AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಕ್ತಿಧಾಮದ ಮಕ್ಕಳಿಗಾಗಿ ಶಿಕ್ಷಕಿಯಾದ ಗೀತಾ ಶಿವರಾಜ್ ಕುಮಾರ್

ಪಾರ್ವತಮ್ಮ ರಾಜ್​ಕುಮಾರ್ ನಿಧನ ಆದಾಗಿನಿಂದಲೂ ಶಕ್ತಿಧಾಮವನ್ನು ಗೀತಾ ಶಿವರಾಜ್ ಕುಮಾರ್ ನೋಡಿಕೊಳ್ಳುತ್ತಿದ್ದಾರೆ. ಅಲ್ಲಿನ ಮಕ್ಕಳು ರಜೆಯಲ್ಲಿ ಮನೆಗೆ ಹೋದಾಗ ದಿನಗೂಲಿಗೆ ಕಳಿಸಲಾಗುತ್ತಿತ್ತಂತೆ, ಇದನ್ನು ಕೇಳಿ ಬೇಸರಗೊಂಡ ಗೀತಾ ಶಿವರಾಜ್ ಕುಮಾರ್, ಮಕ್ಕಳು ದಿನಗೂಲಿಗೆ ಹೋಗುವುದನ್ನು ತಪ್ಪಿಸಲು ತಾವೇ ಶಿಕ್ಷಕರಾಗಿ ಕೌಶಲ್ಯವೊಂದನ್ನು ಕಲಿಸುತ್ತಿದ್ದಾರೆ.

ಶಕ್ತಿಧಾಮದ ಮಕ್ಕಳಿಗಾಗಿ ಶಿಕ್ಷಕಿಯಾದ ಗೀತಾ ಶಿವರಾಜ್ ಕುಮಾರ್
ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್
ಮಂಜುನಾಥ ಸಿ.
|

Updated on: Nov 07, 2024 | 11:51 AM

Share

ಶಿವರಾಜ್ ಕುಮಾರ್ ಯಶಸ್ಸಿನ ಹಿಂದೆ ಗೀತಾ ಶಿವರಾಜ್ ಕುಮಾರ್ ಅವರ ಶ್ರಮವೂ ಸಾಕಷ್ಟಿದೆ. ಈ ಬಗ್ಗೆ ಸ್ವತಃ ಶಿವರಾಜ್ ಕುಮಾರ್ ಹೇಳಿಕೊಂಡಿದ್ದಾರೆ. ಗೀತಾ ಶಿವರಾಜ್ ಕುಮಾರ್ ಅವರು ಸಿನಿಮಾ ನಿರ್ಮಾಪಕಿಯೂ ಹೌದು, ಪಾರ್ವತಮ್ಮ ರಾಜ್​ಕುಮಾರ್ ನಿಧನದ ಬಳಿಕ ಗೀತಾ ಶಿವರಾಜ್ ಕುಮಾರ್ ಅವರು ಶಕ್ತಿಧಾಮದ ಜವಾಬ್ದಾರಿವಹಿಸಿಕೊಂಡು ಅದರ ನಿರ್ವಹಣೆ ಮಾಡುತ್ತಿದ್ದಾರೆ. ಎರಡು ವರ್ಷದ ಹಿಂದೆ ಅವರು ಶಿಕ್ಷಕಿಯಾಗಿಯೂ ಬದಲಾಗಿದ್ದಾರೆ. ತಮ್ಮ ಶಕ್ತಿಧಾಮದ ಮಕ್ಕಳಿಗಾಗಿ ಅವರು ಈ ಮಹತ್ವದ ಕಾರ್ಯಕ್ಕೆ ಕೈಹಾಕಿದ್ದಾರೆ.

