ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ

ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ

ರಾಜೇಶ್ ದುಗ್ಗುಮನೆ
|

Updated on: Jan 07, 2025 | 8:20 AM

ಬಿಗ್ ಬಾಸ್​ನಲ್ಲಿ ಈ ವಾರ ‘ಟಿಕೆಟ್ ಟು ಫಿನಾಲೆ’ ಟಾಸ್ಕ್ ಮಾಡಿದ್ದಾರೆ. ಇದಕ್ಕಾಗಿ ಸ್ಪರ್ಧಿಗಳ ಮಧ್ಯೆ ಯುದ್ಧಗಳೇ ನಡೆಯುವ ಸೂಚನೆ ಸಿಕ್ಕಿದೆ. ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ಜೋರಾದಂತೆ ಆಟದ ವೈಖರಿಯೂ ಬದಲಾಗಿದೆ. ಅದರಲ್ಲೂ ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ಜಗಳ ಮಿತಿ ಮೀರಿದೆ.

ಟಾಸ್ಕ್ ಆಡುವಾಗ ಮುಖಕ್ಕೆ ಏಟು ಬಿತ್ತು ಎಂದು ತ್ರಿವಿಕ್ರಂ ಅವರು ಮಂಜು ವಿರುದ್ಧ ಆರೋಪ ಮಾಡಿದ್ದಾರೆ. ಈ ಆರೋಪದಿಂದ ಮಂಜು ಹಾಗೂ ತ್ರಿವಿಕ್ರಂ ಮಧ್ಯೆ ಚರ್ಚೆ ಆರಂಭ ಆಗಿದೆ. ಇದು ಫಿನಾಲೆ ಟಿಕೆಟ್ ಪಡೆಯೋ ಟಾಸ್ಕ್ ಆಗಿರುವುದರಿಂದ ಎಲ್ಲರೂ ಸಾಕಷ್ಟು ಅಗ್ರೆಷನ್ ತೋರಿಸುತ್ತಿದ್ದಾರೆ. ಸ್ಪರ್ಧಿಗಳ ಮಧ್ಯೆ ಫೈಟ್ ಜೋರಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.