ಅರ್ಕಾವತಿ ನದಿಗೆ ತ್ಯಾಜ್ಯ ಸುರಿದವರನ್ನು ಹಿಡಿದು ತರಾಟೆಗೆ ತೆಗೆದುಕೊಂಡ ವಿನೋದ್ ರಾಜ್
ನೆಲಮಂಗಲದಲ್ಲಿನ ತ್ಯಾಜ್ಯ ವಿಲೇವಾರಿ ಮಾಫಿಯಾವನ್ನು ಬಯಲಿಗೆ ಎಳೆಯಲಾಗಿದೆ. ನಟ ವಿನೋದ್ ರಾಜ್ ಅವರು ದಂಧೆಕೋರರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ರಾತ್ರೋರಾತ್ರಿ ತ್ಯಾಜ್ಯವನ್ನು ತಂದು ಅರ್ಕಾವತಿ ನದಿಗೆ ಸುರಿಯಲಾಗುತ್ತಿತ್ತು. ಆ ವೇಳೆ ಜನರು ತಡೆದು ನಿಲ್ಲಿಸಿದ್ದಾರೆ. ‘ಇನ್ಮುಂದೆ ಈ ರೀತಿ ಮಾಡಲ್ಲ’ ಎಂದು ತ್ಯಾಜ್ಯ ವಿಲೇವಾರಿ ವಾಹನದ ಚಾಲಕರು ಹೇಳಿದ್ದಾರೆ.
ಬೆಂಗಳೂರು ಹೊರವಲಯದಲ್ಲಿ ಸ್ಯಾನಿಟರಿ ತ್ಯಾಜ್ಯ ವಿಲೇವಾರಿ ಮಾಫಿಯಾ ನಡೆದಿದೆ. ತ್ಯಾಜ್ಯವನ್ನು ನೇರವಾಗಿ ಅರ್ಕಾವತಿ ನದಿಗೆ ಬಿಡುಗಡೆ ಮಾಡಲಾಗುತ್ತಿದೆ. ಖಾಸಗಿ ವಾಹನ ಮಾಲೀಕರಿಂದ ತ್ಯಾಜ್ಯ ವಿಲೇವಾರಿ ದಂಧೆ ನಡೆಯುತ್ತಿದ್ದು, ಅದನ್ನು ಸ್ಥಳೀಯರು ವಿರೋಧಿಸಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ನಾಗಸಂದ್ರ ಬಳಿಯ ಅರ್ಕಾವತಿ ನದಿಗೆ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದವರನ್ನು ತಡೆದು ನಟ ವಿನೋದ್ ರಾಜ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ನದಿಯ ಮೂಲಕ ತಿಪ್ಪಗೊಂಡನಹಳ್ಳಿ ಕೆರೆಗೆ ಕಲುಷಿತ ನೀರು ಸೇರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos