Bhairathi Ranagal

Bhairathi Ranagal

‘ಭೈರತಿ ರಣಗಲ್’ ಸಿನಿಮಾಗೆ ನರ್ತನ್ ಅವರು ನಿರ್ದೇಶನ ಮಾಡಿದ್ದಾರೆ. ಶಿವರಾಜ್​ಕುಮಾರ್​, ಛಾಯಾ ಸಿಂಗ್, ರಾಹುಲ್ ಬೋಸ್, ಅವಿನಾಶ್, ರುಕ್ಮಿಣಿ ವಸಂತ್, ದೇವರಾಜ್, ಮಧು ಗುರುಸ್ವಾಮಿ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಶಿವರಾಜ್​ಕುಮಾರ್​ ಅವರು ಡಿಫರೆಂಟ್ ಆದಂತಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನವೆಂಬರ್​ 15ರಂದು ‘ಭೈರತಿ ರಣಗಲ್’ ಸಿನಿಮಾ ಬಿಡುಗಡೆ. ಈ ಚಿತ್ರಕ್ಕೆ ‘ಕೆಜಿಎಫ್​’ ಖ್ಯಾತಿಯ ರವಿ ಬಸ್ರೂರು ಅವರು ಸಂಗೀತ ನೀಡಿದ್ದಾರೆ. ‘ಗೀತಾ ಪಿಕ್ಚರ್ಸ್​’ ಸಂಸ್ಥೆಯ ಮೂಲಕ ಗೀತಾ ಶಿವರಾಜ್​ಕುಮಾರ್​ ಅವರು ನಿರ್ಮಾಣ ಮಾಡಿದ್ದಾರೆ. ನವೀನ್ ಕುಮಾರ್​ ಅವರ ಛಾಯಾಗ್ರಹಣ ಈ ಸಿನಿಮಾಗಿದೆ. ನರ್ತನ್​ ಮತ್ತು ಶಿವರಾಜ್​ಕುಮಾರ್​ ಅವರ ಕಾಂಬಿನೇಷನ್​ನಲ್ಲಿ ಬಂದಿದ್ದ ‘ಮಫ್ತಿ’ ಸಿನಿಮಾ 2017ರಲ್ಲಿ ಬಿಡುಗಡೆ ಆಗಿತ್ತು. ಆ ಕಥೆಯ ಹಿನ್ನೆಲೆ ಮತ್ತು ಮುಂದುವರಿದ ಭಾಗವನ್ನು ಇಟ್ಟುಕೊಂಡು ‘ಭೈರತಿ ರಣಗಲ್’ ಸಿನಿಮಾವನ್ನು ಮಾಡಲಾಗಿದೆ.

ಇನ್ನೂ ಹೆಚ್ಚು ಓದಿ

‘ಭೈರತಿ ರಣಗಲ್’: ಶಿವಮೊಗ್ಗದಲ್ಲಿ ಫ್ಯಾನ್ಸ್ ಜೊತೆ ಸಂಭ್ರಮಿಸಿದ ಶಿವರಾಜ್​ಕುಮಾರ್​

‘ಭೈರತಿ ರಣಗಲ್’ ಸಿನಿಮಾ ಸೂಪರ್​ ಹಿಟ್ ಆಗಿದೆ. ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಶಿವರಾಜ್​ಕುಮಾರ್​ ಅವರು ಬೇರೆ ಬೇರೆ ಊರುಗಳಿಗೆ ತೆರಳಿ ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದಾರೆ. ಶಿವಮೊಗ್ಗದ ಮಲ್ಲಿಕಾರ್ಜುನ ಥಿಯೇಟರ್​ನಲ್ಲಿ ಸಿನಿಮಾ ಪ್ರದರ್ಶನ ಆಗುತ್ತಿದ್ದು, ಅಲ್ಲಿಗೆ ಶಿವಣ್ಣ ತೆರಳಿದ್ದಾರೆ. ಅಭಿಮಾನಿಗಳ ಜೊತೆ ಅವರು ಕಾಲ ಕಳೆದಿದ್ದಾರೆ. ತಮ್ಮ ನೆಚ್ಚಿನ ಹೀರೋ ಕಂಡು ಅಭಿಮಾನಿಗಳಿಗೆ ಖುಷಿ ಆಗಿದೆ.

