ಆಯುಧ ಬಿಟ್ಟ ಶಿವಣ್ಣ ಈಗ ಬೋಧಕ: ಹೊಸ ಸಿನಿಮಾ ಘೋಷಣೆ

Shiva Rajkumar: ಶಿವಣ್ಣ ಸಾಮಾನ್ಯವಾಗಿ ಆಕ್ಷನ್, ಮಾಸ್ ಸಿನಿಮಾಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಈಗ ಶಿವಣ್ಣ ಆಯುಧ ಕೈಬಿಟ್ಟು ಬೋಧಕ ಆಗಿದ್ದಾರೆ. ಮುಂದಿನ ಸಿನಿಮಾದಲ್ಲಿ ಶಿಕ್ಷಕನಾಗಿ ನಟಿಸುತ್ತಿದ್ದಾರೆ.

ಆಯುಧ ಬಿಟ್ಟ ಶಿವಣ್ಣ ಈಗ ಬೋಧಕ: ಹೊಸ ಸಿನಿಮಾ ಘೋಷಣೆ
Follow us
ಮಂಜುನಾಥ ಸಿ.
|

Updated on: Nov 14, 2024 | 1:02 PM

ಶಿವರಾಜ್ ಕುಮಾರ್ ಎಂದರೆ ಮಚ್ಚು ಹಿಡಿದು ಸ್ಟೈಲ್ ಆಗಿ ನಡೆದು ಬರುವ ದೃಶ್ಯವೇ ಕಣ್ಮುಂದೆ ಬರುತ್ತದೆ. ಆಕ್ಷನ್ ಸಿನಿಮಾಗಳಿಗೂ ಶಿವಣ್ಣನಿಗೆ ಬಲು ಆತ್ಮೀಯ ಹೊಂದಾಣಿಕೆ. ಆದರೆ ಶಿವಣ್ಣನ ನಟನಾ ಪಯಣ ಗಮನಿಸಿದರೆ ಅವರು ಎಲ್ಲ ರೀತಿಯ ಪಾತ್ರಗಳನ್ನೂ ಮಾಡಿದ್ದಾರೆ. ಆದರೆ ಇತ್ತೀಚೆಗೆ ನಿರ್ದೇಶಕರು, ಶಿವಣ್ಣನನ್ನು ಆಕ್ಷನ್ ಹೀರೋ ಆಗಿಯೇ ಹೆಚ್ಚು ತೋರಿಸುತ್ತಿದ್ದಾರೆ. ಆದರೆ ಈಗ ಬಹು ಸಮಯದ ಬಳಿಕ ಶಿವಣ್ಣ ಲಾಂಗು-ಮಚ್ಚು ಆಕ್ಷನ್ ಬಿಟ್ಟು ಭಾವುಕ ಕತೆಯೊಂದನ್ನು ಒಪ್ಪಿಕೊಂಡಿದ್ದಾರೆ. ಸಿನಿಮಾದ ಹೆಸರು, ಪೋಸ್ಟರ್ ಇಂದು ಲಾಂಚ್ ಆಗಿದೆ.

ಈ ಹಿಂದೆ ಶಿವರಾಜ್ ಕುಮಾರ್ ಅವರಿಗಾಗಿ ‘ಘೋಸ್ಟ್’ ಹೆಸರಿನ ಭರ್ಜರಿ ಆಕ್ಷನ್ ಥ್ರಿಲ್ಲರ್ ಸಿನಿಮಾ ನಿರ್ದೇಶನ ಮಾಡಿದ್ದ ಶ್ರೀನಿ, ಈಗ ಶಿವಣ್ಣನ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ‘ಎ ಫಾರ್ ಆನಂದ್’ ಹೆಸರು ಇಡಲಾಗಿದ್ದು, ಸಿನಿಮಾದಲ್ಲಿ ಶಿವರಾಜ್ ಕುಮಾರ್ ಒಬ್ಬ ಶಿಕ್ಷಕನ ಪಾತ್ರ ನಿರ್ವಹಿಸಲಿದ್ದಾರೆ. ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದ್ದು, ವಿಂಟೇಜ್ ಶಿವಣ್ಣನ ನೆನಪಾಗುವಂತಿದೆ ಪೋಸ್ಟರ್.

