AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭಿಮಾನಿಗಳು ಇಟ್ಟ ಹೆಸರೇ ಅಂತಿಮವಾಯ್ತೆ ಎನ್​​ಟಿಆರ್-ನೀಲ್ ಸಿನಿಮಾಕ್ಕೆ?

Jr NTR and Prashanth Neel: ಜೂ ಎನ್​​ಟಿಆರ್-ಪ್ರಶಾಂತ್ ನೀಲ್ ಸಿನಿಮಾದ ಹೆಸರನ್ನು ಚಿತ್ರತಂಡ ಘೋಷಣೆ ಮಾಡಿಲ್ಲ, ಆದರೆ ಅಭಿಮಾನಿಗಳು ಈ ಸಿನಿಮಾವನ್ನು ‘ಡ್ರ್ಯಾಗನ್’ ಎಂದು ಕರೆಯುತ್ತಿದ್ದಾರೆ. ಅಭಿಮಾನಿಗಳು ಇಟ್ಟ ಈ ಹೆಸರನ್ನೇ ಸಿನಿಮಾಕ್ಕೆ ಅಂತಿಮಗೊಳಿಸಲು ಚಿತ್ರತಂಡ ಯೋಜಿಸಿದಂತಿದೆ. ಇದರ ಸುಳಿವು ಸಹ ಅಭಿಮಾನಿಗಳಿಗೆ ಸಿಕ್ಕಿದೆ.

ಅಭಿಮಾನಿಗಳು ಇಟ್ಟ ಹೆಸರೇ ಅಂತಿಮವಾಯ್ತೆ ಎನ್​​ಟಿಆರ್-ನೀಲ್ ಸಿನಿಮಾಕ್ಕೆ?
Jr Ntr Neel
ಮಂಜುನಾಥ ಸಿ.
|

Updated on: May 17, 2026 | 2:41 PM

Share

ಜೂ ಎನ್​​ಟಿಆರ್ (Jr NTR) ನಟಿಸಿ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದ ಕೆಲಸಗಳು ಬಲು ನಿಧಾನಗತಿಯಲ್ಲಿ ಸಾಗುತ್ತಿವೆ. ಭಾರಿ ಬಜೆಟ್​ನ ಈ ಸಿನಿಮಾದ ಚಿತ್ರೀಕರಣ ಆರಂಭವಾಗಿ ಈಗಾಗಲೇ ಒಂದು ವರ್ಷವಾಗಿದ್ದು, ಸಿನಿಮಾದ ಚಿತ್ರೀಕರಣಕ್ಕೆ ಇನ್ನೂ ಒಂದು ವರ್ಷ ಬೇಕಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಸಿನಿಮಾದ ಹೆಸರನ್ನು ಸಹ ಚಿತ್ರತಂಡ ಘೋಷಣೆ ಮಾಡಿಲ್ಲ, ಆದರೆ ಅಭಿಮಾನಿಗಳು ಈ ಸಿನಿಮಾವನ್ನು ‘ಡ್ರ್ಯಾಗನ್’ ಎಂದು ಕರೆಯುತ್ತಿದ್ದಾರೆ. ಅಭಿಮಾನಿಗಳು ಇಟ್ಟ ಈ ಹೆಸರನ್ನೇ ಸಿನಿಮಾಕ್ಕೆ ಅಂತಿಮಗೊಳಿಸಲು ಚಿತ್ರತಂಡ ಯೋಜಿಸಿದಂತಿದೆ. ಇದರ ಸುಳಿವು ಸಹ ಅಭಿಮಾನಿಗಳಿಗೆ ಸಿಕ್ಕಿದೆ.

