Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನಿದ್ದೇನೆ’; ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿಗೆ ಭರವಸೆ ನೀಡಿದ ಅಲ್ಲು ಅರ್ಜುನ್

ಡಿಸೆಂಬರ್ 4 ರಂದು ‘ಪುಷ್ಪ 2’ ಚಿತ್ರದ ಪ್ರೀಮಿಯರ್ ಶೋ ವೇಳೆ ಸಂಧ್ಯಾ ಥಿಯೇಟರ್‌ನಲ್ಲಿ ನೂಕುನುಗ್ಗಲು ಉಂಟಾಗಿ ರೇವತಿ ಎಂಬ ಮಹಿಳೆ ಸಾವನ್ನಪ್ಪಿದ್ದರು. ಇದೇ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಬಾಲಕ ಶ್ರೀತೇಜ್ ಕಳೆದ 35 ದಿನಗಳಿಂದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ನೋಡಿ ಹೋಗಲು ಅಲ್ಲು ಅರ್ಜುನ್ ಬಂದಿದ್ದಾರೆ.

‘ನಾನಿದ್ದೇನೆ’; ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿಗೆ ಭರವಸೆ ನೀಡಿದ ಅಲ್ಲು ಅರ್ಜುನ್
Allu Arjun (35)
Follow us
ರಾಜೇಶ್ ದುಗ್ಗುಮನೆ
|

Updated on:Jan 07, 2025 | 11:23 AM

ಹೈದರಾಬಾದ್​ನ ಸಂಧ್ಯಾ ಥಿಯೇಟರ್​​ನ ಕಾಲ್ತುಳಿತ ಘಟನೆ ನಡೆದು ತಿಂಗಳೇ ಕಳೆದಿದೆ. ಈ ಘಟನೆಯಿಂದ ಅಲ್ಲು ಅರ್ಜುನ್​ಗೆ ಸಾಕಷ್ಟು ತೊಂದರೆ ಆಗಿದೆ. ಕಾಲ್ತತುಳಿದಲ್ಲಿ ಅಲ್ಲು ಅರ್ಜುನ್ ಅಭಿಮಾನಿ ರೇವತಿ ಮೃತಪಟ್ಟಿದ್ದರು. ಅಲ್ಲದೆ, ಅವರ ಮಗ ಶ್ರೀತೇಜ್ ಗಾಯಗೊಂಡಿದ್ದರು. ಈಗ ಆಸ್ಪತ್ರೆಯಲ್ಲಿರುವ ಶ್ರೀತೇಜ್​ನ ಅಲ್ಲು ಅರ್ಜುನ್ ಭೇಟಿ ಮಾಡಿ ಸಮಾಧಾನ ಹೇಳಿದ್ದಾರೆ. ಅವರಿಗೆ ಭರವಸೆ ತುಂಬಿದ್ದಾರೆ.

‘ಪುಷ್ಪ 2’ ಚಿತ್ರದ ಪ್ರೀಮಿಯರ್​ ನೋಡಲು ಅಲ್ಲು ಅರ್ಜುನ್ ಸಂಧ್ಯಾ ಥಿಯೇಟರ್​ಗೆ ತೆರಳಿದ್ದರು. ಅವರಿಗೆ ಒಪ್ಪಿಗೆ ನಿರಾಕರಸಿದರೂ ಅವರು ಬಂದಿದ್ದು ಏಕೆ ಎಂಬ ಪ್ರಶ್ನೆ ಮೂಡಿತ್ತು. ಅಲ್ಲು ಅರ್ಜುನ್​ನ ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರಿಂದ ಕಾಲ್ತುಳಿತ ಉಂಟಾಗಿತ್ತು. ಆಗ ರೇವತಿ ಮೃತಪಟ್ಟರೆ ಅವರ ಮಗ ಶ್ರೀತೇಜ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಸಂಬಂಧ ಅಲ್ಲು ಅರ್ಜುನ್ ಬಂಧನಕ್ಕೆ ಒಳಗಾಗಿದ್ದರು. ಈಗ ಅಲ್ಲು ಅರ್ಜುನ್ ಗಾಯಾಳುವನ್ನು ಭೇಟಿ ಮಾಡಿದ್ದಾರೆ.