ಈ ಹಿಂದೆ ‘ಸುಂದರ ಕಾಂಡ’ ಸಿನಿಮಾನಲ್ಲಿ ಶಿವಣ್ಣ ಶಿಕ್ಷಕರಾಗಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಶಿವಣ್ಣ ಶಿಕ್ಷಕನಾಗಿ ನಟಿಸಿದ್ದಿಲ್ಲ. ‘ಆರ್ಯನ್’ ಸಿನಿಮಾದಲ್ಲಿ ಶಿವಣ್ಣ ಕೋಚ್ ಆಗಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ಶಿವಣ್ಣ ಶಿಕ್ಷಕನಾಗಿ ನಟಿಸಲಿದ್ದಾರೆ. ವಿಶೇಷವೆಂದರೆ ಇದು ಒಂದು ಮಕ್ಕಳ ಸಿನಿಮಾ, ಅದರಲ್ಲಿ ಶಿವಣ್ಣ ಶಿಕ್ಷಕನಾಗಿದ್ದಾರೆ. ನಿರ್ದೇಶಕ ಶ್ರೀನಿ ಹೇಳಿರುವಂತೆ ಇದು ನೈಜ ಘಟನೆ ಆಧರಿಸಿದ ಸಿನಿಮಾ ಅಂತೆ.

ಇದನ್ನೂ ಓದಿ:ಶಕ್ತಿಧಾಮದ ಮಕ್ಕಳಿಗಾಗಿ ಶಿಕ್ಷಕಿಯಾದ ಗೀತಾ ಶಿವರಾಜ್ ಕುಮಾರ್

‘ಎ ಫಾರ್ ಆನಂದ್’ ಸಿನಿಮಾವನ್ನು ಶಿವಣ್ಣನವರ ಹೋಮ್ ಬ್ಯಾನರ್ ಆಗಿರುವ ಗೀತಾ ಪಿಕ್ಚರ್ಸ್ ವತಿಯಿಂದಲೇ ನಿರ್ಮಾಣ ಮಾಡಲಾಗುತ್ತಿದೆ. ‘ವೇದ’, ನಾಳೆ ಬಿಡುಗಡೆ ಆಗಲಿರುವ ‘ಭೈರತಿ ರಣಗಲ್’ ಅನ್ನು ಇದೇ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣ ಮಾಡಲಾಗಿತ್ತು, ಗೀತಾ ಪಿಕ್ಚರ್ಸ್​ಗೆ ಇದು ಮೂರನೇ ಸಿನಿಮಾ. ಅಂತೆಯೇ ನಿರ್ದೇಶಕ ಶ್ರೀನಿಗೆ ಶಿವಣ್ಣನ ಜೊತೆ ಇದು ಎರಡನೇ ಸಿನಿಮಾ. ಅಸಲಿಗೆ ಶ್ರೀನಿ, ‘ಘೋಸ್ಟ್ 2’ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಹರಡಿತ್ತು, ಶಿವಣ್ಣ ಹಾಗೂ ಶ್ರೀನಿ ಇಬ್ಬರೂ ಸಹ ‘ಘೋಸ್ಟ್ 2’ ಮಾಡುವುದನ್ನು ಖಾತ್ರಿ ಪಡಿಸಿದ್ದರು. ಆದರೆ ಶ್ರೀನಿ ಹೊಸ ಕತೆಯೊಂದಿಗೆ ಬಂದಿದ್ದಾರೆ.

ಶಿವರಾಜ್ ಕುಮಾರ್ ಹಾಗೂ ಶ್ರೀನಿ ಕಾಂಬಿನೇಷನ್​ನ ‘ಘೋಸ್ಟ್’ ಸಿನಿಮಾಕ್ಕೆ ಕೆಲಸ ಮಾಡಿದ್ದ ಚಿತ್ರ ಹಾಗೂ ತಾಂತ್ರಿಕ ತಂಡವೇ ‘ಎ ಫಾರ್ ಆನಂದ್’ ಸಿನಿಮಾಕ್ಕೂ ಕೆಲಸ ಮಾಡಲಿದೆ. ಮಹೇನ್ ಸಿಂಹ ಕ್ಯಾಮೆರಾ, ದೀಪು ಎಸ್ ಕುಮಾರ್ ಸಂಕಲನ, ಪ್ರಸನ್ನ ವಿಎಂ ಸಂಭಾಷಣೆ ಬರೆದಿದ್ದಾರೆ. ಮಾರ್ಚ್ ಅಥವಾ ಎಪ್ರಿಲ್ ತಿಂಗಳಲ್ಲಿ ಸಿನಿಮಾದ ಶೂಟಿಂಗ್ ಪ್ರಾರಂಭ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?