ಪಾಟ್ನಾದಲ್ಲಿ ಡಿಜಿಪಿ ಮನೆ ಬಳಿಯೇ ತನಿಷ್ಕ್ ಶೋರೂಮ್‌ನಲ್ಲಿ 5 ಲಕ್ಷ ಮೌಲ್ಯದ ಆಭರಣ ದರೋಡೆ
ಪಾಟ್ನಾದಲ್ಲಿ ಡಿಜಿಪಿ ನಿವಾಸಕ್ಕಿಂತ 200 ಮೀಟರ್ ದೂರದಲ್ಲಿಯೇ 4 ದರೋಡೆಕೋರರು 3.5 ಲಕ್ಷ ರೂ. ಮೌಲ್ಯದ ಆಭರಣಗಳನ್ನು ದೋಚಿದ್ದಾರೆ. ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ದರೋಡೆಕೋರರು ಕೇವಲ 1 ನಿಮಿಷ ಮತ್ತು 40 ಸೆಕೆಂಡ್ಗಳಲ್ಲಿ ಶೋ ರೂಂ ಅನ್ನು ಲೂಟಿ ಮಾಡಿದ್ದಾರೆ. ಕಂಕರ್‌ಬಾಗ್‌ನ ಕಾಲೋನಿ ಮೋರ್ ಪ್ರದೇಶದಲ್ಲಿರುವ ತನಿಷ್ಕ್ ಶೋರೂಮ್‌ನಲ್ಲಿ ದರೋಡೆ ನಡೆದಿದೆ.
ಪಾಟ್ನಾ: ನಾಲ್ವರು ಶಸ್ತ್ರಸಜ್ಜಿತ ವ್ಯಕ್ತಿಗಳು ಶನಿವಾರ ಪಾಟ್ನಾದ ತನಿಷ್ಕ್ ಶೋರೂಮ್ ಅನ್ನು ದರೋಡೆ ಮಾಡಿದ್ದಾರೆ. ಇದು ಪಾಟ್ನಾದ ಪೊಲೀಸ್ ಮಹಾನಿರ್ದೇಶಕರ ನಿವಾಸದಿಂದ ಕೇವಲ 200 ಮೀಟರ್ ದೂರದಲ್ಲಿದೆ. ಅಪರಾಧಿಗಳು ಪರಾರಿಯಾಗುವ ಮೊದಲು 5 ಲಕ್ಷ ರೂ. ಮೌಲ್ಯದ ಆಭರಣಗಳು ಮತ್ತು 50,000 ರೂ. ನಗದು ಮತ್ತು ಉದ್ಯೋಗಿಗಳ 6 ಮೊಬೈಲ್ ಫೋನ್‌ಗಳನ್ನು ಕದ್ದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Nov 11, 2024 06:23 PM
Latest Videos