ಗೀತಾ ಶಿವರಾಜ್ ಕುಮಾರ್ ಅವರು ಕೈರಾಮ್ ವಾಶಿ ಅವರಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿಕೊಂಡಿರುವಂತೆ, ಗೀತಾ ಅವರಿಗೆ ಮೊದಲಿನಿಂದಲೂ ಬೇಕಿಂಗ್ ಬಗ್ಗೆ ಆಸಕ್ತಿ ಇತ್ತಂತೆ. ಅವರು ಶಿವಣ್ಣನ ಮದುವೆಯಾಗಿ ಬೆಂಗಳೂರಿಗೆ ಬಂದಾಗ ಅವರಿದ್ದ ಮನೆಯ ಬಳಿ ಒಬ್ಬ ಮುಂಬೈ ಮಹಿಳೆ ಇದ್ದರಂತೆ, ಅವರು ಕಪ್​ಕೇಕ್ ಮಾಡುತ್ತಿದ್ದರಂತೆ. ಅಲ್ಲದೆ ಆಗ ಕೋಶೀಸ್ ಅವರು ಸೈಕಲ್​ನಲ್ಲಿ ಕಪ್ ಕೇಕ್ ಮಾರಾಟ ಮಾಡುತ್ತಿದ್ದರಂತೆ. ಆಗೆಲ್ಲ ಇದನ್ನು ಹೇಗೆ ಮಾಡುತ್ತಾರೆ, ಇದನ್ನು ಕಲಿಯಬೇಕು ಅನಿಸಿತಂತೆ. ಅದೇ ಸಮಯದಲ್ಲಿ ಗೀತಾ ಅವರ ಸಹೋದರಿ ಅವರಿಗೆ ಅವನ್ ಒಂದನ್ನು ತಂದುಕೊಟ್ಟರಂತೆ ಆಗಿನಿಂದ ಅವರು ಬೇಕಿಂಗ್ ಮಾಡುತ್ತಿದ್ದಾರೆ.

ಪಾರ್ವತಮ್ಮ ಅವರು ತೀರಿಕೊಂಡ ಬಳಿಕ ಗೀತಾ ಶಿವರಾಜ್ ಕುಮಾರ್ ಅವರು ಶಕ್ತಿಧಾಮದ ಜವಾಬ್ದಾರಿವಹಿಸಿಕೊಂಡರು, ಅದಾದ ಬಳಿಕ ಒಮ್ಮೆ ಅಲ್ಲಿ ವರ್ಷಗಳಿಂದ ಕೋಣೆಯಲ್ಲಿ ತೆಗೆಸಿದಾಗ ಅಲ್ಲಿ ಕೆಲವು ಮಷೀನ್​ಗಳು ಕಂಡಿವೆ. ಮೊದಲಿಗೆ ಅವು ಏನು ಎಂಬುದು ಗೀತಾ ಅವರಿಗೂ ಗೊತ್ತಾಗಿರಲಿಲ್ಲ. ಬಳಿಕ ತಿಳಿದು ಬಂದಿದ್ದು ಅವು ಬೇಕಿಂಗ್ ಯಂತ್ರಗಳೆಂದು. ಆದರೆ ಅವೆಲ್ಲ ಕಮರ್ಶಿಯಲ್ ಬೇಕಿಂಗ್ ಯಂತ್ರಗಳು, ಬಹಳ ದೊಡ್ಡ ಯಂತ್ರಗಳು.

ಇದನ್ನೂ ಓದಿ:ಶಿವರಾಜ್ ಕುಮಾರ್ ನೂತನ ಫಾರ್ಮ್ ಹೌಸ್ ಅದ್ಧೂರಿ ಗೃಹ ಪ್ರವೇಶ

ಅವು ಹಾಗೆಯೇ ಇರಬೇಕಾದರೆ, ಗೀತಾ ಅವರು ಶಕ್ತಿಧಾಮದ ಮಕ್ಕಳಲ್ಲಿ ಕಾಲ ಕಾಲಕ್ಕೆ ಕೆಲವು ಬದಲಾವಣೆಗಳನ್ನು ಗುರುತಿಸಿದರಂತೆ. ಮಕ್ಕಳು ರಜೆಗೆ ಊರಿಗೆ ಹೋಗಿ ಬಂದಾಗ ಅವರು ತೂಕ ಕಳೆದುಕೊಂಡಿರುತ್ತಾರೆ, ಸಣ್ಣ ಆಗಿರುತ್ತಾರೆ, ಮುಖ ಕಪ್ಪಾಗಿರುತ್ತದೆ, ಯಾಕೆ ಈಗೆ ಆಗುತ್ತಿದೆ ಎಂದು ಮಕ್ಕಳ ಬಳಿ ವಿಚಾರಿಸಿದಾಗ, ಊರಿಗೆ ಹೋದಾಗ ಅವರನ್ನು ಪೋಷಕರು ದಿನಗೂಲಿಗೆ ಕಳಿಸುತ್ತಿದ್ದರಂತೆ. ಇದು ಗೀತಾ ಅವರ ಬೇಸಕ್ಕೆ ಕಾರಣವಾಗಿ, ಶಕ್ತಿಧಾಮದ ಮಕ್ಕಳಿಗೆ ಬೇಕಿಂಗ್ ಅನ್ನು ಕಲಿಸುವ ನಿರ್ಧಾರ ಮಾಡಿದರಂತೆ.

ಶಕ್ತಿಧಾಮದ ಮಕ್ಕಳಿಗೆ ಕೌಶಲ್ಯ ಕಲಿಸಿದರೆ ಅವರು ರಜೆಯ ಅವಧಿಯಲ್ಲಿ ದಿನಗೂಲಿಗೆ ಹೋಗುವುದು ತಪ್ಪುತ್ತದೆ ಎಂಬ ಕಾರಣಕ್ಕೆ ಮಕ್ಕಳಿಗೆ ಬೇಕಿಂಗ್ ಕಲಿಸಲು ಪ್ರಾರಂಭ ಮಾಡಿದ್ದಾರೆ ಗೀತಾ ಶಿವರಾಜ್​ಕುಮಾರ್, ಏಳರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೇಕಿಂಗ್ ಅನ್ನು ಒಂದು ವಿಷಯವಾಗಿ ಕಲಿಸಲಾಗುತ್ತಿದೆ. ಗೀತಾ ಅವರು ಇದಕ್ಕಾಗಿ ಪ್ರತ್ಯೇಕ ಸ್ಥಳವನ್ನು ತೆಗೆದುಕೊಂಡು ಅಲ್ಲಿಂದಲೇ ಮಕ್ಕಳಿಗೆ ಕಲಿಸುತ್ತಾರೆ.

ಹಲವು ಮಕ್ಕಳು ಈಗ ಚೆನ್ನಾಗಿ ಬೇಕಿಂಗ್ ಮಾಡುತ್ತಿದ್ದಾರಂತೆ. ಕೆಲವು ಹಿರಿಯ ವಿದ್ಯಾರ್ಥಿಗಳಿಗೆ ಈಗಾಗಲೇ 20-25 ಸಂಬಳದ ಆಫರ್​ಗಳು ಸಹ ಬೇಕಿಂಗ್​ ಫೀಲ್ಡ್​ನಲ್ಲಿ ಬರುತ್ತಿವೆಯಂತೆ. ಮಕ್ಕಳು ಬೇಕ್ ಮಾಡಿದ ಪದಾರ್ಥಗಳನ್ನು ಮಾರಾಟ ಮಾಡಲು ಆನ್​ಲೈನ್ ಪೋರ್ಟಲ್ ತೆರೆಯುವ ಆಲೋಚನೆಯೂ ಗೀತಾ ಅವರಿಗೆ ಇದೆ. ಅದರಿಂದ ಬಂದ ಹಣವನ್ನು ಶಕ್ತಿಧಾಮದ ಮಕ್ಕಳಿಗಾಗಿ ಬಳಸಲಾಗುತ್ತದೆಯಂತೆ. ಶೀಘ್ರವೇ ಆನ್​ಲೈನ್ ಸ್ಟೋರ್ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು