AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪುಷ್ಪ 2’ ಟ್ರೇಲರ್​ ಬಗ್ಗೆ ಸಿಹಿ ಸುದ್ದಿ ನೀಡಿದ ಅಲ್ಲು ಅರ್ಜುನ್​; ನ.17ಕ್ಕೆ ಕಾತರ

ನವೆಂಬರ್​ 17ರಂದು ಬಹುನಿರೀಕ್ಷಿತ ‘ಪುಷ್ಪ 2’ ಸಿನಿಮಾದ ಟ್ರೇಲರ್​ ಬಿಡುಗಡೆ ಆಗಲಿದೆ. ಅಲ್ಲು ಅರ್ಜುನ್ ನಟಿಸಿರುವ ಈ ಸಿನಿಮಾದ ಕಥೆಯ ಬಗ್ಗೆ ಟ್ರೇಲರ್​ನಲ್ಲಿ ಸುಳಿವು ಸಿಗಲಿದೆ. ‘ಪುಷ್ಪ’ ಸಿನಿಮಾ ನೋಡಿ ಎಂಜಾಯ್ ಮಾಡಿದ್ದ ಪ್ರೇಕ್ಷಕರೆಲ್ಲರೂ ಈಗ ‘ಪುಷ್ಪ 2’ ಚಿತ್ರವನ್ನು ವೀಕ್ಷಿಸಲು ಕಾದಿದ್ದಾರೆ. ಡಿಸೆಂಬರ್​ 5ರಂದು ವಿಶ್ವಾದ್ಯಂತ ಈ ಸಿನಿಮಾ ಧೂಳೆಬ್ಬಿಸಲಿದೆ.

‘ಪುಷ್ಪ 2’ ಟ್ರೇಲರ್​ ಬಗ್ಗೆ ಸಿಹಿ ಸುದ್ದಿ ನೀಡಿದ ಅಲ್ಲು ಅರ್ಜುನ್​; ನ.17ಕ್ಕೆ ಕಾತರ
ಅಲ್ಲು ಅರ್ಜುನ್
ಮದನ್​ ಕುಮಾರ್​
|

Updated on:Nov 11, 2024 | 10:19 PM

Share

ಭಾರಿ ನಿರೀಕ್ಷೆ ಸೃಷ್ಟಿ ಮಾಡಿರುವ ‘ಪುಷ್ಪ 2’ ಸಿನಿಮಾ ಬಿಡುಗಡೆ ಸಜ್ಜಾಗುತ್ತಿದೆ. ಈ ಸಿನಿಮಾ ಮೂಲಕ ಅಲ್ಲು ಅರ್ಜುನ್ ಅವರು ದೊಡ್ಡ ದಾಖಲೆ ಮಾಡುತ್ತಾರೆ ಎಂಬ ನಿರೀಕ್ಷೆ ಇದೆ. ಈವರೆಗೂ ಚಿತ್ರತಂಡದವರು ಬಿಡುಗಡೆ ಮಾಡಿದ ಎಲ್ಲ ಕಾಂಟೆಂಟ್​ಗೆ ಜನರಿಂದ ಸಖತ್ ಪ್ರತಿಕ್ರಿಯೆ ಸಿಕ್ಕಿದೆ. ಈಗ ಟ್ರೇಲರ್​ ನೋಡುವ ಸಮಯ ಹತ್ತಿರ ಆಗಿದೆ. ಇಷ್ಟು ದಿನಗಳ ಕಾಲ ಟ್ರೇಲರ್​ ಬಿಡುಗಡೆ ದಿನಾಂಕದ ಬಗ್ಗೆ ಅಂತೆ-ಕಂತೆಗಳು ಕೇಳಿಬಂದಿದ್ದವು. ನವೆಂಬರ್​ 15ಕ್ಕೆ ಟ್ರೇಲರ್ ಅನಾವರಣ ಆಗಲಿದೆ ಎಂದು ಕೆಲವರು ಗಾಸಿಪ್ ಹಬ್ಬಿದಿದ್ದರು. ಆದರೆ ಈಗ ಸ್ವತಃ ಅಲ್ಲು ಅರ್ಜುನ್ ಅವರು ಪಕ್ಕಾ ಡೇಟ್ ತಿಳಿಸಿದ್ದಾರೆ. ನವೆಂಬರ್​ 17ರಂದು ‘ಪುಷ್ಪ 2’ ಸಿನಿಮಾದ ಟ್ರೇಲರ್​ ರಿಲೀಸ್ ಆಗಲಿದೆ.