ಇಂದು (ಜನವರಿ 7) ಬೆಳಿಗ್ಗೆ 10 ಗಂಟೆ ಸುಮಾರಿಗೆ ಅಲ್ಲು ಅರ್ಜುನ್ ಅವರು ಸಿಕಂದರಾಬಾದ್‌ನ ಕಿಮ್ಸ್ ಆಸ್ಪತ್ರೆಗೆ ಬಂದಿದ್ದಾರೆ. ಸಂಧ್ಯಾ ಥಿಯೇಟರ್ ಕಾಲ್ತುಳಿತ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಶ್ರೀತೇಜ್​ನ ಭೇಟಿ ಮಾಡಿದ್ದಾರೆ. ಅಲ್ಲು ಅರ್ಜುನ್ ಅವರು ವೈದ್ಯರ ಬಳಿ ಶ್ರೀತೇಜ್ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಬಳಿಕ ಶ್ರೀತೇಜ್ ಮನೆಯವರಿಗೆ ಧೈರ್ಯ ತುಂಬಿ ಸ್ಥಳದಿಂದ ತೆರಳಿದ್ದಾರೆ.

ಇದನ್ನೂ ಓದಿ: ಗಾಯಗೊಂಡ ಬಾಲಕನ ಅಲ್ಲು ಅರ್ಜುನ್​ ಭೇಟಿಯಾಗದಂತೆ ತಡೆದ ಪೊಲೀಸರು

ಅಲ್ಲು ಅರ್ಜುನ್ ಜೊತೆಗೆ ತೆಲಂಗಾಣ FDC ಅಧ್ಯಕ್ಷ ಮತ್ತು ನಿರ್ಮಾಪಕ ದಿಲ್ ರಾಜು ಇದ್ದರು. ಮತ್ತೊಂದೆಡೆ ರಾಮ್ ಗೋಪಾಲ್ ಪೇಟ್ ಪೊಲೀಸರು ಆಸ್ಪತ್ರೆಯಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದರು. ಈ ಮೊದಲು ಅಲ್ಲು ಅರ್ಜುನ್ ಆಸ್ಪತ್ರೆಗೆ ಭೇಟಿ ನೀಡುವ ಆಶಯ ವ್ಯಕ್ತಪಡಿಸಿದ್ದರು. ಆದರೆ, ಇದಕ್ಕೆ ಪೊಲೀಸರು ಒಪ್ಪಿಗೆ ಕೊಟ್ಟಿರಲಿಲ್ಲ. ಈಗ ಪೊಲೀಸರ ಒಪ್ಪಿಗೆ ಪಡೆದು ಆಸ್ಪತ್ರೆಗೆ ಬಂದಿದ್ದಾರೆ.

ಅಲ್ಲು ಅರ್ಜುನ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆ ಬಳಿಕ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಅದರ ನಂತರ, ನಾಂಪಲ್ಲಿ ನ್ಯಾಯಾಲಯ ಇತ್ತೀಚೆಗೆ ಬನ್ನಿಗೆ ಜಾಮೀನು ಮಂಜೂರು ಮಾಡಿದೆ. ಈ ಬೆನ್ನಲ್ಲೇ ಅಲ್ಲು ಅರ್ಜುನ್ ಇಂದು ಬೆಳಗ್ಗೆ 10 ಗಂಟೆಗೆ ರಾಮ್ ಗೋಪಾಲ್ ಪೇಟ ಪೊಲೀಸರ ಅನುಮತಿ ಪಡೆದು ಶ್ರೀತೇಜ್ ಆರೋಗ್ಯ ಸ್ಥಿತಿ ತಿಳಿಯಲು ಕಿಮ್ಸ್ ಆಸ್ಪತ್ರೆಗೆ ತೆರಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:03 am, Tue, 7 January 25