AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮರುಬಿಡುಗಡೆಯಲ್ಲಿ ‘ನವಗ್ರಹ’ ಸಿನಿಮಾ ಗಳಿಸಿದ್ದೆಷ್ಟು?

Darshan Thoogudeepa: ದರ್ಶನ್ ಜೈಲಿಗೆ ಹೋದ ಬಳಿಕ ಅವರ ನಟನೆಯ ಹಲವು ಹಳೆಯ ಸಿನಿಮಾಗಳನ್ನು ಮರು ಬಿಡುಗಡೆ ಮಾಡಲಾಯ್ತು. ಅವರದ್ದೇ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣವಾಗಿದ್ದ ‘ನವಗ್ರಹ’ ಸಿನಿಮಾ ಕಳೆದ ವಾರ ಬಿಡುಗಡೆ ಆಯ್ತು. ಈ ಸಿನಿಮಾ ಗಳಿಸಿದ್ದೆಷ್ಟು?

ಮರುಬಿಡುಗಡೆಯಲ್ಲಿ ‘ನವಗ್ರಹ’ ಸಿನಿಮಾ ಗಳಿಸಿದ್ದೆಷ್ಟು?
Follow us
ಮಂಜುನಾಥ ಸಿ.
|

Updated on:Nov 14, 2024 | 3:22 PM

ದರ್ಶನ್ ನಟನೆಯ ‘ನವಗ್ರಹ’ ಸಿನಿಮಾ ಇತ್ತೀಚೆಗಷ್ಟೆ ಮರು ಬಿಡುಗಡೆ ಆಗಿತ್ತು. ರಾಜ್ಯದಾದ್ಯಂತ ಸುಮಾರು 86 ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ಮರುಬಿಡುಗಡೆ ಮಾಡಲಾಗಿತ್ತು. ಸಿನಿಮಾಕ್ಕೆ ಉತ್ತಮ ಪ್ರಚಾರವನ್ನು ಮಾಡಲಾಗಿತ್ತು. ಸ್ವತಃ ವಿಜಯಲಕ್ಷ್ಮಿ ದರ್ಶನ್ ಸಿನಿಮಾದ ಮರು ಬಿಡುಗಡೆ ಬಗ್ಗೆ ಪೋಸ್ಟ್​ಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ‘ನವಗ್ರಹ’ ಸಿನಿಮಾದಲ್ಲಿ ನಟಿಸಿದ್ದ ಕೆಲವು ನಟರು ಮತ್ತೆ ಒಂದಾಗಿ ಬಂದು ಸಿನಿಮಾದ ಪ್ರಚಾರ ಮಾಡಿದ್ದರು. ಸಿನಿಮಾದ ನಾಯಕಿ ಶರ್ಮಿಳಾ ಮಾಂಡ್ರೆ ಸಹ ಪ್ರಚಾರದಲ್ಲಿ ಭಾಗಿಯಾಗಿದ್ದರು. ಅಂದಹಾಗೆ ಮರು ಬಿಡುಗಡೆ ಇಂದ ಈ ಸಿನಿಮಾ ಗಳಿಸಿದ್ದೆಷ್ಟು?

‘ನವಗ್ರಹ’ ಸಿನಿಮಾ ಮರು ಬಿಡುಗಡೆ ಯಲ್ಲಿ ಸುಮಾರು 61 ಲಕ್ಷ ಕಲೆಕ್ಷನ್ ಮಾಡಿದೆ ಎಂಬ ಲೆಕ್ಕ ಲಭ್ಯವಾಗುತ್ತಿದೆ. 86 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಪ್ರಸ್ತುತ 9 ಚಿತ್ರಮಂದಿರಗಳಲ್ಲಿ ಉಳಿದುಕೊಂಡಿದೆ. ‘ನವಗ್ರಹ’ ಸಿನಿಮಾ ಮೊದಲಿಗೆ 2008 ರಲ್ಲಿ ಬಿಡುಗಡೆ ಆಗಿತ್ತು. ಕಳೆದ ವಾರವಷ್ಟೆ ಈ ಸಿನಿಮಾದ ಮರು ಬಿಡುಗಡೆ ಮಾಡಲಾಯ್ತು. ಈ ಸಿನಿಮಾ ಒಂದು ಕೋಟಿಗೂ ಹೆಚ್ಚು ಗಳಿಸುವ ನಿರೀಕ್ಷೆ ಇತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಗಳಿಕೆ ಮಾಡಿಲ್ಲ ಎನ್ನಲಾಗುತ್ತಿದೆ.

ಇದನ್ನೂ ಓದಿ:ದರ್ಶನ್ ಮಧ್ಯಂತರ ಜಾಮೀನು ತಡೆ ಕೋರಿ ಸುಪ್ರೀಂಗೆ ಮೇಲ್ಮನವಿ: ಗೃಹ ಸಚಿವ ಪರಮೇಶ್ವರ್ ಅಚ್ಚರಿಯ ಹೇಳಿಕೆ

‘ನವಗ್ರಹ’ ಸಿನಿಮಾವನ್ನು ದರ್ಶನ್ ಸಹೋದರ ದಿನಕರ್ ನಿರ್ದೇಶನ ಮಾಡಿದ್ದರು. ಸಿನಿಮಾವನ್ನು ದರ್ಶನ್ ಅವರ ಹೋಮ್ ಬ್ಯಾನರ್ ಮೂಲಕ ನಿರ್ಮಾಣ ಮಾಡಲಾಗಿತ್ತು. ಮೊದಲು ಬಿಡುಗಡೆ ಆಗಿದ್ದಾಗ ಸೂಪರ್ ಡೂಪರ್ ಹಿಟ್ ಆಗಿತ್ತು ಈ ಸಿನಿಮಾ. 2008 ರಲ್ಲೇ ಸುಮಾರು ಎರಡು ಕೋಟಿಗೂ ಹೆಚ್ಚು ಹಣ ಗಳಿಕೆ ಮಾಡಿತ್ತು. ಆದರೆ ಈಗ ಒಂದು ಕೋಟಿ ತಲುಪಲು ವಿಫಲವಾಗಿದೆ.

‘ನವಗ್ರಹ’ ಸಿನಿಮಾ ಬಿಡುಗಡೆಗೆ ಮುನ್ನ ಚಿತ್ರಮಂದಿರ ಮಾಲೀಕರು ಮತ್ತು ಪೊಲೀಸರು ಕೆಲವು ಎಚ್ಚರಿಕೆಗಳನ್ನು ದರ್ಶನ್ ಅಭಿಮಾನಿಗಳಿಗೆ ನೀಡಿದ್ದರು. ಈ ಹಿಂದೆ ‘ಕರಿಯ’ ಸಿನಿಮಾ ಮರು ಬಿಡುಗಡೆ ಆದಾಗ ದರ್ಶನ್ ಅಭಿಮಾನಿಗಳು ಕೆಲವು ಚಿತ್ರಮಂದಿರಗಳ ಬಳಿ ಅತಿರೇಕದ ವರ್ತನೆ ತೋರಿದ್ದರು. ಪೊಲೀಸರು, ಮಾಧ್ಯಮಗಳು ಹಾಗೂ ಕೆಲವು ನಾಯಕ ನಟರುಗಳ ವಿರುದ್ಧ ಅವಾಚ್ಯ ಘೋಷಣೆಗಳನ್ನು ಕೂಗಿದ್ದರು. ಹಾಗಾಗಿ ಈ ಬಾರಿ ಮೊದಲೇ ಎಚ್ಚರಿಕೆ ನೀಡಲಾಗಿತ್ತು. ‘ನವಗ್ರಹ’ ಕಲೆಕ್ಷನ್ ತಗ್ಗಲು ಇದೂ ಒಂದು ಕಾರಣವಾಗಿರಬಹುದು.

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ಆಗಿರುವ ದರ್ಶನ್ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಬೆನ್ನು ನೋವು ಕಾಡುತ್ತಿದೆ. ಅನಾರೋಗ್ಯದ ಕಾರಣ ನೀಡಿಯೇ ಅವರು ಜಾಮೀನು ಪಡೆದುಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:59 pm, Thu, 14 November 24