ಶಿವಣ್ಣನ ರೀತಿ ಡೈಲಾಗ್ ಹೇಳೋಕೆ ಯಾರಿಗೆ ಸಾಧ್ಯ? ವೇದಿಕೆಯಲ್ಲಿ ಎಲ್ಲರೂ ಸುಸ್ತ್

‘ಭೈರತಿ ರಣಗಲ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಬೆಂಗಳೂರಿನಲ್ಲಿ ಚಿತ್ರತಂಡದವರು ಸಕ್ಸಸ್ ಮೀಟ್ ನಡೆಸಿದ್ದಾರೆ. ಈ ಸಿನಿಮಾದಲ್ಲಿ ಶಿವರಾಜ್​ಕುಮಾರ್​ ಅವರು ಖಡಕ್ ಆದಂತಹ ಡೈಲಾಗ್​ಗಳನ್ನು ಹೇಳಿದ್ದಾರೆ. ಆ ಡೈಲಾಗ್​ಗಳನ್ನು ಹೇಳಲು ಸಕ್ಸಸ್ ಮೀಟ್​ನಲ್ಲಿ ಕೆಲವರು ಪ್ರಯತ್ನಿಸಿದ್ದಾರೆ. ಆದರೆ ಶಿವಣ್ಣನ ರೀತಿ ಡೈಲಾಗ್ ಹೇಳಲು ಸಾಧ್ಯವಾಗದೇ ಎಲ್ಲರೂ ಸುಸ್ತಾಗಿದ್ದಾರೆ.

‘ಭೈರತಿ ರಣಗಲ್ ಸೀಕ್ವೆಲ್ ಕೂಡ ಬರಲಿದೆ’: ಸಕ್ಸಸ್ ಮೀಟ್​ನಲ್ಲಿ ಶಿವಣ್ಣ ಮಾಹಿತಿ

ನರ್ತನ್ ನಿರ್ದೇಶನ ಮಾಡಿದ ‘ಭೈರತಿ ರಣಗಲ್’ ಸಿನಿಮಾ ಹಿಟ್ ಆಗಿದೆ. ‘ಮಫ್ತಿ’ ಸಿನಿಮಾದ ಪ್ರೀಕ್ವೆಲ್ ಆಗಿ ಈ ಸಿನಿಮಾ ಮೂಡಿಬಂದಿದೆ. ಸಿನಿಮಾ ಹಿಟ್ ಆದ್ದರಿಂದ ಸಕ್ಸಸ್ ಮೀಟ್ ಮಾಡಲಾಗಿದೆ. ಈ ವೇಳೆ ಯಶಸ್ಸಿನ ಬಗ್ಗೆ ಶಿವರಾಜ್​ಕುಮಾರ್​ ಅವರು ಮಾತನಾಡಿದರು. ‘ಭೈರತಿ ರಣಗಲ್’ ಸಿನಿಮಾಗೂ ಸೀಕ್ವೆಲ್ ಬರಲಿದೆ ಎಂದು ಶಿವಣ್ಣ ಹೇಳಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ..

ದಿನ ಕಳೆದಂತೆ ಹೆಚ್ಚಿತು ‘ಭೈರತಿ ರಣಗಲ್’ ಕಲೆಕ್ಷನ್; ಇಲ್ಲಿದೆ ಮೂರು ದಿನಗಳ ಗಳಿಕೆ ಲೆಕ್ಕ

ಶಿವರಾಜ್ ಕುಮಾರ್ ನಟನೆಯ ‘ಭೈರತಿ ರಣಗಲ್’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಮೂರು ದಿನಗಳಲ್ಲಿ ಸಿನಿಮಾ ದೊಡ್ಡ ಗಳಿಕೆ ಮಾಡಿದೆ. ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದ ಈ ಚಿತ್ರದ ಯಶಸ್ಸು ಶಿವರಾಜ್ ಕುಮಾರ್ ಅವರಿಗೆ ಖುಷಿ ನೀಡಿದೆ.

Bhairathi Ranagal Review: ರಣಗಲ್ ಸಾಮ್ರಾಜ್ಯವನ್ನು ಪೂರ್ತಿಯಾಗಿ ಆವರಿಸಿಕೊಂಡ ಶಿವಣ್ಣ

ಶಿವರಾಜ್​ಕುಮಾರ್​ ಅವರನ್ನು ಗಂಭೀರವಾದ ಪಾತ್ರದಲ್ಲಿ ನೋಡಲು ಇಷ್ಟಪಡುವ ಅಭಿಮಾನಿಗಳಿಗೆ ‘ಮಫ್ತಿ’ ಸಿನಿಮಾ ಖುಷಿಕೊಟ್ಟಿತ್ತು. ಈಗ ‘ಭೈರತಿ ರಣಗಲ್’ ಸಿನಿಮಾ ಕೂಡ ಅದೇ ರೀತಿ ಮೂಡಿಬಂದಿದೆ. ಇಡೀ ಸಿನಿಮಾವನ್ನು ಭೈರತಿ ರಣಗಲ್ ಪಾತ್ರ ಆವರಿಸಿಕೊಂಡಿದೆ. ನರ್ತನ್ ಅವರು ಯಾವುದೇ ಅವಸರ ಇಲ್ಲದೇ ಕಥೆಯನ್ನು ನಿರೂಪಿಸಿದ್ದಾರೆ. ‘ಭೈರತಿ ರಣಗಲ್’ ಸಿನಿಮಾದ ವಿಮರ್ಶೆ ಇಲ್ಲಿದೆ..

