ್ಠ 2 ಈ ರೀತಿಯ ಸಿನಿಮಾ ಮಾಡುವ ಆಶಯ ನಮ್ಮದು’ ಎಂದು ಪ್ರದೇಪ ಹೇಳಿದರು.
‘ಮಾರ್ಯಾದೆ ಪ್ರಶ್ನೆ’ ಟ್ರೇಲರ್:
‘ಸಕ್ಕತ್ ಸ್ಟುಡಿಯೋ’ ಯೂಟ್ಯೂಬ್ ಚಾನೆಲ್ ಮೂಲಕ ‘ಮಾರ್ಯಾದೆ ಪ್ರಶ್ನೆ’ ಟ್ರೇಲರ್ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಸುನಿಲ್ ರಾವ್, ತೇಜು ಬೆಳವಾಡಿ, ಪೂರ್ಣಚಂದ್ರ ಮೈಸೂರು, ಶೈನ್ ಶೆಟ್ಟಿ, ರಾಕೇಶ್ ಅಡಿಗ, ಪ್ರಭು ಮುಂಡ್ಕುರ್, ನಾಗಾಭರಣ, ನಂದಗೋಪಾಲ್, ರೇಖಾ ಕೂಡ್ಲಿಗಿ, ನಾಗೇಂದ್ರ ಷಾ, ಹರಿಹರನ್, ಶ್ರವಣ್ ಮುಂತಾದವರು ನಟಿಸಿದ್ದಾರೆ. ಅರ್ಜುನ್ ರಾಮು ಸಂಗೀತ ನೀಡಿದ್ದಾರೆ. ಪ್ರಮೋದ್ ಮರವಂತೆ ಹಾಗೂ ತ್ರಿಲೋಕ್ ತ್ರಿವಿಕ್ರಮ ಸಾಹಿತ್ಯ ಬರೆದಿದ್ದಾರೆ. ಸಂದೀಪ್ ವೆಲ್ಲುರಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಇದನ್ನೂ ಓದಿ: ಅತ್ಯುತ್ತಮ ಕಮ್ಬ್ಯಾಕ್, ಮೂರು ಸಿನಿಮಾಗಳಲ್ಲಿ ರಾಕೇಶ್ ಅಡಿಗ
ಶಶಾಂಕ್ ಸೋಘಲ್, ನಿತಿನ್ ಕೃಷ್ಣಮೂರ್ತಿ, ಸಿಂಧು ಶ್ರೀನಿವಾಸ್ ಮೂರ್ತಿ, ಉಮೇಶ್ ಕೆ. ಕೃಪಾ, ಶ್ರೀನಿಧಿ ಬೆಂಗಳೂರು, ರಾಮೇನಹಳ್ಳಿ ಜಗನ್ನಾಥ, ಚಂದ್ರಜಿತ್ ಬೆಳ್ಳಿಯಪ್ಪ, ಸಂದೀಪ್ ಸುಂಕದ, ಎಂ, ಭರತ್ ರಾಜ್, ರಾಜ್ ಗುರು ಭೀಮಪ್ಪ, ಬಿ.ಎಸ್.ಪಿ. ವರ್ಮಾ, ಜೈಶಂಕರ್ ಆರ್ಯರ್, ಉತ್ಸವ್ ಗೊನ್ವರ್, ಸುನೀಲ್ ಮೈಸೂರು, ವಿಕ್ಕಿ ವರುಣ್, ಆಕರ್ಶ್ ಹೆಚ್.ಪಿ, ಪ್ರತೀಕ್ ಪ್ರಜೋಶ್, ಸಾಗರ್ ಪುರಾಣಿಕ್ ಮುಂತಾದವರು ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ‘ಮರ್ಯಾದೆ ಪ್ರಶ್ನೆ’ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.