ಅಲ್ಲು ಅರ್ಜುನ್ ಅವರು ಸ್ಟಾರ್ ಹೀರೋ ಆಗಿದ್ದಾರೆ. ಅವರಿಗೆ ಸಖತ್ ಜನಪ್ರಿಯತೆ ಇದೆ. ಕೇವಲ ಕರ್ನಾಟಕ ಮಾತ್ರವಲ್ಲದೆ ಭಾರತಾದ್ಯಂತ ಅವರಿಗೆ ಫ್ಯಾನ್ಸ್ ಇದ್ದಾರೆ. ಆರಂಭದಲ್ಲಿ ಅವರಿಗೆ ಆಫರ್ಗಳೇ ಬರುತ್ತಿರಲಿಲ್ಲವಂತೆ. ಈ ಬಗ್ಗೆ ಅಲ್ಲು ಅರ್ಜುನ್ ಓಪನ್ ಆಗಿ ಹೇಳಿಕೊಂಡಿದ್ದಾರೆ. ಅಲ್ಲದೆ ಈ ಸಂದರ್ಭದಲ್ಲಿ ಸಹಾಯಕ್ಕೆ ಬಂದಿದ್ದು ಸುಕುಮಾರ್ ಎಂಬುದನ್ನು ಹೇಳೋಕೆ ಅಲ್ಲು ಅರ್ಜುನ್ ಮರೆತಿಲ್ಲ.
ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಮೊದಲ ಬಾರಿ ಒಂದಾಗಿದ್ದು ‘ಆರ್ಯ’ ಸಿನಿಮಾದಲ್ಲಿ. ಇದು ಅಲ್ಲು ಅರ್ಜುನ್ ಅವರ ಎರಡನೇ ಸಿನಿಮಾ ಆಗಿತ್ತು. ಸುಕುಮಾರ್ಗೆ ಮೊದಲ ಸಿನಿಮಾ ಆಗಿತ್ತು. ಈ ಚಿತ್ರ ರಿಲೀಸ್ ಆಗಿದ್ದು 2004ರಲ್ಲಿ. ಈ ಸಿನಿಮಾ ಸೂಪರ್ ಹಿಟ್ ಆಯಿತು. 2009ರಲ್ಲಿ ‘ಆರ್ಯ 2’ ಚಿತ್ರಕ್ಕಾಗಿ ಒಂದಾದರು. 2021ರಲ್ಲಿ ರಿಲೀಸ್ ಆದ ‘ಪುಷ್ಪ’ ಚಿತ್ರಕ್ಕೆ ಇವರು ಒಂದಾದರು. ಈಗ ನಾಲ್ಕನೇ ಬಾರಿಗೆ ಇವರು ಒಂದಾಗಿದ್ದಾರೆ. ಈ ವೇಳೆ ಆರಂಭದ ದಿನಗಳ ಬಗ್ಗೆ ಅಲ್ಲು ಅರ್ಜುನ್ ಮಾತನಾಡಿದ್ದಾರೆ.
ಚೆನ್ನೈನಲ್ಲಿ ‘ಪುಷ್ಪ 2’ ಈವೆಂಟ್ ನಡೆದಿದೆ. ಈ ವೇಳೆ ಮಾತನಾಡಿದ ಅಲ್ಲು ಅರ್ಜುನ್, ‘ಗಂಗೋತ್ರಿ ಸಿನಿಮಾ ಮೂಲಕ ನಾನು ಚಿತ್ರರಂಗಕ್ಕೆ ಕಾಲಿಟ್ಟೆ. ನಿರ್ದೇಶಕ ರಾಘವೇಂದ್ರ ರಾವ್ ಸೂಪರ್ ಹಿಟ್ ಆದರು. ಆದರೆ, ನಟನಾಗಿ ನಾನು ನಟನಾಗಿ ಯಶಸ್ಸು ಕಾಣಲಿಲ್ಲ’ ಎಂದಿದ್ದಾರೆ ಅವರು.
‘ಸಿನಿಮಾ ರಿಲೀಸ್ ಆದ ಬಳಿಕ ನನ್ನ ಜೊತೆ ಕೆಲಸ ಮಾಡಲು ಬರಲೇ ಇಲ್ಲ. ಆದರೆ, ಹೊಸ ನಿರ್ದೇಶಕ ಬಂದು ನನಗೆ ಆರ್ಯ ಸಿನಿಮಾದಲ್ಲಿ ಕೆಲಸ ಮಾಡಲು ಆಫರ್ ಕೊಟ್ಟರು. ಅದಾದ ಬಳಿಕ ನಾನು ತಿರುಗಿ ನೋಡಲೇ ಇಲ್ಲ’ ಎಂದಿದ್ದಾರೆ ಅವರು.
‘ನಾನು ನನ್ನ ಕರಿಯರ್ನ ಹಿಂದಿರುಗಿ ನೋಡಿದಾಗ ಓರ್ವ ವ್ಯಕ್ತಿ ನನ್ನ ಮೇಲೇ ತುಂಬಾನೇ ಪರಿಣಾಮ ಬೀರಿದ್ದಾರೆ. ಆ ವ್ಯಕ್ತಿ ಸುಕುಮಾರ್. ಅವರನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ. ನಾವು ಈ ಪ್ರಯಾಣದಲ್ಲಿ ಒಟ್ಟಿಗೆ ಇದ್ದೇವೆ’ ಎಂದಿದ್ದಾರೆ ಅವರು.
ಇದನ್ನೂ ಓದಿ: ಕಟೌಟ್ ನಿರ್ಮಾಣದಲ್ಲೂ ಅಲ್ಲು ಅರ್ಜುನ್ ಫ್ಯಾನ್ಸ್ ದಾಖಲೆ; ತಲೆ ಎತ್ತಿತು 108 ಅಡಿ ಕಟೌಟ್
ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಮಧ್ಯೆ ಯಾವುದೂ ಸರಿ ಇಲ್ಲ ಎಂದು ಹೇಳಲಾಗಿತ್ತು. ಆದರೆ, ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಮಧ್ಯೆ ಒಳ್ಳೆಯ ಗೆಳೆತನ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:47 pm, Mon, 25 November 24