ಅದ್ದೂರಿಯಾಗಿ ರಿಲೀಸ್ ಆಯ್ತು ‘ಭೈರತಿ ರಣಗಲ್’; ಫಸ್ಟ್ ಹಾಫ್​ನಲ್ಲಿ ಏನೆಲ್ಲ ಇದೆ?

ಶಿವರಾಜ್​ಕುಮಾರ್​, ರುಕ್ಮಿಣಿ ವಸಂತ್, ಛಾಯಾ ಸಿಂಗ್ ಮುಂತಾದವರು ನಟಿಸಿರುವ ‘ಭೈರತಿ ರಣಗಲ್’ ಸಿನಿಮಾ ಇಂದು (ನ.15) ಅದ್ದೂರಿಯಾಗಿ ಬಿಡುಗಡೆ ಆಗಿದೆ. ನರ್ತನ್ ನಿರ್ದೇಶನ ಮಾಡಿರುವ ಈ ಸಿನಿಮಾವನ್ನು ಗೀತಾ ಶಿವರಾಜ್​ಕುಮಾರ್​ ನಿರ್ಮಿಸಿದ್ದಾರೆ. ಈ ಚಿತ್ರದ ತೆರೆ ಹಿಂದೆ ಅತ್ಯುತ್ತಮ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಸಿನಿಮಾದ ಫಸ್ಟ್​ ಹಾಫ್ ರಿಪೋರ್ಟ್​ ಇಲ್ಲಿದೆ.​

ನಿಮ್ಮ ಮನೆಯ ನೀರು ಅಮೃತ ಎಂದ ಅಭಿಮಾನಿ; ರಾಜ್​ಕುಮಾರ್ ಮಾಡಿದ್ದೇನು?

ಶಿವರಾಜ್ ಕುಮಾರ್ ಅವರು ತಮ್ಮ ತಂದೆ ರಾಜ್ ಕುಮಾರ್ ಅವರ ಚೆನ್ನೈ ಜೀವನದ ಬಗ್ಗೆ ಆಸಕ್ತಿಕರ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ರಾಜ್ ಕುಮಾರ್ ಅವರು ಚೆನ್ನೈನಲ್ಲಿ ವಾಸಿಸುತ್ತಿದ್ದಾಗ, ಅವರ ಮನೆಯಲ್ಲಿ ಪ್ರತಿ ದಿನ ನೂರಾರು ಜನರಿಗೆ ಊಟ ಹಾಗೂ ಜ್ಯೂಸ್​ನ ಉಚಿತವಾಗಿ ನೀಡುತ್ತಿದ್ದರು ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.

ತಮಿಳು, ತೆಲುಗಿನಲ್ಲೂ ಶಿವರಾಜ್​ಕುಮಾರ್ ಬ್ಯುಸಿ; ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ

ಶಿವರಾಜ್​ಕುಮಾರ್​ ಅವರಿಗೆ ಕನ್ನಡದಲ್ಲಿ ಮಾತ್ರವಲ್ಲದೇ ಪರಭಾಷೆಯಲ್ಲೂ ಡಿಮ್ಯಾಂಡ್ ಹೆಚ್ಚಾಗಿದೆ. ‘ಭೈರತಿ ರಣಗಲ್’ ಸಿನಿಮಾದ ಸಂದರ್ಶನದಲ್ಲಿ ಅವರು ಆ ಬಗ್ಗೆ ಮಾತನಾಡಿದ್ದಾರೆ. ‘ಜೈಲರ್’ ಬಳಿಕ ಶಿವಣ್ಣ ಅವರಿಗೆ ತಮಿಳು ಚಿತ್ರರಂಗದಲ್ಲಿ ಖ್ಯಾತಿ ಹೆಚ್ಚಿತು. ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ಅವರು ನಟಿಸಿದರು. ತೆಲುಗಿನಿಂದಲೂ ಆಫರ್​ ಬಂದಿದೆ.