‘ಪುಷ್ಪ 2’ ಸಿನಿಮಾದ ಟ್ರೇಲರ್​ ರಿಲೀಸ್​ ದಿನಾಂಕದ ಬಗ್ಗೆ ಮಾಹಿತಿ ನೀಡಲು ಹೊಸ ಪೋಸ್ಟರ್ ಹಂಚಿಕೊಳ್ಳಲಾಗಿದೆ. ಇದರಲ್ಲಿ ಅಲ್ಲು ಅರ್ಜುನ್ ಅವರು ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಹೆಗಲ ಮೇಲೆ ಬಂದೂಕು ಹಿಡಿದು ಬರುತ್ತಿರುವ ರೀತಿಯಲ್ಲಿ ಅವರು ಪೋಸ್ ನೀಡಿದ್ದಾರೆ. ಈ ಪೋಸ್ಟರ್ ಕೂಡ ಭಾರಿ ಕೌತುಕ ಕೆರಳಿಸುವಲ್ಲಿ ಯಶಸ್ವಿ ಆಗಿದೆ.

ನವೆಂಬರ್​ 17ರಂದು ಸಂಜೆ 6 ಗಂಟೆ 3 ನಿಮಿಷಕ್ಕೆ ‘ಪುಷ್ಪ 2’ ಸಿನಿಮಾದ ಟ್ರೇಲರ್​ ಬಿಡುಗಡೆ ಆಗಲಿದೆ. ಕಥೆಯ ಬಗ್ಗೆ ಅಭಿಮಾನಿಗಳಿಗೆ ಒಂದು ಐಡಿಯಾ ಸಿಗಲಿದೆ. ನಿರ್ದೇಶಕ ಸುಕುಮಾರ್​ ಅವರು ಸಾಕಷ್ಟು ಸಮಯ ತೆಗೆದುಕೊಂಡು ಈ ಸಿನಿಮಾವನ್ನು ಮಾಡಿದ್ದಾರೆ. ಕೊನೇ ಹಂತದ ಕೆಲಸಗಳು ನಡೆಯುತ್ತಿವೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಅಬ್ಬರಿಸಲಿದೆ.

ಇದನ್ನೂ ಓದಿ: ‘ರಾಷ್ಟ್ರ ಪ್ರಶಸ್ತಿ ವಿಚಾರದಲ್ಲಿ ನೋವಾಗಿತ್ತು’: ಬಾಲಯ್ಯ ಎದುರು ಅಲ್ಲು ಅರ್ಜುನ್ ಮಾತು

ಡಿಸೆಂಬರ್​ 5ರಂದು ‘ಪುಷ್ಪ 2’ ಸಿನಿಮಾ ಬಿಡುಗಡೆ ಆಗಲಿದೆ. ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ ಮುಂತಾದ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ರಶ್ಮಿಕಾ ಮಂದಣ್ಣ ಅವರು ನಾಯಕಿಯಾಗಿ ನಟಿಸಿದ್ದು, ಅವರ ವೃತ್ತಿ ಜೀವನಕ್ಕೆ ಈ ಸಿನಿಮಾದಿಂದ ದೊಡ್ಡ ಮೈಲೇಜ್ ಸಿಗುವ ನಿರೀಕ್ಷೆ ಇದೆ. ಡಾಲಿ ಧನಂಜಯ್, ಫಹಾದ್ ಫಾಸಿಲ್ ಮುಂತಾದ ಕಲಾವಿದರು ಕೂಡ ಬಣ್ಣ ಹಚ್ಚಿದ್ದಾರೆ. ನವೆಂಬರ್​ 17ರಂದು ಬಿಡುಗಡೆ ಆಗಲಿರುವ ಟ್ರೇಲರ್​ 24 ಗಂಟೆಗಳಲ್ಲಿ ಎಷ್ಟು ಮಿಲಿಯನ್ ವೀಕ್ಷಣೆ ಕಾಣಲಿದೆ ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:02 pm, Mon, 11 November 24

ಎಚ್ಚರ, ದಕ್ಷಿಣ ದಿಕ್ಕಿಗೆ ತಿರುಗಿ ನಮಸ್ಕಾರ ಮಾಡಲೇಬಾರದು! ಕಾರಣ ಇಲ್ಲಿದೆ
ಎಚ್ಚರ, ದಕ್ಷಿಣ ದಿಕ್ಕಿಗೆ ತಿರುಗಿ ನಮಸ್ಕಾರ ಮಾಡಲೇಬಾರದು! ಕಾರಣ ಇಲ್ಲಿದೆ
ಮಕರ ರಾಶಿಗೆ ಶುಕ್ರ ಪ್ರವೇಶ: ಈ ದಿನದ ರಾಶಿ ಭವಿಷ್ಯ ಹೇಗಿದೆ ನೋಡಿ
ಮಕರ ರಾಶಿಗೆ ಶುಕ್ರ ಪ್ರವೇಶ: ಈ ದಿನದ ರಾಶಿ ಭವಿಷ್ಯ ಹೇಗಿದೆ ನೋಡಿ
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