ಕೆಟ್ಟ ಘಟನೆ ಮರೆತು ಮುಂದೆ ಬಂದ ಅಲ್ಲು ಅರ್ಜುನ್; ಬನ್ಸಾಲಿ ಜೊತೆ ಸಿನಿಮಾ

|

Updated on: Jan 10, 2025 | 12:06 PM

ಅಲ್ಲು ಅರ್ಜುನ್ ಅವರು ಇತ್ತೀಚೆಗೆ ಸಂಜಯ್ ಲೀಲಾ ಬನ್ಸಾಲಿ ಅವರನ್ನು ಭೇಟಿಯಾಗಿದ್ದಾರೆ. ಬಹುನಿರೀಕ್ಷಿತ ಸಿನಿಮಾ ಸಹಯೋಗದ ಬಗ್ಗೆ ಮಾತುಕತೆ ನಡೆದಿರಬಹುದು ಎಂದು ಊಹಿಸಲಾಗಿದೆ. ಈ ಸುದ್ದಿ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಬನ್ಸಾಲಿ ಅವರ 'ಲವ್ ಆ್ಯಂಡ್ ವಾರ್' ಚಿತ್ರಕ್ಕೆ ಅಲ್ಲು ಅರ್ಜುನ್ ಅವರು ಸೇರಿಕೊಳ್ಳುವ ಸಾಧ್ಯತೆಯಿದೆ ಎಂಬ ಮಾತೂ ಇದೆ.

ಕೆಟ್ಟ ಘಟನೆ ಮರೆತು ಮುಂದೆ ಬಂದ ಅಲ್ಲು ಅರ್ಜುನ್; ಬನ್ಸಾಲಿ ಜೊತೆ ಸಿನಿಮಾ
ಕೆಟ್ಟ ಘಟನೆ ಮರೆತು ಮುಂದೆ ಬಂದ ಅಲ್ಲು ಅರ್ಜುನ್; ಬನ್ಸಾಲಿ ಜೊತೆ ಸಿನಿಮಾ
Follow us on

ಅಲ್ಲು ಅರ್ಜುನ್ ಅವರಿಗೆ ಇತ್ತೀಚೆಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿತ್ತು. ಅವರು ‘ಪುಷ್ಪ’ ಚಿತ್ರದ ನಟನೆಗೆ ರಾಷ್ಟ್ರ ಪ್ರಶಸ್ತಿ ಕೂಡ ಪಡೆದರು. ಆದರೆ, ರಾತ್ರೋ ರಾತ್ರಿ ಎಲ್ಲವೂ ನೀರಿನಲ್ಲಿ ಹೋಮ ಮಾಡಿದಂತೆ ಆಯಿತು. ‘ಪುಷ್ಪ 2’ ಚಿತ್ರದ ವೀಕ್ಷಣೆಗೆ ಅವರು ಹೈದರಾಬಾದ್​​ನ ಸಂಧ್ಯಾ ಥಿಯೇಟರ್​​ಗೆ ತೆರಳಿದ್ದರು. ಈ ವೇಳೆ ಉಂಟಾದ ಕಾಲ್ತುಳಿತದಲ್ಲಿ ಅವರ ಅಭಿಮಾನಿ ಮೃತಪಟ್ಟರು. ಈ ಪ್ರಕರಣದಲ್ಲಿ ಅಲ್ಲು ಅರ್ಜುನ್ ಬಂಧನ ಕೂಡ ಆಯಿತು. ಕಳೆದ ಒಂದು ತಿಂಗಳಿಂದ ಅಲ್ಲು ಅರ್ಜುನ್ ಸಾಕಷ್ಟು ಕಂಡಿದ್ದಾರೆ. ಈಗ ಅವರು ಇದೆಲ್ಲವನ್ನೂ ಮರೆತು ಮುಂದಕ್ಕೆ ಸಾಗುವ ಆಲೋಚನೆಯಲ್ಲಿ ಇದ್ದಾರೆ.

ಅಲ್ಲು ಅರ್ಜುನ್ ಹಾಗೂ ಬಾಲಿವುಡ್​ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಈ ಮೊದಲಿನಿಂದಲೂ ಚರ್ಚೆಯಲ್ಲಿ ಇತ್ತು. ಆದರೆ, ಯಾವ ವಿಚಾರವೂ ಫೈನಲ್ ಆಗಿರಲಿಲ್ಲ. ಆ ಬಳಿಕ ಸುದ್ದಿ ತಣ್ಣಗಾಗಿತ್ತು. ಈಗ ಅಲ್ಲು ಅರ್ಜುನ್ ಅವರು ಬನ್ಸಾಲಿನ ಭೇಟಿ ಮಾಡಿದ್ದಾರೆ.

ಅಲ್ಲು ಅರ್ಜುನ್ ಅವರು ಇತ್ತೀಚೆಗೆ ಮುಂಬೈಗೆ ತೆರಳಿದ್ದರು. ಬನ್ಸಾಲಿ ಕಚೇರಿಯಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದಾರೆ. ಸಿನಿಮಾ ಬಗ್ಗೆ ಇವರು ಮಾತುಕತೆ ನಡೆಸಿರಬಹುದು ಎಂದು ಅನೇಕರು ಊಹಿಸಿದ್ದಾರೆ. ಸದ್ಯ ಬನ್ಸಾಲಿ ಅವರು ‘ಲವ್ ಆ್ಯಂಡ್ ವಾರ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈಗ ಅಲ್ಲು ಅರ್ಜುನ್ ಮಾತುಕತೆ ನಡೆಸುತ್ತಿರುವುದು ಇದೇ ಚಿತ್ರಕ್ಕೋ ಅಥವಾ ಇದು ಬೇರೆಯದೇ ಸಿನಿಮಾ ಆಗಿರಲಿದೆಯೇ ಎನ್ನುವ ಕುತೂಹಲ ಇದೆ.

ಇದನ್ನೂ ಓದಿ: ‘ನಾನಿದ್ದೇನೆ’; ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿಗೆ ಭರವಸೆ ನೀಡಿದ ಅಲ್ಲು ಅರ್ಜುನ್

ದಕ್ಷಿಣದ ಸ್ಟಾರ್ ಹೀರೋ ಜೊತೆ ಸಿನಿಮಾ ಮಾಡಬೇಕು ಎಂಬುದು ಬನ್ಸಾಲಿ ಅವರ ಕನಸಾಗಿತ್ತು. ಈ ಕನಸು ನನಸಾಗಿದೆ ಎಂದು ಕೆಲವರು ಮಾತನಾಡಿಕೊಂಡಿದ್ದಾರೆ. ಅಲ್ಲು ಅರ್ಜುನ್ ಅವರು ಈ ಮೊದಲು ಅಟ್ಲಿ ಜೊತೆ ಸಿನಿಮಾ ಮಾಡುತ್ತಾರೆ ಎಂದು ಸುದ್ದಿ ಆಗಿತ್ತು. ಆದರೆ, ಅದು ನಿಜವಾಗಿಲ್ಲ. ಈಗ ಅವರು ಬನ್ಸಾಲಿ ಜೊತೆ ಸಿನಿಮಾ ಮಾಡಿದ್ದೇ ಆದರೆ ಹೇಗಿರಲಿದೆ ಎಂಬ ಕುತೂಹಲ ಹೆಚ್ಚಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.