ನಿಮ್ಮ ಮನೆಯ ನೀರು ಅಮೃತ ಎಂದ ಅಭಿಮಾನಿ; ರಾಜ್​ಕುಮಾರ್ ಮಾಡಿದ್ದೇನು?

ಶಿವರಾಜ್ ಕುಮಾರ್ ಅವರು ತಮ್ಮ ತಂದೆ ರಾಜ್ ಕುಮಾರ್ ಅವರ ಚೆನ್ನೈ ಜೀವನದ ಬಗ್ಗೆ ಆಸಕ್ತಿಕರ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ರಾಜ್ ಕುಮಾರ್ ಅವರು ಚೆನ್ನೈನಲ್ಲಿ ವಾಸಿಸುತ್ತಿದ್ದಾಗ, ಅವರ ಮನೆಯಲ್ಲಿ ಪ್ರತಿ ದಿನ ನೂರಾರು ಜನರಿಗೆ ಊಟ ಹಾಗೂ ಜ್ಯೂಸ್​ನ ಉಚಿತವಾಗಿ ನೀಡುತ್ತಿದ್ದರು ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.

ನಿಮ್ಮ ಮನೆಯ ನೀರು ಅಮೃತ ಎಂದ ಅಭಿಮಾನಿ; ರಾಜ್​ಕುಮಾರ್ ಮಾಡಿದ್ದೇನು?
ಶಿವರಾಜ್​ಕುಮಾರ್
Follow us
ರಾಜೇಶ್ ದುಗ್ಗುಮನೆ
|

Updated on:Nov 14, 2024 | 11:54 AM

ಮೊದಲಿನ ಕಾಲದಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿದ್ದುದೇ ಚೆನ್ನೈನಲ್ಲಾಗಿತ್ತು. ಈ ಕಾರಣಕ್ಕೆ ಬಹುತೇಕ ಸ್ಟಾರ್ ಹೀರೋಗಳು ಅಲ್ಲಿಯೇ ಸೆಟಲ್ ಆಗಿದ್ದರು. ರಾಜ್​ಕುಮಾರ್ ಕೂಡ ಇದಕ್ಕೆ ಹೊರತಾಗಿಲ್ಲ. ಅವರು ಚೆನ್ನೈನಲ್ಲಿ ವಾಸವಿದ್ದರು. ಅಲ್ಲಿಯೇ ಇದ್ದುಕೊಂಡು ಹಲವು ಸಿನಿಮಾ ಕೆಲಸಗಳನ್ನು ಮಾಡುತ್ತಿದ್ದರು. ವಿಶೇಷ ಎಂದರೆ ರಾಜ್​ಕುಮಾರ್ ಮನೆ ಮುಂದೆ ನಿತ್ಯವೂ ಜ್ಯೂಸ್ ಹಂಚಲಾಗುತ್ತಿತ್ತು. ಅಷ್ಟೇ ಅಲ್ಲ, ಬಂದ ಕಲಾವಿದರಿಗೆ ಊಟವನ್ನು ಹಾಕಲಾಗುತ್ತಿತ್ತು. ಈ ಬಗ್ಗೆ ಶಿವರಾಜ್​ಕುಮಾರ್ ಮಾತನಾಡಿದ್ದಾರೆ.

ಶಿವರಾಜ್​ಕುಮಾರ್ ನಟನೆಯ ‘ಭೈರತಿ ರಣಗಲ್’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರಕ್ಕಾಗಿ ಅವರು ವಿವಿಧ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಾ ಇದ್ದಾರೆ. ಕೈರಾಮ್ ವಾಶಿ ಯ್ಯೂಟ್ಯೂಬ್ ಚಾನೆಲ್​ಗೂ ಶಿವರಾಜ್​ಕುಮಾರ್ ಅವರು ಸಂದರ್ಶನ ನೀಡಿದ್ದು, ರಾಜ್​ಕುಮಾರ್ ಬಗ್ಗೆ ಮಾತನಾಡಿದ್ದಾರೆ.

‘ಚೆನ್ನೈನಲ್ಲಿದ್ದಾಗ ನಿತ್ಯ ನೂರಾರು ಜನರು ಬಂದು ನಮ್ಮನೆಯಲ್ಲಿ ಊಟ ಮಾಡುತ್ತಿದ್ದರು. ರಾಜ್​ಕುಮಾರ್ ಮನೆಯಲ್ಲಿ ಎಲ್ಲರಿಗೂ ಬಿಸಿ ಅನ್ನ, ಬಿಸಿ ಸಾರು ಕೊಡಲಾಗುತ್ತಿತ್ತು. ಅದುವೇ ಸ್ಪೇಷಾಲಿಟಿ. ಎಷ್ಟಾದರೂ ತಿನ್ನಿ, ವೇಸ್ಟ್ ಮಾಡಬೇಡಿ ಎಂದು ಅಪ್ಪಾಜಿ ಹೇಳುತ್ತಿದ್ದರು. ನಾವಿದ್ದ ಮನೆಯ ಸಮೀಪವೇ ಎನ್​ಟಿಆರ್ ಹಾಗೂ ಎಂಜಿಆರ್​ ಮನೆಗಳು ಇದ್ದವು. ಹೀಗಾಗಿ, ಅದನ್ನು ನೋಡಲು ಜನರು ಅಲ್ಲಿಗೆ ಬರುತ್ತಿದ್ದರು. ಶೂಟಿಂಗ್ ನೋಡೋಕೆ ರಾಜ್​ಕುಮಾರ್ ಅವಕಾಶ ಕೊಡುತ್ತಿದ್ದರು. ಯಾರೋ ಬಂದು ಅಣ್ಣಾ ನಿಮ್ಮ ಮನೆಯ ನೀರು ಕೊಡಿ ಕುಡಿದುಬಿಡ್ತೀವಿ ಎಂದರು. ಆ ನೀರನ್ನು ಕುಡಿದ ಬಳಿಕ ಅಮೃತ ಕುಡಿದಂತೆ ಆಯ್ತು ಎಂದಿದ್ದರು’ ಎಂದು ಶಿವಣ್ಣ ವಿವರಿಸಿದ್ದಾರೆ.

ಇದನ್ನೂ ಓದಿ: ಶಿವರಾಜ್​ಕುಮಾರ್​ ಆರೋಗ್ಯ ಸಮಸ್ಯೆ; ಕರೆ ಮಾಡಿ ವಿಚಾರಿಸಿದ ಯಶ್, ಸುದೀಪ್, ಡಾಲಿ

ಆ ಒಂದು ಮಾತಿನಿಂದ ರಾಜ್​ಕುಮಾರ್​ಗೆ ಒಂದು ಆಲೋಚನೆ ಬಂತು. ‘ಹೊರಗಡೆ ಎಲ್ಲರಿಗೂ ಸಿಗುವ ರೀತಿ ನಿತ್ಯ ಜ್ಯೂಸ್ ಮಾಡಿಡಿ ಎಂದರು. ಅಂದಿನಿಂದ ಮಜ್ಜಿಗೆ ಅಥವಾ ಜ್ಯೂಸ್ ಇಡುತ್ತಾ ಇದ್ದರು. ಡ್ರಮ್ ಅಲ್ಲಿ ಐಸ್ ಹಾಕಿ ಇಟ್ಟು ಬಿಡ್ತಾ ಇದ್ರು. ದುಡ್ಡು ಎಷ್ಟು ಖರ್ಚಾಗುತ್ತದೆ ಎಂಬುದರ ಆಲೋಚನೆ ಅವರಿಗೆ ಇಲ್ಲ. ರಾಜ್​ಕುಮಾರ್ ಮನೆಯ ಸಮೀಪ ಕೋಲ್ಡ್ ಜ್ಯೂಸ್ ಇದೆ ಕುಡಿದು ಬರೋಣ ಎಂದು ಆಟೋ ಡ್ರೈವರ್ ಹೇಳುತ್ತಿದ್ದರು. ಅದು ನಮಗೆ ಕೇಳುತ್ತಿತ್ತು’ ಎಂದಿದ್ದಾರೆ ಶಿವಣ್ಣ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:54 am, Thu, 14 November 24

ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