ಶಿವರಾಜ್​ಕುಮಾರ್​ ಆರೋಗ್ಯ ಸಮಸ್ಯೆ; ಕರೆ ಮಾಡಿ ವಿಚಾರಿಸಿದ ಯಶ್, ಸುದೀಪ್, ಡಾಲಿ

ನಟ ಶಿವರಾಜ್​ಕುಮಾರ್ ಅವರಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ. ಅದಕ್ಕಾಗಿ ಅವರು ಚಿಕಿತ್ಸೆ ಪಡೆಯಲು ಆರಂಭಿಸಿದ್ದಾರೆ. ಒಂದು ಸರ್ಜರಿ ಕೂಡ ಆಗಬೇಕಿದೆ. ಅದರ ನಡುವೆಯೂ ಶಿವರಾಜ್​ಕುಮಾರ್​ ಅವರು ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಫೋನ್​ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ ಎಂದು ಹೇಳಿದ್ದಾರೆ ಶಿವಣ್ಣ.

ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಜಿಟಿಟಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ
ಜಿಟಿಟಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ
ಬಿಗ್​ಬಾಸ್ ಮನೆಯಲ್ಲಿ ರಾಜಿ ಸಂಧಾನ, ದೂರಾದವರು ಒಂದಾದರೇ?
ಬಿಗ್​ಬಾಸ್ ಮನೆಯಲ್ಲಿ ರಾಜಿ ಸಂಧಾನ, ದೂರಾದವರು ಒಂದಾದರೇ?
ಮಡಿದವರು ಶಿಗ್ಗಾವಿ ಕ್ಷೇತ್ರದ ಸವಣೂರು ತಾಲ್ಲೂಕಿನ ತರಕಾರಿ ವ್ಯಾಪಾರಸ್ಥರು
ಮಡಿದವರು ಶಿಗ್ಗಾವಿ ಕ್ಷೇತ್ರದ ಸವಣೂರು ತಾಲ್ಲೂಕಿನ ತರಕಾರಿ ವ್ಯಾಪಾರಸ್ಥರು
ಬಾಗಲಕೋಟೆಯಲ್ಲಿ ಎದೆ ಝಲ್​ ಎನಿಸುವ ಟ್ಯ್ರಾಕ್ಟರ್​ ರೇಸ್​: ವಿಡಿಯೋ ನೋಡಿ
ಬಾಗಲಕೋಟೆಯಲ್ಲಿ ಎದೆ ಝಲ್​ ಎನಿಸುವ ಟ್ಯ್ರಾಕ್ಟರ್​ ರೇಸ್​: ವಿಡಿಯೋ ನೋಡಿ
ಬೇರೆ ಪಕ್ಷಗಳ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿಲ್ಲ: ಜಿಟಿ ದೇವೇಗೌಡ
ಬೇರೆ ಪಕ್ಷಗಳ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿಲ್ಲ: ಜಿಟಿ ದೇವೇಗೌಡ
ಶಿಲೆಸಿಕ್ಕ ಜಮೀನಲ್ಲಿ ಭವ್ಯ ರಾಮಮಂದಿರ ನಿರ್ಮಿಸಲು ಸ್ಥಳೀಯರ ಆಗ್ರಹ
ಶಿಲೆಸಿಕ್ಕ ಜಮೀನಲ್ಲಿ ಭವ್ಯ ರಾಮಮಂದಿರ ನಿರ್ಮಿಸಲು ಸ್ಥಳೀಯರ ಆಗ್ರಹ
ಮೇಲ್ಸೇತುವೆಯಲ್ಲಿ ಚಲಿಸುತ್ತಿದ್ದಾಗ ರೈಲಿನಿಂದ ಕೆಳಗೆ ಜಿಗಿದ ವ್ಯಕ್ತಿ
ಮೇಲ್ಸೇತುವೆಯಲ್ಲಿ ಚಲಿಸುತ್ತಿದ್ದಾಗ ರೈಲಿನಿಂದ ಕೆಳಗೆ ಜಿಗಿದ ವ್ಯಕ್ತಿ
ಮೈಕ್ರೋ ಫೈನಾನ್ಸ್​ಗಳ ಅಟ್ಟಹಾಸಕ್ಕೆ ಕಡಿವಾಣ ಹಾಕುತ್ತೇವೆ: ಪರಮೇಶ್ವರ್
ಮೈಕ್ರೋ ಫೈನಾನ್ಸ್​ಗಳ ಅಟ್ಟಹಾಸಕ್ಕೆ ಕಡಿವಾಣ ಹಾಕುತ್ತೇವೆ: ಪರಮೇಶ್ವರ್
ಕಳೆದ ತಿಂಗಳು ಕೂಡ ಆಚರಿಸಲಾಗಿತ್ತು ಕಲಬುರಗಿ ಬಂದ್
ಕಳೆದ ತಿಂಗಳು ಕೂಡ ಆಚರಿಸಲಾಗಿತ್ತು ಕಲಬುರಗಿ ಬಂದ್