ಜೂ ಎನ್​​ಟಿಆರ್-ನೀಲ್ ಸಿನಿಮಾದ ಅಪ್​​ಡೇಟ್ ಒಂದು ನಟನ ಹುಟ್ಟುಹಬ್ಬದ ದಿನ ಬಿಡುಗಡೆ ಆಗಲಿದೆ. ಮೇ 20ರಂದು ಜೂ ಎನ್​​​ಟಿಆರ್ ಹುಟ್ಟುಹಬ್ಬವಿದ್ದು ಆ ದಿನದಂದು ಸಿನಿಮಾದ ಗ್ಲಿಂಪ್ಸ್ ಒಂದನ್ನು ಬಿಡುಗಡೆ ಮಾಡಲಿದೆ ಚಿತ್ರತಂಡ. ಇದಕ್ಕಾಗಿ ಸೆನ್ಸಾರ್ ಮಂಡಳಿಗೆ ಅರ್ಜಿ ಸಲ್ಲಿಸಿದ್ದು, ಆ ಅರ್ಜಿಯ ಫೋಟೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದೆ. ಅರ್ಜಿಯಲ್ಲಿ ಸಿನಿಮಾದ ಹೆಸರು ‘ಡ್ರ್ಯಾಗನ್’ ಎಂದು ನಮೂದಿಸಲಾಗಿದೆ.

ಇದನ್ನೂ ಓದಿ:ವಾರ್ 2 ಟ್ವಿಟ್ಟರ್ ವಿಮರ್ಶೆ: ಹೇಗಿದೆ ಜೂ ಎನ್​ಟಿಆರ್-ಹೃತಿಕ್ ರೋಷನ್ ಜುಗಲ್​ಬಂಧಿ

ಸಿನಿಮಾದ ಟೀಸರ್ ಒಂದನ್ನು ಮೇ 20ರಂದು ಚಿತ್ರತಂಡ ಬಿಡುಗಡೆ ಮಾಡಲಿದೆ. ಅದಕ್ಕಾಗಿ ಸಲ್ಲಿಸಿರುವ ಅರ್ಜಿಯಲ್ಲಿ ಸಿನಿಮಾದ ಹೆಸರನ್ನು ‘ಡ್ರ್ಯಾಗನ್’ ಎಂದೇ ನಮೂದಿಸಿದ್ದು, ಇದು ಅಭಿಮಾನಿಗಳಿಗೆ ಇನ್ನಿಲ್ಲದ ಸಂತಸ ಮೂಡಿಸಿದೆ. ಏಕೆಂದರೆ ಅಭಿಮಾನಿಗಳು ಇಟ್ಟ ಹೆಸರನ್ನೇ ಚಿತ್ರತಂಡ ತಮ್ಮ ಸಿನಿಮಾಕ್ಕೆ ಇರಿಸಿ, ಅಭಿಮಾನಿಗಳ ಮಾತಿಗೆ ಗೌರವ ನೀಡಿದೆ. ಇದರ ಜೊತೆಗೆ ಟೀಸರ್​​ನ ಅವಧಿ ಸಹ ಗಮನ ಸೆಳೆದಿದ್ದು, 4:35 ನಿಮಿಷದ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಲು ಮುಂದಾಗಿದೆ.

ಜೂ ಎನ್​​ಟಿಆರ್ ಮತ್ತು ನೀಲ್ ಅವರ ಸಿನಿಮಾ ಪಕ್ಕಾ ಆಕ್ಷನ್ ಸಿನಿಮಾ ಆಗಿದ್ದು, ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾ ಎರಡು ಭಾಗಗಳಲ್ಲಿ ನಿರ್ಮಾಣ ಆಗುತ್ತಿದ್ದು, ಎರಡೂ ಭಾಗಗಳ ಚಿತ್ರೀಕರಣವನ್ನು ಏಕಕಾಲದಲ್ಲಿ ಮುಗಿಸುತ್ತಿದ್ದಾರೆ ನೀಲ್. ಅಂದಹಾಗೆ ಸಿನಿಮಾನಲ್ಲಿ ಕನ್ನಡದ ನಟಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಆಗಸ್ಟ್ ವೇಳೆಗೆ ಬಿಡುಗಡೆ ಆಗುವ ಸಾಧ್ಯತೆ ಇದೆ. ಮೇ 20 ರಂದು ಸಿನಿಮಾದ ಟೀಸರ್ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More