ಸೊಂಟಪಟ್ಟಿಯಿಂದ ಬಿಗ್ ಬಾಸ್ ಸ್ಪರ್ಧಿಗಳಿಗೆ ಶುರುವಾಯ್ತು ಹೊಸ ತಲೆಬಿಸಿ
ಬಿಗ್ ಬಾಸ್ ಮನೆಯಲ್ಲಿ ಹೊಸ ನಿಯಮ ಮಾಡಲಾಗಿದೆ. ಎಲ್ಲ ಸ್ಪರ್ಧಿಗಳು ಸೊಂಟಪಟ್ಟಿ ಕಟ್ಟಿಕೊಂಡು ಜೋಡಿಯಾಗಿಯೇ ಇರಬೇಕು. ಶೌಚಾಲಯಕ್ಕೆ ತೆರಳುವಾಗ ಮತ್ತು ರಾತ್ರಿ ನಿದ್ರೆ ಮಾಡುವಾಗ ಹೊರತುಪಡಿಸಿ ಇನ್ನುಳಿದ ಎಲ್ಲ ಸಂದರ್ಭದಲ್ಲೂ ಜೋಡಿಯಾಗಿ ಇರಬೇಕು ಎಂದು ಬಿಗ್ ಬಾಸ್ ಆದೇಶಿಸಿದ್ದಾರೆ. ಈ ನಿಯಮದಿಂದಾಗಿ ದೊಡ್ಮನೆಯ ಸದಸ್ಯರಿಗೆ ತಲೆಬಿಸಿ ಹೆಚ್ಚಾಗಿದೆ.
ಧನರಾಜ್-ಮೋಕ್ಷಿತಾ, ಹನುಮಂತ-ಗೌತಮಿ, ಸುರೇಶ್-ಅನುಷಾ, ಚೈತ್ರಾ-ಶಿಶಿರ್, ಐಶ್ವರ್ಯಾ-ಧರ್ಮ, ಮಂಜು-ಭವ್ಯಾ ಅವರು ಬಿಗ್ ಬಾಸ್ ಮನೆಯಲ್ಲಿ ಜೋಡಿಗಳಾಗಿದ್ದಾರೆ. ಈ ಜೋಡಿಗಳು ಸೊಂಟಪಟ್ಟಿ ಕಟ್ಟಿಕೊಂಡು ಜೊತೆಯಲ್ಲೇ ಇರಬೇಕು. ಮುಂದಿನ ಆದೇಶ ಬರುವವರೆಗೂ ಈ ನಿಯಮವನ್ನು ಪಾಲಿಸಬೇಕು. ಕ್ಯಾಪ್ಟನ್ ತ್ರಿವಿಕ್ರಮ್ ಅವರು ನಿಯಮಗಳನ್ನು ಓದಿ ಹೇಳಿದ್ದಾರೆ. ಅದನ್ನು ಕೇಳಿ ಎಲ್ಲರಿಗೂ ಶಾಕ್ ಆಗಿದೆ. ನವೆಂಬರ್ 11ರಂದು ಈ ಸಂಚಿಕೆ ಪ್ರಸಾರ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos